ಮುಂಬೈ, ಜ 28 ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 7 ಪೈಸೆ ಏರಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 37 ಪೈಸೆಯಷ್ಟಿದೆ.ರೂಪಾಯಿ ಮೌಲ್ಯದ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 71.41 ರೂ ಮತ್ತು 71.32 ರೂ ನಷ್ಟಿತ್ತು.ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮತ್ತು ಷೇರು ಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿನಿಂದಾಗಿ ಈ ಬೆಳವಣಿಗೆ ಕಂಡು ಬಂದಿದೆ.