ವೃತ್ತಿಯಿಂದ ನಿವೃತ್ತಿ ಅನಿವಾರ್ಯ: ಜಹಗಿರ್ದಾರ
Retirement from profession inevitable: Jahagirdara
ಧಾರವಾಡ 02: ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ, ಡಾ. ನಾಗರಾಜ ಗುದಗನವರ ನಿಷ್ಠೆ ಮತ್ತು ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನಮ್ಮ ಸಂಸ್ಥೆಗೆ ನೀಡಿದ್ದಾರೆ. ಅವರಿಗೆ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಅಂಜುಮನ್ ಏ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಎ ಜಹಗಿರ್ದಾರ ಶುಭ ಹಾರೈಸಿದರು.
ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಜುಲೈ 31ರಂದು ಸೇವಾ ನಿವೃತ್ತಿರಾದ ನಿಮಿತ್ಯ ಅಂಜುಮನ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಮಾತನಾಡಿ ಅವರಿಬ್ಬರ ಸೇವೆ ಗಮನಾರ್ವಾಗಿದೆ ಎಂದು ಶ್ಲಾಘಿಸಿದರು.
ಪ್ರಾಚಾರ್ಯ ಡಾ. ಐ ಎ ಮುಲ್ಲಾ ಮುಂದಿನ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹೇಳಿದರು. ಡಾ. ಎ ಎಸ್ ಬಳ್ಳಾರಿ, ಡಾ. ರುದ್ರೇಶ್ ಮೇಟಿ, ಪ್ರೊ.ನಾಗರಾಜ ಕನಕಣಿ, ರಜಿಯಾ ತಹಸೀಲ್ದಾರ್ ಅವರು ಸೇವಾ ನಿವೃತ್ತಿಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಆಡಳಿತ ಮಂಡಳಿಯ ರಫೀಕ ಶಿರಹಟ್ಟಿ, ಕೈರುದ್ದೀನ್ ಶೇಕ್, ಅಬ್ದುಲ್ ಅಜೀಜ್ ಬಡ್ಬಡೇ, ನನ್ನೇ ಸಾಬಣ್ಣವರ್, ಖಲಿಲ ದಾಸನಕೊಪ್, ಡಾ ಶಿವಾನಂದ ಶೆಟ್ಟರ್, ಪ್ರೊ. ಡಿ ಎಮ್ ನಿಡವನಿ, ಡಾ ಎನ್ ಎಮ್ ಮಕಂದಾರ್, ರೇಣುಕಾ ಗುದಗನವರ, ಸುರೇಶ ಗುದಗನವರ, ಡಾ ರತ್ನಾ ಕಡಪಟ್ಟಿ, ಡಾ ರಾಜಶ್ರೀ ಗುದಗನವರ, ಶಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಡಾ ಸೌಭಾಗ್ಯ ಜಾದವ್ ಸ್ವಾಗತಿಸಿದರು. ಡಾ ಗೌರಿ ಕೇರಿಮಠ ಪರಿಚಸಿದರು. ಡಾ ಬೀಬಿ ಆಯುಷಾ ಚಕೋಲಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 