ವಾಷಿಂಗ್ಟನ್, ಜ 22 : ಅಧ್ಯಕ್ಷ ಟ್ರಂಪ್ ವಿರುದ್ಧದ ವಾಗ್ದಂಡನೆ ವಿಚಾರಣೆ ಕುರಿತ ವಾದ, ಪ್ರತಿವಾದವನ್ನು 13 ಗಂಟೆಗಳಿಂದ ಆಲಿಸಿದ ಅಮೆರಿಕದ ಸೆನೆಟ್ (ಮೇಲ್ಮನೆ) ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದೆ.
ಜತೆಗೆ ಸಾಕ್ಷಿಗಳ ವಿಚಾರಣೆಯನ್ನು ಶೀಘ್ರದಲ್ಲೇ ನಡೆಸಲಿದೆ. ಅಧಿಕಾರ ದುರುಪಯೋಗ ಆರೋಪಕ್ಕೆ ಗುರಿಯಾಗಿರುವ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷ ಆಗ್ರಹಿಸಿ, ವಾಗ್ದಂಡನೆ ನಿರ್ಣಯ ಮಂಡಿಸಿದೆ.
ಅಧಿಕಾರ ದುರುಪಯೋಗ ಮತ್ತು ಸಂಸತ್ ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಡೆಮಾಕ್ರಟಿಕ್ ಪಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಆರೋಪ ಹೊರಿಸಿದೆ ಹೀಗಾಗಿ, ಈ ವಿಚಾರ ಸೆನೆಟ್ನಲ್ಲಿ ವಿಚಾರಣೆಗೆ ಬಂದಿತ್ತು. ಅಧ್ಯಕ್ಷ ಟ್ರಂಪ್ ವಕೀಲರ ತಂಡ ಅಧ್ಯಕ್ಷರಿಂದ ಯಾವ ತಪ್ಪು ನಡೆದಿಲ್ಲ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಸತತ 13 ಗಂಟೆಗಳ ಕಾಲ ಸೆನೆಟ್ನಲ್ಲಿ ವಾದ-ಪ್ರತಿವಾದ ನಡೆದವು. ಈ ವೇಳೆ ಟ್ರಂಪ್ ವಿರುದ್ಧದ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದೆ.