ರಾಮಪೂರದಲ್ಲಿ ರಸ್ತೆ ್ಘ ಚರಂಡಿ ನಿರ್ಮಾಣಕ್ಕೆ ರೂ.50 ಲಕ್ಷ ಮಂಜೂರು : ಶಾಸಕ ಗಣೇಶ ಹುಕ್ಕೇರಿ ಚಾಲನೆ

ರಾಮಪೂರದಲ್ಲಿ ರಸ್ತೆ ್ಘ ಚರಂಡಿ ನಿರ್ಮಾಣಕ್ಕೆ ರೂ.50 ಲಕ್ಷ ಮಂಜೂರು : ಶಾಸಕ ಗಣೇಶ ಹುಕ್ಕೇರಿ ಚಾಲನೆ Rs. 50 lakh sanctioned for construction of road drainage in Rampur: MLA Ganesh Hukkeri launches

ಚಿಕ್ಕೋಡಿ 22 : ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ರಾಮಪೂರ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ರೂ.50.00 ಲಕ್ಷಗಳ ಅನುದಾನ ಮಂಜೂರಾಗಿದ್ದು, ಈ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ಗ್ರಾಮಸ್ಥರು ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರು ಮಾಡುವಂತೆ ಶಾಸಕರಾದ ಗಣೇಶ ಹುಕ್ಕೇರಿ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿಗಳು ಮತ್ತು ವಿಧಾನ ಪರಿಷತ್ ಸದಸ್ಯರಾದ  ಪ್ರಕಾಶ ಬಾ ಹುಕ್ಕೇರಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು.  

ಈ ಹಿನ್ನೆಲೆಯಲ್ಲಿ ಸನ್ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿ ರೂ.50.00 ಲಕ್ಷಗಳ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಗ್ರಾಮಸ್ಥರಿಂದ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಇದಲ್ಲದೆ, ಈಗಾಗಲೇ ಚಿಕ್ಕಲವಾಳ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ರೂ.50.00 ಲಕ್ಷ, ಚಿಕ್ಕಲವಾಳ-ರಾಮಪೂರ ಸಂಪರ್ಕ ರಸ್ತೆಯಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ರೂ.2.00 ಕೋಟಿ ಹಾಗೂ ಚಿಕ್ಕಲವಾಳ ಗ್ರಾಮದ ಮರಾಠ ಸಮಾಜ ಸಮುದಾಯ ಭವನ ಪೂರ್ಣಗೊಳಿಸಲು ರೂ.10.00 ಲಕ್ಷ ಸೇರಿದಂತೆ ಒಟ್ಟು ರೂ.2.60 ಕೋಟಿಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.ಹಾಗೆಯೇ ಪಾಂಗೇರಿ-ಏ ಗ್ರಾಮದಲ್ಲಿ ಪಾಂಗೇರಿ-ಏ ರಿಂದ ಅಕ್ಕೋಳ ಗ್ರಾಮವರೆಗೆ ರಸ್ತೆ ನಿರ್ಮಾಣಕ್ಕೆ ರೂ.70.00 ಲಕ್ಷ ಹಾಗೂ ಮಧ್ಯದ ಸರ್ಕಾರಿ ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣಕ್ಕೆ ರೂ.70.00 ಲಕ್ಷಗಳ ಕಾಮಗಾರಿಗಳು ಪೂರ್ಣಗೊಂಡಿವೆ. 

 ಜೊತೆಗೆ ಪಾಂಗೇರಿ-ಏ ಗ್ರಾಮದ ಹನುಮಾನ ದೇವಸ್ಥಾನ ಪೂರ್ಣಗೊಳಿಸಲು ರೂ.7.00 ಲಕ್ಷಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು ರೂ.1.47 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣ ಹಾಗೂ ಪ್ರಗತಿಯಲ್ಲಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣಕುಡಿ ಗ್ರಾಮದ ಮಾಜಿ ಗ್ರಾ.ಪಂ ಅಧ್ಯಕ್ಷ ವಿಧ್ಯಾದರ ಕಾಗೆ, ರಾಮಪೂರ ಗ್ರಾಮದ ತಾತ್ಯಾಸಾಬ ಬಂಕಾಪೂರೆ, ಅಣ್ಣಾಸಾಬ ಲೋಹಾರ, ಮಹಾರುದ್ರ ಜಬಡೆ, ಅಣ್ಣಾಸಾಬ ತಾಂದಳೆ, ಶಶಿಕಾಂತ ನೇಸರೆ, ಮಲಗೌಡಾ ಪಾಟೀಲ, ಲಕ್ಷ್ಮಣ ಸಂಕಪಾಳ, ಸುನೀಲ ಸಂಕಪಾಳ, ಉತ್ತಮ ತಾಂದಳೆ, ಕುಮಾರ ಜಾಧವ, ಸಚೀನ ಪವಾರ, ಸುರಜ ಕುಂಬಾರ, ವಿಜಯ ದಾವಣೆ, ಶಂಕರ ವಡ್ಡರ, ಸುರೇಶ ಕುಂಬಾರ ಹಾಗೂ ಚಿಕ್ಕಲವಾಳ ಮತ್ತು ಪಾಂಗೇರಿ ಗ್ರಾಮಗಳ ಮಾಣಿಕ ಪಾಟೀಲ, ಬಾಬುರಾವ ಪಾಟೀಲ, ಅಶೋಕ ಸಟಾಲೆ, ಸಂಜು ಚೌಗುಲಾ, ನಿಲಕು ಪಾಟೀಲ, ರಾಜು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.