25 ಲಕ್ಷ ರೂ. ವೆಚ್ಚದ ಉದ್ಯಾನವನಕ್ಕೆ ಚಾಲನೆ

25 ಲಕ್ಷ ರೂ. ವೆಚ್ಚದ ಉದ್ಯಾನವನಕ್ಕೆ ಚಾಲನೆ Rs. 25 lakh park inaugurated

ಉದ್ಯಾನವನಗಳು ವಿಶ್ರಾಂತಿ ಪಡೆಯಲು, ಆಟವಾಡಲು ಮತ್ತು ಪ್ರಕೃತಿಯೊಂದಿಗೆ ಬೆರೆಯಲು ಒಂದು ಸುಂದರವಾದ ಸ್ಥಳ. ಉದ್ಯಾನವನಗಳು ನಗರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸುವ  ಯೋಜನೆ  ರೂಪಿಸಲಾಗಿದೆ ಈ ಉದ್ಯಾನವನವನ್ನು  ವಾಯು ವಿಹಾರಕ್ಕಾಗಿ ಜನಸಾಮಾನ್ಯರು ಮತ್ತು ವಿಧ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.  

ಬೀದರ್ ದಕ್ಷಿಣ ಕ್ಷೇತ್ರದ ಗೋರನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶಿವಾಜಿನಗರದಲ್ಲಿ  ನಗರಾಭಿವೃಧಿ ಪ್ರಾಧಿಕಾರದ ಅನುದಾನದಡಿಯಲ್ಲಿ 25 ಲಕ್ಷ ರೂ. ವೆಚ್ಚದ ಉದ್ಯಾನವನ ನಿರ್ಮಾಣಕ್ಕೆ  ಚಾಲನೆ ನೀಡಿ ಅವರು ಮಾತನಾಡಿದರು.  

ಇಂದಿನ  ಒತ್ತಡದ ದಿನಮಾನಗಳಲ್ಲಿ  ಉದ್ಯಾನವನಗಳು ಅತ್ಯಂತ ಅವಶ್ಯಕ, ಉದ್ಯಾನವನ ವಾಯು ವಿಹಾರಕ್ಕೆ. ವಿಶ್ರಾಂತಿ ಮತ್ತು ಯೋಗಾಸನ ಮಾಡಲು ಉತ್ತಮ  ಸ್ಥಳವಾಗಿರುತ್ತದೆ. ಮಕ್ಕಳು ಆಟವಾಡಲು ಮತ್ತು ವಯಸ್ಕರು ವ್ಯಾಯಾಮ ಮಾಡಬಹುದು. ಈ ಉದ್ಯಾನವನದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳನ್ನು ನೋಡಲು ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು  ಪ್ರಮುಖ ಸ್ಥಳವಾಗಿರುತ್ತದೆ ಪ್ರತಿಯೊಬ್ಬರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.   ಉದ್ಯಾನವನದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಬೇಕು, ಸಸ್ಯಗಳು ಮತ್ತು ಪಕ್ಷಿಗಳಿಗೆ ಹಾನಿ ಮಾಡಬಾರದು, ದೊಡ್ಡ ಶಬ್ದ ಮಾಡಬಾರದು. ಉದ್ಯಾನವನಗಳು ನಮಗೆಲ್ಲರಿಗೂ ಮುಖ್ಯವಾದ ಸ್ಥಳಗಳಾಗಿರುತ್ತದೆ. ಅವುಗಳನ್ನು ಸಂರಕ್ಷಿಸುವುದು ಮತ್ತು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ. ಆಟವಾಡಲು ಇಷ್ಟಪಡುವ ಮಕ್ಕಳಿಗೆ ಈ ಉದ್ಯಾನವನ ಸೂಕ್ತವಾಗಿದೆ. ಮಕ್ಕಳಿಗಾಗಿ ಉದ್ಯಾನವನದ ಪ್ರಯೋಜನಗಳು ಮಕ್ಕಳು ಹೊರಾಂಗಣದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ ಹೀಗಾಗಿ  ಉದ್ಯಾನವನಗಳ ಬಗ್ಗೆ ಒಂದು ಉತ್ತಮ ವಿಷಯವೆಂದರೆ ಅವು ದೈಹಿಕ ಚಟುವಟಿಕೆಗೆ ಅವಕಾಶವನ್ನು ನೀಡುತ್ತವೆ. ಉದ್ಯಾನವನಗಳಲ್ಲಿ ಸಮಯ ಕಳೆಯುವ ಮಕ್ಕಳು, ಸಮಯ ಕಳೆಯದವರಿಗಿಂತ ಹೆಚ್ಚು ದೈಹಿಕವಾಗಿ ಸಕ್ರಿಯರಾಗಿರುತ್ತಾರೆ.  

