ಡಾಲರ್ ಎದುರು ರೂಪಾಯಿ ಮೌಲ್ಯ 28 ಪೈಸೆ ಏರಿಕೆ

ಮುಂಬೈ, ಅ 14:     ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರದ ಬೆಳಗಿನ ವಹಿವಾಟಿನಲ್ಲಿ 28 ಪೈಸೆ ಇಳಿಕೆ ಕಂಡು ಒಂದು ಡಾಲರ್ ಬೆಲೆ 70 ರೂಪಾಯಿ 74 ಪೈಸೆಯಷ್ಟಿತ್ತು.  ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 70.75 ರೂ ಮತ್ತು 70.91 ರೂ. ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನ ಚೇತರಿಕೆ, ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ದುರ್ಬಲಗೊಂಡ  ಹಿನ್ನೆಲೆಯಲ್ಲಿ ಮತ್ತು ಅಮೆರಿಕ - ಚೀನಾ ನಡುವಿನ ವ್ಯಾಪಾರ ಯುದ್ಧದ ಪರಿಣಾಮ ಈ  ಬೆಳವಣಿಗೆ ಕಂಡು ಬಂದಿದೆ.