ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ: ಶಾಸಕ ಶ್ರೀನಿವಾಸ ಮಾನೆ
Road development work is being carried out in every village: MLA Srinivas Mane
ಹಾನಗಲ್ 22: ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಜೊತೆಗೆ ಗ್ರಾಮೀಣಾಭಿವೃದ್ಧಿಯ ಮೂಲಕ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಪೂರಕ ವಾತಾವರಣ ಸೃಷ್ಟಿಸಲು ಕಲ್ಪಿಸಲು ಶ್ರಮವಹಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಮಲ್ಲಿಗಾರ ಗ್ರಾಮದಲ್ಲಿ 2024-25ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಅವರು ಅಭಿವೃದ್ಧಿ ಎನ್ನುವುದಕ್ಕೆ ಕೊನೆ ಇಲ್ಲ, ಅದೊಂದು ನಿರಂತರ ಪ್ರಕ್ರಿಯೆ. ತಾಲೂಕಿನಲ್ಲಿ 30-40 ವರ್ಷಗಳಿಂದ ಪರಿಹಾರ ಕಾಣದೇ ಹಾಗೆಯೇ ಉಳಿದಿದ್ದ ಸಾಕಷ್ಟು ಸಮಸ್ಯೆಗಳಿಗೆ ಮುಕ್ತಿ ದೊರಕಿಸುವ ಪ್ರಯತ್ನ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆದಿದೆ. ಕಂದಾಯ ದಾಖಲೆಗಳಿಗೆ ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಿದ್ದು, ಎಲ್ಲ ದಾಖಲೆಗಳೂ ಸಹ ಡಿಜಿಟಲೀಕರಣಗೊಂಡಿವೆ. 15 ಸಾವಿರ ಕುಟುಂಬಗಳ ಹಕ್ಕುಪತ್ರದ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಿಂದ ಶಂಕರಗೌಡ ಪಾಟೀಲ ಅವರ ಮನೆವರೆಗೆ, ರೇಖಾ ಪಾಟೀಲ ಅವರ ಮನೆಯಿಂದ ಶಿವಪ್ಪ ಹರಿಜನ ಅವರ ಮನೆವರೆಗೆ,ಕೃಷ್ಣ ಮಲಗುಂದ ಅವರ ಮನೆಯಿಂದ ಸುಮೀತ್ ಮೂಡೂರ ಅವರ ಮನೆವರೆಗೆ ಸಿಸಿರಸ್ತೆ ನಿರ್ಮಾಣಕ್ಕೆ ಶಾಸಕ ಮಾನೆ ಚಾಲನೆ ನೀಡಿದರು.
ಗ್ರಾಪಂ ಸದಸ್ಯೆ ಆಸ್ಮಾ ಮಾಸನಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಅಶೋಕ ಅಡವಿ,ಮಂಜಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ಮೆಹಬೂಬಅಲಿ ಹಾನಗಲ್, ಕಲೀಂ ಮಾಸನಕಟ್ಟಿ,ಶಿವರಾಯಪ್ಪ ಅಡವೇರ, ಮುನಾಫ್ ಮಾಸನಕಟ್ಟಿ, ರವಿ ಲಮಾಣಿ, ಗುಡ್ಡಪ್ಪ ಮಲಗುಂದ, ಶೇಕಪ್ಪ ಸೂರ್ಪನವರ,ಸಿದ್ದು ಕಾಡಶೆಟ್ಟಿಹಳ್ಳಿ, ಇಸ್ಮೈಲ್‌ಸಾಬ ಹುಡೇದ, ಸಿದ್ದರಾಮಪ್ಪ ಹಾವೇರಿ, ವೀರೇಶ ಕತ್ಲಿ, ಮಲ್ಲೇಶಪ್ಪ ಹಂಚಿನಮನಿ, ದಿವಾನಸಾಬ ಮಾಸನಕಟ್ಟಿ, ಗಫಾರ್ ಭಟ್ಕಳ, ಇಸ್ಮೈಲ್‌ಸಾಬ ಭಟ್ಕಳ, ಮಂಜು ಲಮಾಣಿ, ಕುಮಾರ ಲಮಾಣಿ, ಆನಂದ ಲಮಾಣಿ, ಪಿಡಿಒ ಚರಣ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 