ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.ನವನಗರ ಕಾಳಿಕಾ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ನಿಗಮದ ಅಧ್ಯಕ್ಷ ಪಿ .ಸುಜ್ಞಾನಮೂರ್ತಿ

ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.ನವನಗರ ಕಾಳಿಕಾ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ನಿಗಮದ ಅಧ್ಯಕ್ಷ ಪಿ .ಸುಜ್ಞಾನಮೂರ್ತಿ Rs. 50 crore to Vishwakarma Development Corporation. Corporation President P. Sugnanamurthy at the V

ನವನಗರ (ಹುಬ್ಬಳ್ಳಿ) 03:   ಇಲ್ಲಿನ ಪಂಚಾಕ್ಷರಿ ನಗರದಲ್ಲಿರುವ ಶ್ರೀ ಕಾಳಿಕಾ ದೇವಸ್ಥಾನದ ಎರಡನೇ ವರ್ಷದ ವರ್ಧಂತಿ ಉತ್ಸವ  ಮಂಗಳವಾರ ವಿಜೃಂಭಣೆಯಿಂದ ಜರುಗಿತು.ಅಂದು ಮಧ್ಯಾಹ್ನ ಜರುಗಿದ ಧಾರ್ಮಿಕ ಸಭೆಯಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನ ಮೂರ್ತಿ ಅವರು, ಶ್ರೀ ಕಾಳಿಕಾ ದೇವಸ್ಥಾನದ ಜಾಲತಾಣವನ್ನು ಅನಾವರಣಗೊಳಿಸಿ ಮಾತನಾಡಿ, "ರಾಜ್ಯದಲ್ಲಿ ಹಿಂದುಳಿದ ವರ್ಗಗಳ 2- ಎ ಗುಂಪಿನ ಸಮುದಾಯಗಳ ಜನಸಂಖ್ಯೆಯಲ್ಲಿ  ವಿಶ್ವಕರ್ಮ ಸಮುದಾಯ ಎರಡನೇ ಸ್ಥಾನದಲ್ಲಿದ್ದು , ಸರ್ಕಾರ ಈ ವರ್ಷ ವಿಶ್ವಕರ್ಮ ನಿಗಮಕ್ಕೆ 50 ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಆದ್ದರಿಂದ ,ನಿಗಮದ ಯೋಜನಾ ಗುರಿಯನ್ನು ಈ ವರ್ಷ ದ್ವಿಗುಣಗೊಳಿಸಲಾಗಿದೆ. ವಿಶ್ವಕರ್ಮ ಸಮಾಜದ ಯುವಜನರು ಮತ್ತು ಸ್ವಯಂ ಉದ್ಯೋಗ ಸಾಲದ ಆಕಾಂಕ್ಷಿಗಳು ನಿಗಮದ ವಿವಿಧ ಯೋಜನೆಗಳ ಪ್ರಯೋಜನವನ್ನು  ಪಡೆದುಕೊಳ್ಳಬೇಕು "ಎಂದು ಕರೆ ನೀಡಿದರು.

ವರ್ಧಂತಿ ಉತ್ಸವಕ್ಕೆ ಚಾಲನೆ ನೀಡಿದ ಮಾಜಿ ಮಹಾಪೌರ ರಾಮಣ್ಣ ಬಡಿಗೇರ ಅವರು ಮಾತನಾಡಿ, "ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಸಮುದಾಯದ ನಿವೇಶನ ಹಾಗೂ ಕಟ್ಟಡ ಕಾಮಗಾರಿಗಳಿಗೆ ಶಾಸಕರ ನಿಧಿ ಹಾಗೂ ಸರ್ಕಾರದಿಂದ ಈ ವರ್ಷ ತಕ್ಕಮಟ್ಟಿನ ಅನುದಾನ ಲಭ್ಯವಾಗಿದ್ದು, ಸಮಾಜಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ಅನುದಾನ ಅಗತ್ಯವಿದೆ. ಅನುದಾನ ದೊರಕಿಸುವಲ್ಲಿ ನಿಗಮದ ಅಧ್ಯಕ್ಷರು ನೆರವಾಗಬೇಕು "ಎಂದು ವಿನಂತಿಸಿದರು.ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಸಂತ ಅರ್ಕಾಚಾರ ಅವರು ಮಾತನಾಡಿ "ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ನವನಗರದ ಶ್ರೀ ಕಾಳಿಕಾ ದೇವಸ್ಥಾನದ ಸಮುದಾಯ ಭವನಕ್ಕೆ 3.5 ಲಕ್ಷ ರೂಗಳ ಅನುದಾನವನ್ನು ನೀಡಿದೆ"ಎಂದರು.