ರೋಜಗಾರ್ ದಿವಸ್ - ಮಾಹಿತಿ ವಿನಿಮಯ
Rozgar Diwas - Information Exchange
ಲೋಕದರ್ಶನ ವರದಿ
ಕಾರವಾರ 20 :- ದುಡಿಯುವ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯು ಕೂಲಿಕಾರರಿಗೆ ಬೆಂಬಲ ನೀಡುತ್ತಿದ್ದು, ಶಿರಸಿ ತಾಲೂಕಿನ ಕಡತೋಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಕ್ಕಾರ ಕುಟ್ಲಿ ಗ್ರಾಮದಲ್ಲಿ ಮಹಿಳಾ ಕೂಲಿಕಾರರೇ ಸೇರಿ ಹಳ್ಳ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದು, ನರೇಗಾ ಯೋಜನೆಯ ಸದುಪಯೋಗದ ಕುರಿತು ಮಾದರಿಯಾಗಿದ್ದಾರೆ.
ಈ ಗ್ರಾಮದಲ್ಲಿ ನರೇಗಾದಡಿ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ಥಳೀಯ ಹೆಣ್ಣುಮಕ್ಕಳು ಕೆಲಸಕ್ಕೆ ತಾವೇನು ಕಮ್ಮಿ ಇಲ್ಲಾ ಎಂಬಂತೆ ಗುದ್ದಲಿ, ಸಲಾಕಿ, ಬುಟ್ಟಿ ಹಿಡಿದು ಊರಿನ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿದ್ದಾರೆ.
ಈ ವೇಳೆ ಕೂಲಿಕಾರರೊಂದಿಗೆ ನರೇಗಾ ಯೋಜನೆಯ ಮಾಹಿತಿ ವಿನಿಮಯ ಮಾಡುವ "ರೋಜಗಾರ್ ದಿನ" ಆಚರಿಸಿ, ಕೂಲಿಕಾರರಿಗೆ ಯೋಜನೆಯಡಿ ಸಿಗುವ ವೈಯಕ್ತಿಕ ಹಾಗೂ ಸಾಮೂದಾಯಿಕ ಸೌಲಭ್ಯಗಳು, ಕೂಲಿಕಾರರ ಕೆಲಸದ ಅವಧಿ, ಕೂಲಿ ಮೊತ್ತ, ಹಾಗೂ ಕೆಲಸಗಾರರ ಆರೋಗ್ಯ ವಿಮೆ, ಇ-ಕೆವೈಸಿ ಮಾಡಿಸಿಕೊಳ್ಳುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹರಿಣಿ ನಾಯ್ಕ ಹಾಗೂ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾಹಿತಿ ನೀಡಿದರು.
ಎನ್‌ಎಂಎಂ ಹಾಜರಾತಿ ಕಡ್ಡಾಯವಾಗಿರುವುದರಿಂದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಅಳತೆಗೆ ತಕ್ಕಂತೆ ಕೆಲಸ ಪೂರೈಸಿದರೆ ಮಾತ್ರ ಪೂರ್ತಿ ಕೂಲಿ ಹಣ ಸಂದಾಯವಾಗುತ್ತದೆ ಎಂದು ತಾಂತ್ರಿಕ ಸಹಾಯಕಿ ಜೋಸ್ನಾ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಬಿಎಫ್‌ಟಿ ಶ್ರೀಧರ್ ಪಟಗಾರ್ ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 