ಸೋಗಿ ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು
Rs 5 lakh assistance for the construction of Sogi temple
ಹೂವಿನಹಡಗಲಿ 14: ತಾಲೂಕಿನ ಸೋಗಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿಯನೂತನ ದೇವಸ್ಥಾನದ ನಿರ್ಮಾಣಕ್ಕೆ 5.1 ಲಕ್ಷ ರೂ.ಗಳ ಚೆಕ್ ಅನ್ನು ಸೋಗಿ ಗ್ರಾಮದ ಪ್ರಗತಿ ಪರ ಕೃಷಿಕ ದಯಾಕರ ರೆಡ್ಡಿ ಅವರು ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಿವೃತ್ತ ನೌಕರರ ಸೇವಾ ಟ್ರಸ್ಟ್‌ಗೆ ಶುಕ್ರವಾರ ನೀಡಿದರು.
ಪ್ರಗತಿಪರ ಕೃಷಿಕ ಎಂ.ಬಿ.ಬಸವರಾಜ ಮಾತನಾಡಿ, ಪುರಾತನ ಕಾಲದ ಇತಿಹಾಸ ಹೊಂದಿರುವಂತಹ ಶ್ರೇಷ್ಠ ಶ್ರೀಸೋಗಿ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಪ್ರತಿ ವರ್ಷದ ಪದ್ಧತಿ ಈ ವರ್ಷವೂ ಕೂಡ ಸೋಗಿ ಗ್ರಾಮದಲ್ಲಿ ರೇಣುಕಾಯಲ್ಲಮ್ಮ ದೇವಿಯ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ. ವಿಶೇಷ ಮಹಿಮೆಯನ್ನು ಹೊಂದಿರುವ ದೇವಿಯ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲು ಗ್ರಾಮದ ನಿವೃತ್ತ ನೌಕರರ ಸೇವಾ ಟ್ರಸ್ಟ್ ಮುಂದಾಗಿದೆ. ಈ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಗ್ರಾಮದ ಸರ್ವ ಸದಸ್ಯರು ಸೇರಿಕೊಂಡು ಅವರಿಗೆ ಹಾಗೂ ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಡಿ.ಕೊಟ್ರೇಶ್, ಗುರುಶಂರ್, ಎಚ್.ಮಂಜುನಾಥ, ಚನ್ನಬಸಯ್ಯ, ಎಚ್.ಮಂಜುನಾಥ, ಯಾತದ ವೀರ್ಪ, ಪತ್ರ್ಪ, ಜೀಬಿವುಲ್ಲಾ, ಮಲ್ಲಣ್ಣ, ಮಂಜುನಾಥ, ಮಲ್ಲಿನಾಥ, ಕೊಟ್ರ್ಪ, ಚಂದ್ರ್ಪ ಇತರರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 