ಮಾಸ್ಕೋ, ಡಿ 12 (ಸ್ಫುಟ್ನಿಕ್) ರಷ್ಯಾದ ಕ್ರಸ್ನೋಡಾರ್ ಪ್ರಾಂತ್ಯದಲ್ಲಿ
ಎಮ್ ಐ – 28 ಮಿಲಿಟರಿ ಹೆಲಿಕಾಫ್ಟರ್ ಪತನಗೊಂಡಿದ್ದು ಅದರಲ್ಲಿದ್ದ ಇಬ್ಬರೂ ಸಿಬ್ಬಂದಿ ಮೃತಪಟ್ಟಿದ್ದಾರೆ. ಬುಧವಾರದ
ಈ ಘಟನೆಯ ಸ್ಥಳ ಪತ್ತೆಯಾಗಿದ್ದು ಘಟನೆಯಲ್ಲಿ ಹೆಲಿಕಾಫ್ಟರ್ ಸಂಪೂರ್ಣವಾಗಿ ನಾಶವಾಗಿದೆ ಎಂದು ಮೂಲಗಳು
ತಿಳಿಸಿವೆ. ಹೆಲಿಕಾಫ್ಟರ್ ಪತನಗೊಂಡು ಇಬ್ಬರು ಪೈಲಟ್ ಸಾವನ್ನಪ್ಪಿದ್ದಾರೆ
ಎಂದು ರಷ್ಯಾ ರಕ್ಷಣಾ ಸಚಿವಾಲಯ ಈಗಾಗಲೇ ಖಚಿತಪಡಿಸಿದೆ. ಈ ಘಟನೆಯಲ್ಲಿ ಭೂಮಿಯ ಮೇಲೆ ಯಾರಿಗೂ ಅಪಾಯವಾಗಿಲ್ಲ
ಎಂದೂ ಕೂಡ ಸಚಿವಾಲಯ ತಿಳಿಸಿದೆ.