ಎಸ್‌. ಡಿ. ಮುಡೆಣ್ಣರವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಕಾರ್ಯಕ್ರಮ

ಎಸ್‌. ಡಿ. ಮುಡೆಣ್ಣರವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಕಾರ್ಯಕ್ರಮ S. D. Mudennavar felicitated by Kannada Sahitya Parishad

ಮುಂಡಗೋಡ 25: ಕಸಾಪ ವತಿಯಿಂದ ರಾಷ್ಟ್ರ ಮಟ್ಟದ ಯುವ ಕಾರ್ಯರ್ಷಿ ಪ್ರಶಸ್ತಿ ಪಡೆದ: ಎಸ್‌.ಡಿ ಮುಡೆಣ್ಣವರರಿಗೆ ಸನ್ಮಾನ್ ಲೋಕದರ್ಶನ ವರದಿ ಮುಂಡಗೋಡ  ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ಶ್ರೀ ಪ್ರಶಸ್ತಿ ಪುರಸ್ಕೃತರಾದ ದಿ. ನಾ. ಸು ಭರತನಳ್ಳಿ ರವರ ಸಾಹಿತ್ಯ ಚಿಂತನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಗಮೇಶ್ವರ ಸಭಾಭವನದಲ್ಲಿ ಹಮ್ಮಿಕೊಲಾಗಿತ್ತು. 

ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಜಗದೀಶ. ವಾಲಿಶೆಟ್ಟರ್ ಮಾತನಾಡುತ್ತಾ ಪ್ರತಿಯೊಬ್ಬರು ಕನ್ನಡ ಮನದಾಳದ ಮಿಡಿತವಾಗಿ ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಕವಿಗಳ ಸ್ಮರಣೆ ಮಾಡುವುದು ಬಹಳ ಉತ್ತಮವಾದ ಕಾರ್ಯಕ್ರಮ. ಎಲ್ಲರೂ ಕನ್ನಡವನ್ನು ಮಾತನಾಡಿ ಅದನ್ನು ಉಳಿಸಿ  ಹೇಳಿದರು.  ರಾಷ್ಟ್ರ ಮಟ್ಟದ ಯುವ ಕಾರ್ಯರ್ಷಿ ಪ್ರಶಸ್ತಿ 2025 ಪಡೆದ ಆದಿ ಜಾಂಬವ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಎಸ್‌. ಡಿ ಮುಡೆಣ್ಣವರ ಹಾಗೂ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ. ವಿನಾಯಕ. ಶೇಟ್ ಇಬ್ಬರನ್ನು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನ ಮಾಡಿ ಗೌರವಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ. ವಸಂತ.ಕೊಣಸಾಲಿಯವರು ಮಾತನಾಡುತ್ತಾ ಇಂದು ಎರಡು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಒಂದು ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿಗಳು ದಿ. ನಾ. ಸು. ಭರತನಳ್ಳಿಯವರ ಸಾಹಿತ್ಯ ಚಿಂತನ ಮತ್ತು ರಾಷ್ಟ್ರ ಮತ್ತು  ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ನಮ್ಮ ಪರಿತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ.ಶ್ರೀ. ಎಸ್‌. ಡಿ ಮುಡೆಣ್ಣವರ ಹಾಗೂ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ. ವಿನಾಯಕ. ಶೇಟ್ ಇಬ್ಬರು ಸಾಧಕರಿಗೆ ಸನ್ಮಾನ ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲರೂ ಕನ್ನಡ ಪ್ರತಿಯೊಬ್ಬರ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯಬೇಕು ಹಾಗೂ ಕನ್ನಡ ಭಾಷೆ ಹಳೆಯ ಇತಿಹಾಸ ಹೊಂದಿದ ಭಾಷೆ, ಕನ್ನಡವನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಲ್ಲರೂ ಕನ್ನಡವನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು ಎಂದು ಹೇಳಿದರು.   ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀಮತಿ. ವೈಶಾಲಿ. ಶ್ರೀನಿವಾಸ್ ರವರು ಮಾತನಾಡುತ್ತಾ ಇಂದು ಮುಂಡಗೋಡ ನಗರದಲ್ಲಿ ಕವಿಗಳ ಹಾಗೂ ಮುಂಡಗೋಡಕ್ಕೆ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದ್ದು ತುಂಬಾ ಹೆಮ್ಮೆಯ ವಿಷಯ ಇಂತಹ ಸಾಧಕರನ್ನು ಸನ್ಮಾನ ಮಾಡಿ ಪ್ರೋತ್ಸಾಹ ನೀಡುವ ಸಾಹಿತ್ಯ ಪರಿಷತ್ತು ಒಳ್ಕೆಯ ಕಾರ್ಯವಾಗಿದೆ. ನಾನು ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ ಆದರೆ ಇಂದು ನನ್ನನ್ನು ಅತಿಥಿಯಾಗಿ ಕರೆದಿದ್ದು ತುಂಬಾ ಸಂತೋಷ. ಅದಕ್ಕಾಗಿ  ಸಾಹಿತ್ಯ ಪರಿಷತ್ತಿಗೆ ಋಣಿಯಾಗಿದ್ದೇನೆ.ಸಾಹಿತ್ಯ ಪ್ರತಿಯೊಂದು ವಿಚಾರಗಳಲ್ಲಿ ವ್ಯಕ್ತಿತ್ವ ಬೆಳೆವಣಿಗೆ ಸಹಾಯ ಮಾಡುತ್ತದೆ. ಕನ್ನಡ ಸಾಹಿತ್ಯ ಹಿರಿದಾದ ಮತ್ತು ವಿಶಾಲ ಅರ್ಥ ಹೊಂದಿದ ಭಾಷೆಯಾಗಿದೆ. ಕನ್ನಡವನ್ನು ಜೀವ ಇರುವರೆಗೂ ಮರೆಯಬಾರದು ಅಂದಾಗ ಮಾತ್ರ ಕನ್ನಡ ನಾಡಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಹೇಳಿದರು.   

ಈ ಸಂದರ್ಭದಲ್ಲಿ  ಎಸ್‌. ಫಕ್ಕಿರಾ​‍್ಪ, ಸಂಗಪ್ಪ. ಕೊಳೂರು, ಎಸ್‌. ಕೆ. ಬೋರಕರ, ಡಾ. ಪಿ. ಪಿ. ಛಬ್ಬಿ ಆರ್‌. ಜೆ. ಬೆಳ್ಳಣ್ಣವರ, ದಿನೇಶ. ವೇರ್ಣೇಕರ, ಸಾಧಕರ ಪರಿಚಯ ಮಾಡಿದರು, ಸಂತೋಷ. ಕುಸನೂರ ನಿರೂಪಸಿದರು, ಎಸ್‌. ಬಿ. ಹೂಗಾರ ಸ್ವಾಗತಿಸಿದರು. ಆನಂದ್‌. ಹೊಸೂರು, ಶ್ರೀ. ರಮೇಶ. ಅಂಬಿಗೇರ, ವಾಸುದೇವ. ಮಡ್ಲಿ, ಕೃಷ್ಣ. ಗುಜಮಾಗಡಿ, ರಮೇಶ. ಪವಾರ ಮುಂತಾದವರು ಹಾಜರಿದ್ದರು