ರುದ್ರಣ್ಣ ಚಂದರಗಿ ಅವರಿಗೆ ಅತ್ಯುತ್ತಮ ಸಾಧನೆ ಪ್ರಶಸ್ತಿ ಪ್ರದಾನ
Rudranna Chandragi presented with the Outstanding Achievement Award
ಬೆಳಗಾವಿ 19: ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಸಂಜೆ ಪಿಡಿಲೈಟ್ ಇಂಡಸ್ಟ್ರೀಸ್ ವತಿಯಿಂದ ಆಯೋಜಿಸಲಾದ ಪಿಡಿಲೈಟ್ ಫಾಲ್ಕೋಫಿಕ್ಸ್ ಪ್ರಶಸ್ತಿ( Pidilite Award for Excellence ) ಸಮಾರಂಭದಲ್ಲಿ ಬೆಳಗಾವಿ ಶ್ರೀ ಬಾಲಾಜಿ ಹಾರ್ಡ್ ವೇರ್ ಗ್ಯಾಲರಿಯ ಮಾಲೀಕರಾದ ರುದ್ರಣ್ಣ ಚಂದರಗಿ ಅವರಿಗೆ 2025-26 ನೇ ಸಾಲಿನ ಅತ್ಯುತ್ತಮ ಸಾಧನೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಚಿಪ್ ಸೆಲ್ಸ್ ಮತ್ತು ಮಾರ್ಕೆಟಿಂಗ್ ಶ್ರೀನಿವಾಸ್ ನಾಯ್ಡು ಅವರು ಮಾತನಾಡಿ, .1959ರಲ್ಲಿ ಆರಂಭವಾದ ಕಂಪನಿ ಗ್ರಾಹಕರ ಮನಮುಟ್ಟುವಲ್ಲಿ ಹಾಗೂ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಗಿದೆ, ಅದೆಲ್ಲವೂ ನಮ್ಮ ವಿತಕರಿಂದ ಸಾಧ್ಯವಾಗಿದೆ. ಪಿಡಿಲೈಟ್ ಕಂಪನಿ ಏಳಿಗೆಗೆ ವಿತಕರ ಪಾತ್ರ ಮಹತ್ವದಾಗಿದೆ ಎಂದರು.
ಸಣ್ಣದಾಗಿ ಆರಂಭವಾದ ಪೆವಿಕ್ವಿಕ್ ಕಂಪನಿಯೂ ದೇಶದ ಮೂಲೆ ಮೂಲೆಯಲ್ಲಿ ತಲುಪುವಲ್ಲಿ ಮೇಲಾಧಿಕಾರಿಗಳು, ಸಿಬ್ಬಂದಿ, ವಿತರಕರ ಶ್ರಮ ಬಹಳಷ್ಟಿದೆ. 66 ವರ್ಷಗಳ ಅವಧಿಯಲ್ಲಿ ಮಾರಾಟಗಾರರ ಹಾಗೂ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದೆ. ಪೆವಿಕ್ವಿಕ್ ದಿಂದ ಪಿಡಿಲೈಟ್ ಫಾಲ್ಕೋಫಿಕ್ಸ್ ದಾಪುಗಾಲು ಇಡಲು ಕಂಪನಿಯ ಸಿಬ್ಬಂದಿ ಒಗ್ಗಟವೇ ಕಾರಣ, ದೇಶ ಸೇರಿದಂತೆ ಶೀಘ್ರವೇ ಪೂನಾದಲ್ಲಿ ಮತ್ತೊಂದು ಹೊಸದಾಗಿ ಕಂಪನಿಯ ಆರಂಭಸಲಿದೆ ಎಂದರು.
ಸಾವಿರಾರು ಜನರು ಈ ಕಂಪನಿಯಲ್ಲಿ ಕಾರ್ಯನಿರ್ವಸುತ್ತಿದ್ದಾರೆ. ಜೊತೆಗೆ ಕೋಟ್ಯಾಂತರ ಗ್ರಾಹಕರು ಪಿಡಿಲೈಟ್ ಫಾಲ್ಕೋಫಿಕ್ಸ್ ಉಪಯೋಗಿಸುತ್ತಿದ್ದಾರೆ. ಅದರಲ್ಲಿ 2004 ರಲ್ಲಿ ಕಂಪನಿಯು 1000 ಕೋಟಿ ಮಾರಾಟ ತಲುಪಿದೆ. ಗುಣಮಟ್ಟದೊಂದಿದೆ ಅಂತರಾಷ್ಟ್ರೀಯ ಕಂಪನಿಗಳಿಗೂ ಪೈಪೋಟಿ ನೀಡುತ್ತಿದೆ. ನಮ್ಮ ಕಂಪನಿಯ ತಯಾರಿಕೆಗೆ ಮೋದಿಯವರು ಕೂಡ ಶ್ಲಾಘನೀಯ ವ್ಯಕ್ತಪಡಿಸಿದಾರೆ. ಪಿಡಿಲೈಟ್ ಫಾಲ್ಕೋಫಿಕ್ಸ್ ನ್ನು
ಗೋಡೆಗಳಿಗೆ ಅಂಟಿಸಿದ ಎರಡು ಗಂಟೆಗಳಲ್ಲಿ ಗಟ್ಟಿಯಾಗಿ ಗೋಡೆಗಳನ್ನು ಅಂಟಿಕೊಂಡು ಸದೃಢವಾಗಬಲ್ಲದು.
ಬೆಳಗಾವಿ ಪಿಡಿಲೈಟ್ ಫಾಲ್ಕೋಫಿಕ್ಸ್ ವಿತರಕರಾದ ಶ್ರೀ ಬಾಲಾಜಿ ಹಾರ್ಡ್ ವೇರ್ ಗ್ಯಾಲರಿಯ ಮಾಲೀಕರಾದ ರುದ್ರಣ್ಣ ಚಂದರಗಿ ಹಾಗೂ ಬಾಗಲಕೋಟೆ ವಿಜಯ ರೈ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ಫಾಲ್ಕೋಫಿಕ್ಸ್ ಹೆಚ್ಚಿನ ಬೇಡಿಕೆ ಇದೆ. ಗುಣಮಟ್ಟದ ಇರುವ ಕಾರಣ ಮಾರಾಟವಾಗುತ್ತಿದೆ. ಮೂವರು ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಕಂಪನಿಯೂ ನಮ್ಮ ಕೈ ಹಿಡಿದು ಮುಂದೆ ನಡೆಸುತ್ತಿದೆ ಎಂದು ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಭರತ್ ಹುಮಾವತ, ರುಪಾಂಗಜ್ ಗುಪ್ತಾ, ಜಯತ್ರಿಪಾಟಿ, ಉತ್ಪಾದನಾ ಮಾನ್ಯೇಜರ್ ಅಕ್ಷತ್ ಜೈನ್ , ಅಜೀತ, ವಿಜಯ ಮಾಹಾತೇಂಶ , ರಮೇಶ್ ನಾರಾಯಣಕರ್, ಶ್ರೀ ಬಾಲಾಜಿ ಹಾರ್ಡ್ ವೇರ್ ಗ್ಯಾಲರಿಯ ಮಾಲೀಕರಾದ ರುದ್ರಣ್ಣ ಚಂದರಗಿ , ಸಾಗರ ಪಸೊಕರ್, ಶಿವಾನಂದ , ನಾರಾಯಣ ಕುಲಕರ್ಣಿ ಹಾಗೂ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 