ಬೆಂಗಳೂರು, ನ.4: ಭಾರತದ ಪ್ರಮುಖ ತೆರಿಗೆ ಮತ್ತು ಹೂಡಿಕೆ ವೇದಿಕೆಯಾದ ಬೆಂಗಳೂರು ಮೂಲದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಗೆ ಪ್ರತಿಷ್ಠಿತ ರನ್ನರ್ ಅಪ್ 'ಟೆಕ್ ಲೀಡರ್ ಆಫ್ ದಿ ಇಯರ್ 2019 (ಕಾರ್ಪೋರೇಟ್) ಪ್ರಶಸ್ತಿ ಲಭಿಸಿದೆ.
ದೆಹಲಿಯಲ್ಲಿ ನಡೆದ ಆಸೋಚಾಮ್ ಎಮಜರ್ಿಂಗ್ ಡಿಜಿಟಲ್ ಟೆಕ್ನಾಲಜೀಸ್ ಸಮ್ಮಿಟ್ ಅಂಡ್ ಅವಾರ್ಡ್ 2019 ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಸೋಮ್ ಪ್ರಕಾಶ್ ಮತ್ತು ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಆರ್ ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದೇಶದ ಒಳತಿಗಾಗಿ ನೂತನ ತಂತ್ರಜ್ಞಾನ ಕೊಡುಗೆ ಹಾಗು ಉದ್ಯಮಕ್ಕೆ ಮತ್ತು ಜನತೆಗೆ ಹೊಸ ಸೇವೆಗಳನ್ನು ಒದಗಿಸಿರುವ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯ ಕಾರ್ಯವನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.
ಕೃತಕ ಬುದ್ಧಿಮತ್ತೆ, ಐಒಟಿ, ಬ್ಲಾಕ್ ಚೈನ್ ಮತ್ತು ರೊಬೋಟಿಕ್ ತಂತ್ರಜ್ಞಾನ ಬಳಸಿ ಅತ್ಯುತ್ತಮ ಪರಿಹಾರ ಒದಗಿಸುವ ನಾಯಕರು, ಸಂಸ್ಥೆ ಹಾಗೂ ತಂಡಗಳಿಗೆ ಆಸೋಚಾಮ್ ಎಮಜರ್ಿಂಗ್ ಡಿಜಿಟಲ್ ಟೆಕ್ನಾಲಜೀಸ್ ಸಮ್ಮಿಟ್ ಅಂಡ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.
ನಮ್ಮ ಪರಿಶ್ರಮವನ್ನು ಅಸೋಚಾಮ್ ಗುರುತಿಸಿರುವುದು ನಮಗೆ ಸಂತಸ ತಂದಿದೆ. 2011 ರಲ್ಲಿ ನಾವು ಸಂಸ್ಥೆಯನ್ನು ಪ್ರಾರಂಭಿಸಿದಾಗ ರೊಬಸ್ಟ್ ಟೆಕ್ನಾಲಜಿಯ ಪಾಮುಖ್ಯತೆಯ ಬಗ್ಗೆ ನಮಗೆ ಅರಿವಿತ್ತು. ಈ ಪ್ರಶಸ್ತಿಯು ನಮ್ಮ ಪರಿಶ್ರಮಕ್ಕೆ ಸಂದ ಫಲವಾಗಿದೆ ಎಂದು ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅಚರ್ಿತ್ ಗುಪ್ತಾ ತಿಳಿಸಿದ್ದಾರೆ.