ಭಾರೀ ಗಾಳಿ, ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ
Roof blown off by heavy winds and rain
ಭಾರೀ ಗಾಳಿ, ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ
ದೇವರಹಿಪ್ಪರಗಿ, 26 : ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆ, ಗಾಳಿಗೆ 12 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಗ್ರಾಮದ ಸಿದ್ದಪ್ಪ.ಮ. ಬಸರಕೋಡ, ರೇಣುಕಾ. ಮು. ಸಾಲೋಟಗಿ, ಶರಣಪ್ಪ.ತಿ. ನಾಟೀಕಾರ, ಯಲ್ಲವ್ವ. ನ. ಕೋಳಿ, ಸಾಹೇಬಗೌಡ. ಗು. ಖ್ಯಾಡಗಿ, ನಾನಾಗೌಡ.ಸಾ. ಬಿರಾದಾರ, ಬಸವರಾಜ.ಸಾ. ಬಿರಾದಾರ, ಮಲಕಪ್ಪ. ನಿಂ. ನಾಯ್ಕೋಡಿ, ಸಾಯಬಣ್ಣ. ಶ. ಸೊನ್ನಳ್ಳಿ, ಬಾಬು.ಪ. ಕಟ್ಟಿಮನಿ, ಶ್ರೀಶೈಲ.ರಾ. ನಾಯ್ಕೋಡಿ, ಪರಸಪ್ಪ. ಶ. ನಾಯ್ಕೋಡಿ ಎಂಬುವರಿಗೆ ಸೇರಿದ ಮನೆಗಳ ಮೇಲ್ಛಾವಣಿಗಳ (ಪತ್ರಾಸು) ಹಾರಿ ಹೋಗಿವೆ. ಭಾರಿ ಗಾಳಿಯ ರಭಸಕ್ಕೆ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳು ಕೂಡಾ ಮಳೆಗೆ ಹಾಳಾಗಿವೆ. ಕೆಲವರು ರಾತ್ರಿ ಕಳೆಯಲು ಇತರರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಯಿತು.
ಪ್ರಕೃತಿ ವಿಕೋಪದಡಿ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ತಹಸೀಲ್ದಾರರನ್ನು ಒತ್ತಾಯಿಸಿದ್ದಾರೆ. ಜೊತೆಗೆ ಇದರಲ್ಲಿ ಆರೇಳು ಕುಟುಂಬಗಳು ಜೋರಾಗಿ ಮಳೆ ಬರುವಾಗ ಮನೆಯಲ್ಲಿ ಕುಳಿತಿರುವ ಸಂದರ್ಭದಲ್ಲಿ ಮನೆಗೆ ಹಾಕಿದ್ದ ಪತ್ರಾಸಗಳು ಸಂಪೂರ್ಣ ಹಾರಿಹೋದರೂ ಮನೆ ಮಂದಿಗೆ ಅಚ್ಚರಿಯ ಮಾದರಿ ಯಾವುದೇ ಅವಗಡ ಸಂಭವಿಸಿಲ್ಲ. ಮಳೆಯಿಂದ ಮನೆಯಲ್ಲಿ ನಿಲ್ಲಲು ಆಸರೆಯಿಲ್ಲದಂತಾಗಿತ್ತು. ಇದಲ್ಲದೆ ಗ್ರಾಮದಲ್ಲಿ ಅಲ್ಲಲ್ಲಿ ಗಿಡಮರಗಳು ನೆಲಕ್ಕುರುಳಿದ ಪರಿಣಾಮ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಕಳಿಯುವಂತಾಯಿತು. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸದ್ದಾಂ ಮುಲ್ಲಾ ಭೇಟಿ ನೀಡಿ ಪರೀಶೀಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 