ಎಸ.ಕೆ. ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳು, ತಾಲೂಕ ಮಟ್ಟಕ್ಕೆ ಆಯ್ಕೆ

ಎಸ.ಕೆ. ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳು, ತಾಲೂಕ ಮಟ್ಟಕ್ಕೆ ಆಯ್ಕೆ  S.K. Boys' High School students selected for the taluk level


 ತಾಳಿಕೋಟೆ 07 : ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 2026-2 7ನೇ ಸಾಲಿನ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಸ ಕೆ ಬಾಲಕರ ಪ್ರೌಢಶಾಲೆಯ ಕ್ರೀಡಾಪಟುಗಳು ಸ್ಪರ್ಧೆ ಮಾಡಿ ಬಾಲಕರ ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ಕಬ್ಬಡಿ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ತ್ರೋಬಾಲನಲ್ಲಿ ಪ್ರಥಮ ಹಾಗೂ 400ಮೀಟರ ರಿಲೇ ನಲ್ಲಿ ದ್ವಿತೀಯ ಸ್ಥಾನ ಪಡೆದು ವಯಕ್ತಿಕ ಆಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆಯುವ ಮೂಲಕ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಕ್ರೀಡಾ ಸಾಧನೆಗೆ ಸಂಭ್ರಮಿಸಿದರು. ಈ ಎಲ್ಲ ವಿದ್ಯಾರ್ಥಿಗಳಿಗೆ ಎಸ ಕೆ ಬಾಲಕರ ಪ್ರೌಢಶಾಲೆಯ ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹೃದಯಪೂರ್ವಕ ಅಭಿನಂದಿಸಿ ಹೆಚ್ಚಿನ ಸಾಧನೆಗೆ ಶುಭ ಕೋರಿದ್ದಾರೆ.