ರೋಟರಿ ಇಂಟರ್ಯಾಕ್ಟ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ರೋಟರಿ ಇಂಟರ್ಯಾಕ್ಟ ಕ್ಲಬ್ ಪದಾಧಿಕಾರಿಗಳ ಪದಗ್ರಹಣ  Rotary Interact Club office bearers sworn in program

ಬೆಳಗಾವಿ 13: ವಿದ್ಯಾರ್ಥಿಗಳಲ್ಲಿಯ ನಾಯಕತ್ವ ಗುಣಕ್ಕೆ ನೀರೆದು ಪೋಷಿಸುವ ಕೆಲಸವನ್ನು ಬೆಳಗಾವಿಯ ರೋಟರಿ ಮಿಡ್ ಟೌನ್ ಸಂಸ್ಥೆಯು ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ರಾಷ್ಟ್ರೇ​‍್ರಮ, ಸಹೋದರತ್ವ, ಸೌಹಾರ್ದ, ಕಾಯಕ, ದಾಸೋಹ ಪರಿಸರ ಪ್ರಜ್ಞೆ, ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿ, ಉತ್ತಮ ಪ್ರಜೆಗಳನ್ನಾಗಿ ರೂಪಗೊಳಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು. ಎಂದು ಖ್ಯಾತ ಉದ್ಯಮಿ .ರೋ ದೀಲೀಪ್ ಚಿಟ್ನಿಸ್ ಅವರು ಹೇಳಿದರು.  

ದಿ. 11ರಂದು ಎಮ್‌.ವ್ಹಿ.ಹೇರವಾಡಕರ ಪ್ರೌಢಶಾಲೆಯ ಸಭಾಂಗಣದಲ್ಲಿ ರೋಟರಿ ಇಂಟರ್ಯಾಕ್ಟ ( ಋಣಜಡಿಚಿಛಿಣ ಛಿಟಣಛ )ಕ್ಲಬ್ ಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ಎಮ್ ವ್ಹಿ ಹೇರವಾಡಕರ ಇಂಗ್ಲಿಷ್ ಪ್ರೌಢಶಾಲೆಯ ಇಂಟರಾಕ್ಟ ಕ್ಲಬ್ ಅಧ್ಯಕ್ಷರಾಗಿ ಪವಿತ್ರಾ ಮನ್ನೇರಿ, ಕಾರ್ಯದರ್ಶಿಯಾಗಿ ಸಮರ್ಥ ರೇವಣಕರ ಸೆಂಟಮೆರಿ ಇಂಗ್ಲೀಷ ಪ್ರೌಢಶಾಲಾ ಇಂಟರಾಕ್ಟ ಕ್ಲಬ್ ಅಧ್ಯಕ್ಷರಾಗಿ ರಾವು ಬಾಲದಾರ, ಕಾರ್ಯದರ್ಶಿಯಾಗಿ ಸಬೀನಾ ರೇಹಾನ್, ಸಂತಮೀರಾ ಇಂಗ್ಲಿಷ್ ಪ್ರೌಢಶಾಲಾ ಇಂಟರಾಕ್ಟ ಕ್ಲಬ್ ಅಧ್ಯಕ್ಷರಾಗಿ ಶ್ರೇಯಸ್ ಚಂದನ, ಕಾರ್ಯದರ್ಶಿಯಾಗಿ ಸೃಷ್ಟಿ ಬೊಂಗಾಳೆ. ವಾಯ್ ವಿ.ಎಸ್ ಹಂಜಿ ಯಮಕನಮರ್ಡಿ ಪ್ರೌಢಶಾಲಾ ಇಂಟರಾಕ್ಟ ಕ್ಲಬ್ ಅಧ್ಯಕ್ಷರಾಗಿ ಸೌಮ್ಯ ನಿರ್ಮಲ, ಕಾರ್ಯದರ್ಶಿಯಾಗಿ ಅಭಯ ಹಂಜಿ. ಸೇವಾ ದೀಕ್ಷೆಯನ್ನು ಪಡೆದುಕೊಂಡರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ರೊ.ಉದಯಸಿಂಗ ರಜಪೂತರು ಮಾತನಾಡುತ್ತಾ ಶಾಲಾ ಆವರಣವು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡಲು ಶ್ರಮಿಸಬೇಕು ಅಲ್ಲದೇ ನೀರನ್ನು ಮಿತವ್ಯಯವಾಗಿ ಬಳಿಸಿ ಮುಂದಿನ ಪೀಳಿಗೆಗೆ ಸಹಾಯಮಾಡಬೇಕು. ಹೊಟೆಲ್‌ಗಳಿಗೆ ಹೋದಾಗ ಅಲ್ಲಿ ಅವರು ನಿಮಗೆ ನೀರನ್ನು ಗ್ಲಾಸಿನಲ್ಲಿ ತುಂಬಿ ಕೊಡುತ್ತಾರೆ. ಅದರಲ್ಲಿ ಸ್ವಲ್ಪವೇ ನೀರನ್ನು ಕುಡಿದು ಉಳಿದ ನೀರನ್ನು ಹಾಳು ಮಾಡುತ್ತಿರಿ. ಅಂತಹ ಹೊಟೆಲ್ ಗಳಲ್ಲಿ ಒನ್ ಬಾಯ್ ಟು ಪದ್ಧತಿಯನ್ನು ಅನುಸರಿಸಿರಿ ನೀರು ಉಳಿಸುವ ಅಭಿಯಾನ ಮಾಡಲು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.  

ವೇದಿಕೆಯ ಮೇಲೆ ರೊ.ನಂದನ ಬಾಗಿ, ಅಶೋಕ ಬದಾಮಿ, ಪ್ರಾಂಶುಪಾಲರಾದ ಶೋಭಾ ಕುಲಕರ್ಣಿ ಇದ್ದರು. ಹೇರವಾಡಕರ ಪ್ರೌಢಶಾಲಾ ವಿದ್ಯಾರ್ಥಿನಿಯರು ನಿರೂಪಣೆ ಹಾಗೂ ವಂದನಾರೆ​‍್ಣ ಮಾಡಿದರು. ಅಶೋಕ ಮಳಗಲಿ, ಮನೋಹರ ಜರತಾರಕರ, ರಾಮ ಸಾಂಗಲೆ, ಸತೀಶ ನಾಯಕ, ರಾಜೀವ ದೇಶಪಾಂಡೆ, ರೂಪಾ ದೇಶಪಾಂಡೆ, ಹೇರವಾಡಕರ ಶಾಲಾ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.