ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಸ್‌.ಎಂ.ನಾರಗೊಂಡ ಶಾಲೆ : ದರಿಗೋನ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಸ್‌.ಎಂ.ನಾರಗೊಂಡ ಶಾಲೆ : ದರಿಗೋನ S.M. Naragonda School striving for the all-round development of children: Darigona

ಹಾರೂಗೇರಿ 26: ದೇಶಪ್ರೇಮ, ಸಂಸ್ಕಾರ, ಜ್ಞಾನ, ಮಾನವೀಯ ಮೌಲ್ಯಗಳ ಶಿಕ್ಷಣ ನೀಡುತ್ತ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಎಸ್‌.ಎಂ.ನಾರಗೊಂಡ ಶಾಲೆ ರಾಷ್ಟ್ರ ನಿರ್ಮಾಣ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಕುಡಚಿ ಪಿಎಸ್‌ಐ ಶಿವರಾಜ ದರಿಗೋನ ಹೇಳಿದರು. 

ಪಟ್ಟಣದ ಮಲ್ಲಿಕಾರ್ಜುನ ಪೌಂಡೇಶನ್‌ನ ಎಸ್‌.ಎಮ್‌.ನಾರಗೊಂಡ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯ ದಿವಸ್, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮತ್ತು ವಿದ್ಯಾರ್ಥಿ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ವಿದ್ಯೆ ಕಲಿಯುವ ವಯಸ್ಸಿನಲ್ಲಿ ಸೈಬರ್ ವಂಚನೆಗೊಳಗಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸೈಬರ್ ವಂಚನೆ ಮತ್ತು ಬ್ಲಾಕ್‌ಮೇಲ್‌ಗಳ ತಂತ್ರಗಳ ಬಗ್ಗೆ ಪಾಲಕರು ಜಾಗೃತಿವಹಿಸಬೇಕು. ಮೊಬೈಲ್ ಮಕ್ಕಳ ಮಾನಸಿಕ ಸ್ಥಿಮಿತ ಮತ್ತು ನೈತಿಕ ಮೌಲ್ಯಗಳನ್ನು ಕಸಿಯುತ್ತಿದೆ. ಸಮಸ್ಯೆ ಕಂಡು ಬಂದಲ್ಲಿ ಮುಕ್ತ, ನಿರ್ಭಯವಾಗಿ ಪೊಲೀಸ್ ಠಾಣೆಗೆ ಹಾಗೂ ಸಹಾಯವಾಣಿ ಸಂಖ್ಯೆಗೆ ದೂರು ನೀಡಬೇಕು. ಪಾಲಕರೇ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಬೇಡಿ ಎಂದು ಪಿಎಸ್‌ಐ ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ವಿವೇಕ ನಾರಗೊಂಡ ಮಾತನಾಡಿ ಇಂದು ಗುಣಮಟ್ಟದ ಶಿಕ್ಷಣದ ಬಗ್ಗೆ ಶಿಕ್ಷಣ ಸಂಸ್ಥೆಗಳ ಪೈಪೋಟಿ ಏರ​‍್ಪಟಟಿದೆ. ಇದರಿಂದ ಪಾಲಕರು ಮತ್ತು ವಿದ್ಯಾರ್ಥಿಗಳ ಅನುಕೂಲವಾಗಲಿದೆ. ಕೇವಲ ತೋರಿಕೆಗಾಗಿ ಬಿಂಬಿಸುವುದಕ್ಕಿಂತ ಆರೋಗ್ಯಕರ ಪೈಪೋಟಿಯಾಗಿಬೇಕು. ನೈಜ ಗುಣಮಟ್ಟಕ್ಕೆ ಸಾಕ್ಷಿಯಾಬೇಕು ಎಂದು ಹೇಳಿದರು. 

ಗೌರವ ಅತಿಥಿಗಳಾಗಿ ಆಗಮಿಸಿದ್ದ ಚಿಕ್ಕಮಕ್ಕಳ ತಜ್ಞ ಡಾ.ಗೀರೀಶ ನಾರಗೊಂಡ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತ ಪಠ್ಯಗಳು ಭೌತಿಕ ವಿಕಾಸವನ್ನುಂಟು ಮಾಡಿ, ವೃತ್ತಿಪರವಾಗಿ ರೂಪಿಸಿದರೆ, ಸಾಂಸ್ಕೃತಿಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನದ ಮೂಲ ಸೆಲೆಗಳಾಗಿ ಪರಿಪೂರ್ಣ ಮನುಷ್ಯರನ್ನಾಗಿ ರೂಪಿಸುತ್ತದೆ ಎಂದರು. 

ಈವೇಳೆ ಕಾರ್ಗಿಲ್ ವಿಜಯ ದಿವಸ್ ನಿಮಿತ್ತ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ವೀರಯೋಧರಿಗೆ ಕ್ಯಾಂಡಲ್ ಬೆಳಗಿಸಿ, ನಮನ ಸಲ್ಲಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.  

ಶಾಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅಭಿಷೇಕ ದೇಶಪಾಂಡೆ ಮತ್ತು ವಿದ್ಯಾರ್ಥಿನಿಯರ ಒಕ್ಕೂಟದ ಅಧ್ಯಕ್ಷರಾಗಿ ಅಪೂರ್ವಾ ಕುಲಕರ್ಣಿ ಅವರು ಆಯ್ಕೆಯಾದರು. 

ಡಾ.ಮಹಾಂತೇಶ ಜಾಲಗೇರಿ, ಡಾ.ಲಕ್ಷ್ಮೀ ಜಾಲಗೇರಿ, ಸಂಸ್ಥೆ ಕಾರ್ಯದರ್ಶಿ ತ್ರೀವೇಣಿ ನಾರಗೊಂಡ, ಸದಸ್ಯೆ ಗೀತಾ ನಾರಗೊಂಡ, ಪ್ರಾಚಾರ್ಯ ಪ್ರಶಾಂತ ಎಲ್‌.ಎಚ್, ಉಪಪ್ರಾಚಾರ್ಯ ಮುನೀರ ಖಾನಾಪೂರೆ, ಶಂಭುಲಿಂಗ ಜಕಾತೆ, ಈರಣ್ಣ ಅಂಬಲಿ, ಸ್ವೇತಾ ಶಿರಕೋಡ, ಪ್ರಮೋದ ಮುತ್ತಪ್ಪಗೋಳ, ನಾಗೇಶ ಗುಮಾಸ್ತಿ, ಸುದರ್ಶನ,  ಮಹಾಂತೇಶ ಮುಗಳಖೋಡ ಹಾಗೂ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು.  

ತನ್ವಿ ಲಾಳಿ ಸ್ವಾಗತಿಸಿದರು. ಸಮರ್ಥ ಮಾನೆ ಮತ್ತು ಅರ​‍್ಿತಾ ಬೆಲ್ಲದ ಕಾರ್ಯಕ್ರಮ ನಿರೂಪಿಸಿದರು. ನೂಹಾ ಚಮನಶೇಖ ವಂದಿಸಿದರು.