ಮಾಸ್ಕೋ,
ಡಿ 28 (ಸ್ಫುಟ್ನಿಕ್) ರಷ್ಯಾ ರಾಷ್ಟ್ರೀಯ ತಂಡವನ್ನು ಪ್ರಮುಖ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು
ನಿಷೇಧಿಸುವ ಬಗ್ಗೆ ಸಂಸ್ಥೆ(ವಾಡಾ) ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಈ ಕ್ರಮವನ್ನು
ಸಮರ್ಥಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ ಎಂದು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ಅಧ್ಯಕ್ಷ
ಕ್ರೇಗ್ ರೀಡಿ ಹೇಳಿದರು. ರಷ್ಯಾದ ಕ್ರೀಡಾಪಟುಗಳನ್ನು ನಾಲ್ಕು ವರ್ಷಗಳ ಕಾಲ ಪ್ರಮುಖ ಅಂತಾರಾಷ್ಟ್ರೀಯ
ಸ್ಪರ್ಧೆಗಳಲ್ಲಿ ಸ್ಪರ್ಧಿಸದಂತೆ ಅಮಾನತುಗೊಳಿಸುವ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಯ ನಿರ್ಧಾರ ನಾವು ಒಪ್ಪುವುದಿಲ್ಲ ಹಾಗೂ ಈ ತೀರ್ಮಾನ
ವಿಶ್ವ ಡೋಪಿಂಗ್ ವಿರೋಧಿ ಸಂಹಿತೆಗೆ ಅನುಗುಣವಾಗಿಲ್ಲ ಎಂದು ಮಂಗಳವಾರ ರಷ್ಯಾ ಡೋಪಿಂಗ್ ಏಜೆನ್ಸಿ ಹಮ್ಮಿಕೊಂಡಿದ್ದ
ಸಾಮಾನ್ಯ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿತ್ತು ಜತೆಗೆ, ಈ ಪ್ರಕರಣವನ್ನು ಕೋರ್ಟ್ ಆಫ್ ಆರ್ಬಿಟ್ರೇಷನ್
ಫಾರ್ ಸ್ಪೋರ್ಟ್ (ಸಿಎಎಸ್). (ಸಿಎಎಸ್) ಪರಿಗಣಿಸಬೇಕು ಎಂದು ಮನವಿ ಮಾಡಿತ್ತು."ಡಿಸೆಂಬರ್
9 ರಂದು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ವಾಡಾಗೆ ಮನವರಿಕೆಯಾಗಿದೆ. ಉದ್ದೇಶಿತ ಪರಿಣಾಮಗಳು
ರಷ್ಯಾದ ಅಧಿಕಾರಿಗಳ ಮೇಲೆ ಕಠಿಣವಾಗಿದ್ದು, ವಿಶ್ವದಾದ್ಯಂತ ಶುದ್ಧ ಕ್ರೀಡೆಯ ಸಮಗ್ರತೆಯನ್ನು ದೃಡವಾಗಿ
ರಕ್ಷಿಸುತ್ತದೆ. ನಾವು ಆ ನಿರ್ಧಾರವನ್ನು ಸಿಎಎಸ್‌ನಲ್ಲಿ ಅತ್ಯಂತ ಹುರುಪಿನಿಂದ ಕಾಪಾಡುತ್ತೇವೆ
" ಎಂದು ವಾಡಾ ಹೇಳಿಕೆಯಿಂದ ಉಲ್ಲೇಖಿಸಿದಂತೆ ರೀಡಿ ಶುಕ್ರವಾರ ತಡರಾತ್ರಿ ಹೇಳಿದರು.ಡೋಪಿಂಗ್
ಪರೀಕ್ಷೆ ಪ್ರಯೋಗಾಲಯದ ಮಾದರಿಯನ್ನು ತಿರುಚಿದ ಹಿನ್ನೆಲೆಯಲ್ಲಿ ರಷ್ಯಾವನ್ನು ನಾಲ್ಕು ವರ್ಷಗಳ ಕಾಲ
ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆತಿಥ್ಯ ವಹಿಸುವುದನ್ನು ಮತ್ತು ಸ್ಪರ್ಧಿಸುವುದನ್ನು
ವಾಡಾ ಕಳೆದ ಡಿ.9 ರಂದು ನಿಷೇಧಿಸಿತು.ಸ್ಪಟ್ನಿಕ್ ಆರ್ ಕೆ