ದುಬೈ ಓಪನ್: ಎರಡನೇ ಸುತ್ತಿನಲ್ಲಿ ಸಾನಿಯಾ-ಗಾರ್ಸಿಯಾ ಜೋಡಿಗೆ ಸೋಲು
ದುಬೈ, ಫೆ 20 ,ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಇಲ್ಲಿನ ನಡೆಯುತ್ತಿರುವ ದುಬೈ ಓಪನ್ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.ಮೊದಲನೇ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ವಿಶ್ವಾಸದಿಂದ ಕಣಕ್ಕೆ ಇಳಿದಿದ್ದ ಸಾನಿಯಾ ಮಿರ್ಜಾ ಹಾಗೂ ಫ್ರೆಂಚ್ ಜತೆಗಾರ್ತಿ ಕರೋಲಿನ್ ಗಾರ್ಸಿಯಾ ಜೋಡಿ ನೀರಸ ಪ್ರದರ್ಶನ ತೋರುವ ಮೂಲಕ 2-6, 4-6 ಅಂತರದಲ್ಲಿ ಚೀನಾದ ಸೈಸಾಯ್ ಝೆಂಗ್ ಮತ್ತು ಜೆಕ್ ಗಣರಾಜ್ಯದ ಬರ್ಬೋರಾ ಜೋಡಿಯ ವಿರುದ್ಧ ಸೋತು ನಿರಾಸೆ ಅನುಭವಿಸಿತು. ಇದಕ್ಕೂ ಮುನ್ನ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಾನಿಯಾ-ಗಾರ್ಸಿಯಾ ಜೋಡಿ 6-4, 4-6, 10-8 ಅಂತರದಲ್ಲಿ ರಷ್ಯಾದ ಅಲ್ಲಾ ಕುದ್ರಿಯಾವತ್ಸವೆ ಮತ್ತು ಸ್ಲೊವೇನಿಯಾದ ಕಟಾರಿನಾ ಸ್ರೆಬೊಟ್ನಿಕ್ ಜೋಡಿಯನ್ನು ಮಣಿಸಿ ಅಂತಿಮ 16 ರ ಹಂತಕ್ಕೆ ಲಗ್ಗೆ ಇಟ್ಟಿದೆ. ಗಾಯದಿಂದಾಗಿ ಸಾನಿಯಾ ಮಿರ್ಜಾ ಕಳೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಹೊರ ನಡೆದಿದ್ದರು.
ಅದಾದ ಬಳಿಕ ದುಬೈ ಓಪನ್ ಅವರ ಮೊದಲ ಟೂರ್ನಿಯಾಗಿದೆ. 2020ರ ಮೊದಲ ಗ್ರ್ಯಾನ್ ಸ್ಲ್ಯಾಮ್ನಲ್ಲಿ ರೋಹನ್ ಬೋಪಣ್ಣ ಅವರೊಂಂದಿಗೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ವಿಥ್ ಡ್ರಾ ಮಾಡಿಕೊಂಡಿದ್ದರು. ತಡವಾಗಿ ಮಹಿಳಾ ಡಬಲ್ಸ್ನಿಂದಲೂ ಹೊರ ನಡೆದಿದ್ದರು.ಇದಕ್ಕೂ ಮುನ್ನ ಸಾನಿಯಾ ಮಿರ್ಜಾ ಅವರು ಹೊಬಾರ್ಟ್ ಇಂಟರ್ ನ್ಯಾಷನಲ್ ಮಹಿಳಾ ಡಬಲ್ಸ್ ವಿಬಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಎರಡು ವರ್ಷಗಳ ವಿಶ್ರಾಂತಿಯ ಬಳಿಕ ಇದು ಅವರ ಮೊದಲ ಪ್ರಶಸ್ತಿಯಾಗಿತ್ತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 