ಇದು ದೀರ್ಘಾವಧಿಯ ಜೀವಿತಾವಧಿ ಮತ್ತು ಒಟ್ಟಾರೆಯಾಗಿ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ. ಉದ್ಯಾನವನಗಳು ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ಕಲಿಯಲು ಅವಕಾಶಗಳನ್ನು ನೀಡುತ್ತವೆ. ಹೊಸ ಸ್ನೇಹಿತರನ್ನು ಭೇಟಿ ಮಾಡಬಹುದು, ಆಟಗಳನ್ನು ಆಡಬಹುದು ಮತ್ತು ಪರಿಸರವನ್ನು ಒಟ್ಟಿಗೆ ಅನ್ವೇಷಿಸಬಹುದು. ಉದ್ಯಾನವನದ ನಿಯಮಗಳನ್ನು ಪಾಲಿಸುವುದು ಯಾವಾಗಲೂ ಅತ್ಯಗತ್ಯ. ಈ ನಿಯಮಗಳು ಎಲ್ಲರನ್ನೂ ಸುರಕ್ಷಿತವಾಗಿ ಮತ್ತು ಸಂತೋಷವಾಗಿಡುತ್ತವೆ.  ಮಕ್ಕಳು ಉದ್ಯಾನವನಕ್ಕೆ ಬಂದಾಗ ಮತ್ತು ಹೋಗುವಾಗ ಜಾಗರೂಕರಾಗಿರಬೇಕು ಮತ್ತು ಏನಾದರೂ ಅಪಾಯಕಾರಿ ವಸ್ತುವನು ಕಂಡರೆ ಸರರ್ಕಾರದ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ  ಬಾಬುರಾವ ಮಲ್ಕಾಪುರೆ, ಶಿವಕುಮಾರ ಸ್ವಾಮಿ, ಉದಯಕುಮಾರ ತೋರಣ, ಶಶಿಧರ ಹೊಸಳ್ಳಿ, ರಾಜರಾಮ ಚಿಟ್ಟಾ, ವಿಜಯಕುಮಾರ ಪಾಟೀಲ್,  ಜೋಸೇಫ್ ಕೊಡ್ಡೆಕರ್, ಸಂತೋಷ ರೆಡ್ಡಿ, ಚಂದ್ರಕಾಂತ ತೋರಣ, ರಾಜಶೇಖರ ನೌಬಾದ, ಗಜಾನಂದ ತೋರಣ, ಸಂಜುಕುಮಾರ ಪಾಟೀಲ, ಸಾಯಿನಾಥ ಮೇತ್ರಿ, ಹಣಮಂತ ಕೊಂಡಿ, ರಾಜಕುಮಾರ ಬಾವಗೆ , ದೀಲೀಪ ಗುಮ್ಮಾ, ಶಿವರಾಜ ಗ್ಯಾನಪನೋರ,  ಶಿವಕುಮಾರ ಗುಮ್ಮಾ, ವೀರೇಶ ಜಾಂತಿಕರ, ಸಂಗಮೇಶ, ಬಲವಂತ ರೆಡ್ಡಿ,  ಮತ್ತಿತರರು ಉಪಸ್ಥಿತರಿದ್ದರು.