ಮಧುರಖಂಡಿ ಗ್ರಾಮದ ಬಳಿ ರಸ್ತೆ ಅಪಘಾತ

  ಮಧುರಖಂಡಿ ಗ್ರಾಮದ ಬಳಿ ರಸ್ತೆ ಅಪಘಾತ Road accident near Madurakhandi village

ಲೋಕದರ್ಶನ ವರದಿ 

 ಮಧುರಖಂಡಿ ಗ್ರಾಮದ ಬಳಿ ರಸ್ತೆ ಅಪಘಾತ 

ಜಮಕಂಡಿ 09: ತಾಲೂಕಿನ ಮಧುರಖಂಡಿ ಗ್ರಾಮದ ಬಳಿ ಪತ್ರಕರ್ತ ಬಸವರಾಜ ಕಾನಗೊಂಡ ಅಪಘಾತ ಅಲ್ಲ. ಇದೊಂದು ಕೊಲೆ ಎನ್ನುವುದು ಖಚಿತ ಪಡಿಸಿಕೊಂಡು 24 ಗಂಟೆಯಲ್ಲಿ ಪೋಲಿಸರು ಪತ್ತೆ ಮಾಡಿ. ಪಡಿತರ ಅಕ್ಕಿಯ ಅಕ್ರಮ ದಂಧೆಕೋರ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. 

ತಾಲೂಕಿನ ಮಧುರಖಂಡಿ ಗ್ರಾಮದ ಬಳಿ ಸಂಜೆ ಬೈಕ್‌ನಲ್ಲಿ ತೆರಳುತ್ತಿದ್ದ ಆಲಗೂರ ಗ್ರಾಮದ ಬಸವರಾಜ ಕಾನಗೊಂಡ (40) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಮೃತದೇಹ ಪತ್ತೆಯಾಗಿತ್ತು. ಪೋಲಿಸರ ತನಿಖೆಯಲ್ಲಿ ಇದೊಂದು ಕೊಲೆ ಎಂದು ಶಂಕಿಸಿ. ತಡರಾತ್ರಿಯಲ್ಲಿ ತನಿಖೆಯನ್ನು ಚುರುಕು ಗೊಳಿಸಿದರು. ಅಪಘಾತವಾದ ಸ್ಥಳದಲ್ಲಿ ಅಶೋಕ ಲೈಲ್‌ಂಡ್ ಗೂಡ್ಸ್‌ ವಾಹನದ ಮೇಲೆ ಬರೆಸಿರುವ ಅಕ್ಷರದ ಬೋರ್ಡ ಆಧಾರದ ಮೇಲೆ ವಾಹನ ಪತ್ತೆ ಮಾಡಿದ್ದು. ಆರೋಪಿಗಳು ಎಷ್ಟು ಚಾಣಾಕ್ಷತದಿಂದ ಚಾಪೆ ಕೆಳಗೆ ನುಸುಳಿದರೆ. ಪೋಲಿಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬ ಮಾತು ಸರಿಯಾಗಿದೆ. ಅಕ್ರಮ ಅಕ್ಕಿ ದಂಧೆಯನ್ನು ನಡೆಸುತ್ತಿದ್ದ ಆರೋಪಿತರನ್ನು ವಿಚಾರಣೆಗೆ ಒಳಪಡಿದ ಪೋಲಿಸರು. ಕೊಲೆ ಮಾಡಿರುವುದು ಪತ್ತೆಯಾಗಿದೆ. ಕೆಲವು ವರ್ಷಗಳಿಂದ ಅಕ್ರಮ ಅಕ್ಕಿ ದಂಧೆಯು ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ದೊಡ್ಡಮಟ್ಟದಲ್ಲಿ ನಡೆಯುತ್ತಾ ಬಂದಿದೆ. ರಬಕವಿ ಮೂಲದ ಅಶ್ಪಾಕ್ ಸುಲೇಮಾನ್ ಮುಲ್ಲಾ ಎನ್ನುವ ವ್ಯಕ್ತಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬಸವರಾಜ ಕಾನಗೊಂಡ ಅವರಿಂದ ಪ್ರತಿ ತಿಂಗಳು ಹಣ ಪಡೆಯುತ್ತಿದನಂತೆ. ಕಳೆದ ಮೂರಾಲ್ಕು ವರ್ಷಗಳಿಂದಲೂ ಅಕ್ಕಿ ದಂದೆಕೋರ ದುಡ್ಡುಕೊಡುತ್ತ ಬಂದಿದ್ದು, ಇದೀಗ ಹೆಚ್ಚು ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡಿನಂತೆ. ಇದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿ. ಇವರಿಬ್ಬರ ನಡುವೆ ಸಂಧಾನ ಮಾಡಿಸಲೆಂದು ಮೊತ್ತೊಬ್ಬ ವ್ಯಕ್ತಿ ಬಸವರಾಜನನ್ನು ಕರೆಯಿಸಿದ್ದು, ಮಾತುಕತೆ ವಿಫಲವಾಗಿದಕ್ಕೆ. ಅಶ್ಫಾಕ್‌ಸುಲೇಮಾನ್ ಮುಲ್ಲಾ ಅಲ್ಲಿಂದ ಹೊರಟು ಹೋಗಿದ ಬಳಿಕ. ತನ್ನ ವಾಹನ ಚಾಲಕ ನಂದೇಶ್ವರ ಪಾವಡಿ ಎನ್ನುವವರಿಗೆ ಬಸವರಾಜನ ಚಲನವಲನದ ಮೇಲೆ ಕಣ್ಣಿಡಲು ಹೇಳಿದ್ದನಂತೆ. 

