ಬೈಲಹೊಂಗಲ ನಾಡಿನ ‘ಸಂಗ್ಯಾ ಬಾಳ್ಯ’ ನಾಟಕಕ್ಕೆ ಮರುಜೀವ
Revival of the ‘Sangya Balya’ play from the Bailhongal region
ಲೋಕದರ್ಶನ ವರದಿ
ಧಾರವಾಡ 24 : ಸತ್ಯ ಶೋಧ ಕಥೆಯನ್ನ ಬರೆದ ಬೈಲಹೊಂಗಲ ನಾಡಿನಲ್ಲಿ ಹುಟ್ಟಿದ ಸಂಗ್ಯಾ ಬಾಳ್ಯಾ ಎಂಬ ಸುಂದರ ದಪ್ಪಿನ ಆಟ ಬರೆದವರು ಯಾರೆಂಬುವುದು ಇವತ್ತಿಗೂ ಗೊತ್ತಿಲ್ಲ ನೂರಾರು ವರ್ಷದ ಹಿಂದೆ ಹುಟ್ಟಿದ ಈ ಕಥೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ರಂಗ ಆಟವಾಗಿದೆ. ಒಂದು ಮನೆತನದಲ್ಲಿ ಗಂಡ ಹೆಂಡತಿ ಹೇಗೆ ಬಾಳಬೇಕು ಎಂಬುದು ಎತ್ತಿ ತೋರಿಸುತ್ತದೆ. ಏನಾದರು ದಾರಿ ತಪ್ಪಿದಲ್ಲಿ ಮನೆ ನಾಶವಾಗುವ ನಿದರ್ಶನದ ಕಥೆ ಎಂದರು ಡಾ. ಪ್ರಭಾಕರ ಲಗಮಣ್ಣವರ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಕಲಾ ವೈಭವ ನಾಟ್ಯ ಸಂಘ ಏರಿ್ಡಸಿದ ಸಂಗ್ಯಾ ಬಾಳ್ಯಾ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಐ ಇಳಿಗೇರ ವಹಿಸಿ ಈಗಿನ ಕಾಲದಲ್ಲಿ ನಾಟಕಗಳು ಮರೆಮಾಚುತ್ತಿದ್ದು, ದೊಡ್ಡಾಟ ಮತ್ತು ಸಣ್ಣಾಟ ಯುವಕರಿಗೆ ತರಬೇತಿ ಮೂಲಕ ಹೇಳಿಕೊಟ್ಟು ಉಳಿಸಿ ಬೆಳೆಸುವಲ್ಲಿ ನಾವು ಪ್ರಯತ್ನ ಮಾಡಬೇಕು ಎಂದರು. ವೇದಿಕೆಯ ಮೇಲೆ ನಿಂಗಪ್ಪ ಚಂಡುನವರ ಸಂಘದ ಅಧ್ಯಕ್ಷರು ಆದ ಬಸವರಾಜ ಅಮ್ಮಿನಭಾವಿ, ವಾಯ ಎಫ್ ಪಾಟೀಲ, ಸಿ.ಎಮ್ ಯಲಿಗಾರ, ಮಾಳೇಶ ಮುದಕಪ್ಪನವರ. ಅಲ್ಲಾಸಾಬ ವಾಲಿಕಾರ, ಮೈಲಾರ್ಪ ಭದ್ರಶೆಟ್ಟಿ, ಶೇಖಪ್ಪ ಬೆಂಡಿಗೇರಿ, ಲಕ್ಷ್ಮೀ ಅರಭಾವಿ, ಕೆಂಚಮ್ಮ ಅರಭಾವಿ ಇದ್ದರು, ಲಕಮಾಪೂರ ಗ್ರಾಮದ ಕಲಾವಿದರಿಂದ ಸಂಗ್ಯಾ ಬಾಳ್ಯಾ ಆಟ ಪ್ರಸ್ತುತ ಪಡಿಸಿದರು.
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ 