ಮುಂಡಗೋಡ ನೂತನ ತಹಶೀಲ್ದಾರರಾಗಿ ಎಸ್.ಎ. ಪ್ರಸಾದ್ ಅಧಿಕಾರ ಸ್ವೀಕಾರ
S.A. Prasad assumes office as the new Tahsildar of Mundagoda
ಲೋಕದರ್ಶನ ವರದಿ
ಮುಂಡಗೋಡ 09: ಉಡುಪಿಯ ಜಿಲ್ಲೆಯ ಹೆಬ್ರಿ ತಾಲೂಕಿನಿಂದ ವರ್ಗಾವಣೆಯಾಗಿ ಮುಂಡಗೋಡಗೆ ಬಂದಂತಹ ತಹಶೀಲ್ದಾರ ಎಸ್.ಎ. ಪ್ರಸಾದ ರವರು ಸೋಮವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡರು. ತಹಶೀಲ್ದಾರರು ಅಧಿಕಾರ ವಹಿಸಿಕೊಂಡಾಗ ರಾಜ್ಯ ಅನ್ನದಾತ ಸಂಘ ಹಾಗೂ ಹಸಿರು ಸೇನೆ ಯ ಪದಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಎಸ್.ಎ.ಪ್ರಸಾದರು ಮಾತನಾಡಿ ರೈತರ ಕೆಲಸ ಕಾರ್ಯಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಹೊಸ ತಹಶೀಲ್ದಾರರು ಜನರ ಜೊತೆ ಬೆರತು ಮುಕ್ತವಾಗಿ ಮಾತನಾಡಿದ್ದು ರಾಜ್ಯ ಅನ್ನದಾತ ಸಂಘ ಹಾಗೂ ಹಸಿರು ಸೇನೆ ಯ ಪದಾಧಿಕಾರಿಗಳು ಸಂತೋಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ , ಜಿಲ್ಲಾಧ್ಯಕ್ಷ ಸೋಮಲಿಂಗ ಬೆಣ್ಣಿ, ಭೀಮಸಿ ವಾಲ್ಮೀಕಿ, ಎಸ್.ಎಸ್.ಪಾಟೀಲ, ಗೋವಿಂದ ಬೆಂಡ್ಲಗಟ್ಟಿ, ಮಾರ್ಟಿನ ಬಳ್ಳಾರಿ, ಜೈತುನಬಿ, ಪ್ರಶಾಂತ ಕರಿಗಾರ, ಬಸವರಾಜ ವಾಲ್ಮಿಕಿ, ಜೀವಣ್ಣ ನಾಣಾಪುರ, ಸೀತಾ ಸಿದ್ದಿ, ಯಲ್ಲವ್ವಾ ಭೋವಿ, ಮಿನಿನ್ ಸಿದ್ದಿ, ಸುದಾ ಸಿದ್ದಿ ನವಲು ಎಡಗೆ ನಾಗವೇಣಿ ಸಿದ್ದಿ ಮುಂತಾದವರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 