ರಾಯಬಾಗ 30: ವಿವೇಕಾನಂದ ಕಲಾ ಮಂದಿರದ ಪ್ರಾಚಾರ್ಯ ವಿ.ಡಿ.ಸಾಲಿ ಅವರು ತಮ್ಮ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಇಲ್ಲಿನ ಚಿತ್ರಕಲಾ ವಿದ್ಯಾರ್ಥಿಗಳು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಅಥಣಿ ಮುರಘೇಂದ್ರ ಕಲಾ ಮಂದಿರದ ನಿವೃತ್ತ ಪ್ರಾಚಾರ್ಯ ಬಸವರಾಜ ಮಠಪತಿ ಹೇಳಿದರು.ಶನಿವಾರ ಪಟ್ಟಣದ ಎಸ್.ಪಿ.ಎಮ್.ವಿವೇಕಾನಂದ ಕಲಾ ಮಂದಿರದ ಪ್ರಾಚಾರ್ಯ ವಿ.ಡಿ.ಸಾಲಿ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಲಿ ಅವರು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಸಂಸ್ಥೆಯಲ್ಲಿ ಚಿಕ್ಕ ವಯಸ್ಸಿನಲ್ಲಿ ಪ್ರಾಚಾರ್ಯರಾಗಿ 36 ವರ್ಷ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.ಸತ್ಕಾರ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ವಿ.ಡಿ.ಸಾಲಿ ಅವರು, ನಿತ್ಯ ಸ್ಮರಣೀಯರಾದ ಸಂಸ್ಥೆ ಸಂಸ್ಥಾಪಕರಾದ ಅಭಾಜಿ (ದಿ.ವಿ.ಎಲ್.ಪಾಟೀಲ) ಅವರ ಆಶೀರ್ವಾದದಿಂದ ಪಟ್ಟಣದಲ್ಲಿ ಚಿತ್ರಕಲಾ ಶಾಲೆಯನ್ನು ಅತ್ಯುತ್ತಮವಾಗಿ ಕಟ್ಟಲು ಸಾಧ್ಯವಾಗಿದೆ.
ಈ ಸಂಸ್ಥೆಯ ಋಣ ಎಂದಿಗೂ ತೀರಿಸಲಾಗದು ಎಂದರು. ಪ್ರಾಚೀನ ನಳಂದ ವಿಶ್ವ ವಿದ್ಯಾಲಯದ ಪ್ರಥಮ ಶಾಖೆ ರಾಯಬಾಗ (ಬ್ರಹ್ಮಪುರಿ) ಆಗಿತ್ತು ಅನ್ನೋದು ನಮಗೆಲ್ಲ ಹೆಮ್ಮೆಯ ವಿಷಯ. ಕೇಂದ್ರ ಸರ್ಕಾರ ಇತ್ತ ಗಮನ ಹರಿಸಿ, ಸಂಶೋಧಕರ ಮೂಲಕ ಸಂಶೋಧನೆ ಮಾಡಿ ರಾಯಬಾಗದ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕೆಂದರು. ಸಂಸ್ಥೆಯ ಚೇರ್ಮನ್ನ ಅಮರಸಿಂಹ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ, ಉಪನ್ಯಾಸಕರಾದ ಪಿ.ಆಯ್.ಪತ್ತಾರ, ಎ.ಎಸ್.ಕರಿಹೊಳೆ, ಪಿ.ಬಿ.ಗವಾನಿ, ಆಯ್.ಜಿ.ನದಾಫ, ಎಸ್.ಜಿ.ನದಾಫ, ಎಸ್.ಎನ್.ಬನಪ್ಪನವರ, ಕರೇಪ್ಪ ನಾಯಿಕ, ರಾಜು ದೇವರುಷಿ, ರಮೇಶ ಕಾಂಬಳೆ ಸೇರಿ ಅನೇಕರು ಇದ್ದರು.
ಫೋಟೊ: 30 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಎಸ್.ಪಿ.ಎಮ್.ವಿವೇಕಾನಂದ ಕಲಾ ಮಂದಿರದಲ್ಲಿ ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ವಿ.ಡಿ.ಸಾಲಿ ದಂಪತಿಯನ್ನು ಅಮರಸಿಂಹ ಪಾಟೀಲ ಹಾಗೂ ಗಣ್ಯರು ಸತ್ಕರಿಸುತ್ತಿರುವುದು.