ಕಾಡಾಪೂರ ಅಭಿವೃದ್ಧಿಗೆ 1.65 ಕೋಟಿ ರೂ. ಅನುದಾನ ಮಂಜೂರು: ಪ್ರಕಾಶ ಹುಕ್ಕೇರಿ
Rs. 1.65 crore grant sanctioned for Kadapur development: Prakash Hukkeri
ಚಿಕ್ಕೋಡಿ 12: ಕೃಷ್ಣಾ ನದಿಯ ಭೀಕರ ಪ್ರವಾಹ ಸಂದರ್ಭದಲ್ಲಿ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಕಾಡಾಪೂರ ರಸ್ತೆ ಜೀವನಾಡಿಯಾಗಿತ್ತು. ಅದನ್ನು ಮತ್ತಷ್ಟು ಅಗಲಿಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಡಾಪೂರ ಸಮಗ್ರ ಅಭಿವೃದ್ಧಿಗೆ 1.65 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಡಾಪೂರ ಗ್ರಾಮದ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ, ಸುಧಾರಿತ ಬೀದಿ ದೀಪಗಳ ಅಳವಡಿಕೆ ಮತ್ತು ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. 2019ರಲ್ಲಿ ಕೃಷ್ಣಾ ನದಿಯ ಭೀಕರ ಪ್ರವಾಹದ ಸಂದರ್ಭದಲ್ಲಿ ಕಾಡಾಪುರ ಗ್ರಾಮದ ಮುಖ್ಯ ರಸ್ತೆ ಜನಸಂಚಾರಕ್ಕೆ ಜೀವನಾಡಿಯಾಗಿತ್ತು. ಆ ಸಂದರ್ಭದಲ್ಲಿ ಹಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಅಗತ್ಯ ವಸ್ತುಗಳ ಸರಬರಾಜಿಗೆ ಈ ರಸ್ತೆ ಪ್ರಮುಖ ಪಾತ್ರ ವಹಿಸಿತು. ಆ ಬಳಿಕ ಗ್ರಾಮಸ್ಥರು ಈ ರಸ್ತೆಯ ಅಗಲೀಕರಣ ಹಾಗೂ ಸುಧಾರಣೆಗಾಗಿ ನಿರಂತರವಾಗಿ ಬೇಡಿಕೆ ಅನುಗುಣವಾಗಿ ಕಾಡಾಪೂರ ಅಭಿವೃದ್ಧಿಗೆ 1.65 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು.
ಸರ್ಕಾರದ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡುತ್ತೇವೆ. ಗ್ರಾಮ ಪಂಚಾಯಿತಿಯಿಂದ ಹೊಸ ಬಸ್ ನಿಲ್ದಾಣದವರೆಗೆ ಸಂಪರ್ಕ ಸುಗಮಗೊಳ್ಳುವುದು ಮಾತ್ರವಲ್ಲ, ಮಳೆಗಾಲದಲ್ಲಿ ಎದುರಾಗುತ್ತಿದ್ದ ನೀರಿನ ನಿಲುವು ಮತ್ತು ಸಂಚಾರ ತೊಂದರೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ನಂತರ ಗ್ರಾಮದ ಹಿರಿಯ ಮುಖಂಡ ಪ್ರಕಾಶ ರಾಚಣ್ಣವರ ಮಾತನಾಡಿ ನಮ್ಮ ನಾಯಕರಾದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕರಾದ ಗಣೇಶ ಹುಕ್ಕೇರಿ ಅವರ ದೃಢ ಸಂಕಲ್ಪದಿಂದ ಈ ಯೋಜನೆ ಪ್ರಾರಂಭವಾಗಿದೆ. ಆರ್‌ಸಿಸಿ ಚರಂಡಿ, ಅಗಲೀಕರಣ ಹಾಗೂ ಬೀದಿ ದೀಪಗಳ ಅಳವಡಿಕೆಯಿಂದ ಗ್ರಾಮಕ್ಕೆ ಹೊಸ ರೂಪ ಸಿಗಲಿದೆ. ಗ್ರಾಮಸ್ಥರ ಪರವಾಗಿ ಇಬ್ಬರು ನಾಯಕರಿಗೂ ಧನ್ಯವಾದಗಳು ಎಂದು ಹೇಳಿದರು.
ಈ ವೇಳೆ ಅಪ್ಪು ಸನದಿ, ಸಂಭಾಜಿ ಪವಾರ, ಶಿವಾಜಿ ಶಿಂದೆ, ರವಿ ತುಬಾಕೆ, ಭಾರತ ಕೋಳೇಕರ, ನಂದು ಕೋಳೇಕರ, ಅಶೋಕ ತುಬಾಕೆ, ದಾಸು ಪಾಂಡರೆ, ಕುಮಾರ ವಾಘಮೋರೆ, ಮೆಚ್ಚೆಂದ್ರ ಕಾಡಾಪುರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 