ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ 2 ಲಕ್ಷ ನೆರವು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ 2 ಲಕ್ಷ ನೆರವು  Rs 2 lakh aid from the Dharmasthala Rural Development Scheme for the renovation of Veerabhadreshwara

ಲಕ್ಷ್ಮೇಶ್ವರ 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಗೊಜನೂರು ವಲಯದ ಅಕ್ಕಿಗುಂದ ಕಾರ್ಯಕ್ಷೇತ್ರದ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ?2 ಲಕ್ಷ ಅನುದಾನ ವಿತರಿಸಲಾಯಿತು.  ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ?2 ಲಕ್ಷದ ಅನುದಾನದ ಚೆಕ್ ಅನ್ನು ದೇವಸ್ಥಾನ ಸಮಿತಿಗೆ ಹಸ್ತಾಂತರಿಸಲಾಯಿತು.  

ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಣ್ಣದಯ್ಯ ಶಿವಯ್ಯ ಶಂಖಿನಮಠ, ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಉಪಾಧ್ಯಕ್ಷ ನೀಲಪ್ಪ ಚನ್ನಬಸಪ್ಪ ಪಣಿ, ತಾಲೂಕು ಯೋಜನಾಧಿಕಾರಿ ಪುನೀತ್ ಓಲೇಕಾರ, ಸಮಿತಿ ಸದಸ್ಯರಾದ ಬಸಯ್ಯ ಮಲ್ಲಿಮಠ, ಬಸವೇನಪ್ಪ ತೋಟದ, ಶಂಕ್ರ​‍್ಪ ಬೆಂತೂರು, ವೀರಭದ್ರಯ್ಯ ಪೂಜಾರ, ರಾಮದೇವ ಮಾದ್ರಿ, ಗ್ರಾಮದ ಮುಖಂಡರಾದ ಶೇಖಪ್ಪ ಬಟ್ಟೂರು, ವೆಂಕಪ್ಪ ಲಮಾಣಿ, ಶರಣಯ್ಯ ಹಿರೇಮಠ, ವಲಯ ಮೇಲ್ವಿಚಾರಕ ಗಂಗೋತ್ರಿ ಗೌಡ, ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.