ಆರೋಗ್ಯ ರಕ್ಷಣೆಯಲ್ಲಿ ಓಷಧಿಕಾರರ ಪಾತ್ರ ಪ್ರಮುಖ : ತುಳಸಿಗೇರಿ
Role of pharmacists in healthcare is important: Tulsigeri
ಹಾರೂಗೇರಿ, 25 : ಆರೋಗ್ಯ ರಕ್ಷಣೆಯಲ್ಲಿ ಓಷಧಿಕಾರರ ಪಾತ್ರ ಪ್ರಮುಖವಾಗಿದ್ದು, ವೈದ್ಯ ಓಷಧಿಯ ಮೂಲಕ ರೋಗಿಗೆ ಜೀವ ತುಂಬಿದರೆ, ಫಾರ್ಮಾಸಿಸ್ಟ್ ತನ್ನ ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಓಷಧಿಗೆ ಜೀವವನ್ನು ನೀಡುತ್ತಾನೆ ಎಂದು ಓಷಧ ವ್ಯಾಪಾರಿಗಳ ಸೇವಾ ಸಂಘದ ಅಧ್ಯಕ್ಷ ಬಸವರಾಜ ತುಳಸಿಗೇರಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವ ಓಷಧಿಕಾರರ ದಿನದ ನಿಮಿತ್ತ ಸಸಿ ನೆಡುವ ಮತ್ತು ರೋಗಿಗಳಿಗೆ ಹಣ್ಣುಹಂಪಲು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ, ನಂಬಿಕೆಗೆ ಪ್ರತೀಕವಾದ ಫಾರ್ಮಾಸಿಸ್ಟ್‌ಗಳ ಸೇವೆಗೆ ಋಣಿಯಾಗಿರಬೇಕು ಎಂದು ಹೇಳಿದರು.
ವಿಶ್ವ ಓಷಧಿಕಾರರ ದಿನದ ಅಂಗವಾಗಿ ಪಟ್ಟಣದ 10ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ವಿವೇಕ ನಾರಗೊಂಡ, ಉಪಾಧ್ಯಕ್ಷರಾದ ಹನಮಂತ ಕುಲಗೋಡ, ರಾಮು ದರೂರ, ಷಣ್ಮುಖ ತೇರದಾಳ, ಕಾರ್ಯದರ್ಶಿ ಪರಮೇಶ ಬಾಡಗಿ, ಖಜಾಂಚಿ ಅನಿಲ ಬಾಗೇವಾಡಿ, ನಿರ್ದೇಶಕರಾದ ಸುರೇಶ ಶೇಡಬಾಳ, ಸಂತೋಷ ಸಿಂಗಾಡಿ, ದೊಡಗೌಡ ಪಾಟೀಲ, ಭರಮಪ್ಪ ಮಂಟೂರ, ಚಿದಾನಂದ ಕೊಕಟನೂರ, ಲೋಹಿತ ವಗ್ಗಾ, ರಮೇಶ ಹೊನವಾಡೆ, ಜಗದೀಶ ಪಾಟೀಲ, ರಾಜು ಪಡಲಾಳೆ, ಸಂತೋಷ ಪಾಟೀಲ ಮತ್ತಿತರರು ಉಪಸ್ತಿತರಿದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 