ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ
Road improvement work sanctioned by Public Works Department kicks off
ರಾಯಬಾಗ 27: ತಾಲ್ಲೂಕಿನ ಚಿಂಚಲಿ ಪಟ್ಟಣದಲ್ಲಿ ರವಿವಾರ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರಸ್ತೆ ಸುಧಾರಣಾ ಕಾಮಗಾರಿಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಹಾಗೂ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು.ನಂತರ ಸಂಸದರಾದ ಪ್ರೀಯಂಕಾ ಜಾರಕಿಹೊಳಿ ಮಾತನಾಡಿ, 2025-26 ನೇ ಸಾಲಿನ 10ಕೋಟಿ ರೂಗಳ ವೆಚ್ಚದಲ್ಲಿ ಚಿಂಚಲಿಯಿಂದ ಮೊರಬ ಮೂಲಕ ಅಳಗವಾಡಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿ ಮಾಡಿ ಎಂದು ಗುತ್ತಿಗೆ ದಾರರಿಗೆ ಸಲಹೆ ನೀಡಿದರು.ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ರಸ್ತೆಗೆ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಹಾವೀರ ಮೊಹಿತೆ, ಜೀತೇಂದ್ರ ಜಾಧವ, ಅಪ್ಪಾಸಾಹೇಬ ಕುಲಗುಡ, ಶಿವಗೌಂಡ ಪಾಟೀಲ್, ಜ್ಯೋತಿ ಕೆಂಪಟ್ಟಿ, ನಾಮದೇವ ಕಾಂಬಳೆ, ಕವಿತಾ ಯಡ್ರಾಂವೆ, ಪ್ರವೀಣ್ ಹುಕ್ಕೇರಿ, ಅರುಣ ತರಡೆ, ಕುಮಾರ ಹಾರೂಗೇರಿ, ಅಬ್ಬಾಸ್ ಮುಲ್ಲಾ, ಬಾಲಕೃಷ್ಣ ಕೌಜಲಗಿ, ರಾಮಚಂದ್ರ ಕಾಂಬಳೆ, ಅಜೀತ ಪಾಟೀಲ್, ಯೂನುಸ ದಳವಾಯಿ, ಸುಲ್ತಾನ್ ಹೆಗಡೆ , ರಾವಸಾಬ ಜಾಧವ, ಬಸು ತುಳಜನ್ನವರ, ರಾಮು ಹೊನಕಡೆ, ಯಲ್ಲಪ್ಪ ರೆಂಟೆ , ಬಾಹುಬಲಿ ಹಂಡಗೆ, ಅಂಕುಶ ಜಾಧವ, ಅಬಾ9ಜ್ ಮುಲ್ಲಾ, ಲೋಕೋಪಯೋಗಿ ಇಲಾಖೆ ಅಧಿಕಾರಿ ಆರ್ ಬಿ ಮಣೊವಡ್ಡರ, ಲಕ್ಷ್ಮಣ ತುಳಸಿಕಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಟ್ಟಣದ ಮುಖಂಡರು ಅಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.27
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 