ಪತ್ರಕರ್ತ ಬಸವರಾಜ ಕಾನಗೊಂಡ ಹಾಗೂ ರಾಜೀ ಸಂಧಾನಕ್ಕೆ ಕರೆದಿದ್ದ ವ್ಯಕ್ತಿ ಊಟ ಮಾಡಿದ್ದಾರೆ. ಅಲ್ಲಿಂದ ಬಸವರಾಜ ಒಬ್ಬರೇ ಸ್ಕೂಟಿ ಬೈಕ್‌ನಲ್ಲಿ ಹೋಗುತ್ತಿದ್ದು, ಪ್ರತಿ ಹಂತದ ಮಾಹಿತಿಯನ್ನು ನಂದೇಶ್ವರ ಪಾವಡಿ ಅಶ್ಪಾಕಗೆ ಕೊಡುತ್ತಿದ್ದನಂತೆ. ನಂದೇಶ್ವರ ಮಾದೇವ ಪಾವಡಿ ತನ್ನ ಸ್ನೇಹಿತ ಮಹೇಶ ಶ್ರೀಶೈಲ್ ಪಾವಡಿ ಎನ್ನುವವರ ಸಹಾಯ ಪಡೆದುಕೊಂಡು ಅವರನ್ನು ಬೆನ್ನಟ್ಟಿದ್ದಾರೆ. 

ಅತ್ತ ಅಶ್ಪಾಕ್ ಸುಲೇಮಾನ್ ಮುಲ್ಲಾ ತನ್ನ ಮಿನಿಗೂಡ್ಸ್‌ ವಾಹನದಲ್ಲಿ ಕಾಯ್ದು ನಿಂತಿದ್ದು, ಬಳಿಕ ಆ ವಾಹನವನ್ನು ನಂದೇಶ್ವರ ಸೇರಿಕೊಂಡಿದ್ದಾನೆ. ಬೈಕ್‌ನಲ್ಲಿ ಮಹೇಶ ಬೆನ್ನಟ್ಟಿದ್ದಾನೆ. ಮಧುರಖಂಡಿ ಗ್ರಾಮದ ಬಳಿ ಬಸವರಾಜನ ಬೈಕ್‌ಗೆ ಮಿನಿ ಗೂಡ್ಸ್‌ ವಾಹನವನ್ನು ಡಿಕ್ಕಿ ಹೊಡೆಸಿ. ಅಲ್ಲಿಂದ ಮೂವರು ಪರಾರಿಯಾಗಿದ್ದಾರೆ. ಈ ವೇಳೆ ಅಶ್ಪಾಕ್ ಸುಲೇಮಾನ್ ಮುಲ್ಲಾ ಸಹೋದರನೊಬ್ಬ ಘಟನೆ ಮುಚ್ಚಿಡಲು ನೆರವು ಆಗಿದ್ದನಂತೆ. ಇದೆಲ್ಲವೂ ಪೊಲೀಸರು ಮಾಹಿತಿ ಕಲೆಹಾಕಿದಾಗ ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಪರೀಶೀಲನೆ ನಡೆಸಿದ ಬಳಿಕ ಇದೊಂದು ಕೊಲೆ ಎಂದು ಬೆಳಕಿಗೆ ಬಂದಿದೆ. ಅಶ್ಪಾಕ್ ಸುಲೇಮಾನ್ ಮುಲ್ಲಾ ಹಾಗೂ ನಂದೇಶ್ವರ ಮಾಹಾದೇವ ಪಾವಡಿ, ಮಹೇಶ ಶ್ರೀಶೈಲ್ ಪಾವಡಿ ಮೂವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾಹಿತಿಯನ್ನು ನೀಡಿದ್ದಾರೆ.