ನಿವೃತ್ತಿ: ಸರಕಾರಿ ಶಾಲೆ ಶಿಕ್ಷಕ ವಂಜೇರಿಗೆ ಅದ್ದೂರಿ ಬೀಳ್ಕೊಡುಗೆ
Retirement: Govt school teacher Vanjeri gets a grand farewell
ಕಾಗವಾಡ 31: ಶಿಕ್ಷಕ ವೃತ್ತಿ ಒಂದು ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಆ ವೃತ್ತಿಯಲ್ಲಿ ಯಾರು ಪ್ರಾಮಾಣಿಕವಾಗಿ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ ಅವರ ಜೀವನದಲ್ಲಿ ಕೂಡ ಒಂದು ಕಪ್ಪು ಚುಕ್ಕೆ ಇಲ್ಲದಂತೆ ತಮ್ಮ ನಿವೃತ್ತಿ ಜೀವನ ಸಂತೋಷದಿಂದ ಕಳೆಯುತ್ತಾರೆ ಎಂದು ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಎಸ್ ಭಾವಿ ಹೇಳಿದರು.
ಅವರು ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಇಪ್ಪತ್ತಾರು ವರ್ಷಗಳ ಸುದೀರ್ಘ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ಪಿ ಕೆ ವಂಜೇರಿ ಬಿಳ್ಕೋಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾರಾದರೂ ನಿವೃತ್ತಿ ಆಗುತ್ತಾರೆ ಎಂದರೆ ಕೆಲವರಿಗೆ ದುಃಖ ಆಗುತ್ತದೆ ಅದರೆ ಸರಕಾರಿ ಶಾಲೆಯ ಶಿಕ್ಷಕರಿಗೆ ಬಹಳ ಸಂತೋಷ ಆಗುತ್ತದೆ ಯಾಕೆಂದರೆ ಈಗಿನ ಕಾಲದಲ್ಲಿ ಸರಕಾರಿ ನೌಕರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಶಿಕ್ಷಕರ ಕೊರತೆ ಅಧಿಕ ಖಾಲಿ ಇವೆ ಅದರ ಹೊಣೆ ಇದ್ದ ಶಿಕ್ಷಕ ಮೇಲೆ ಇರುತ್ತದೆ ಹೀಗಾಗಿ ಯ್ಯಾವಾಗ ನಿವೃತ್ತಿ ಹೊಂದುತ್ತೆವೆ ಎನ್ನುವ ಮನಸ್ಥಿತಿಗೆ ಬಂದು ಬಿಟ್ಟಿದೆವೆ ಇಂತಹದರ ನಡುವೆ ನವಲಿಹಾಳ ಗ್ರಾಮಕ್ಕೆ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿ ಕೆ ವಂಜೆರಿ ಅವರ ಜೀವನ ಸುಖಮಯವಾಗಿರಲಿ ಎಂದು ಶುಭಹಾರೈಸಿದರು.
ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಗಾಣಿಗೇರ ಮಾತನಾಡಿ ಪಿ ಕೆ ವಂಜೆರಿ ಅವರ ಸಮಯಪಾಲನೆ, ಕರ್ತವ್ಯ ನಿಷ್ಟೆ, ಮಕ್ಕಳೊಂದಿಗೆ ಮಧುರ ಬಾಂಧವ್ಯ ಹೊಂದಿ ಜನಾನುರಾಗಿಯಾಗಿದ್ದರು. ಸ್ನೇಹಿತರೊಂದಿಗೆ ಸ್ನೇಹಜೀವಿಯಾಗಿ, ಆಪಾರ ಶಿಷ್ಯಬಳಗ ಹೊಂದಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ, ಆನಂದದಾಯಕವಾಗಿರಲಿ, ಎಲ್ಲರನ್ನು ತಮ್ಮವರೆಂದು ಪ್ರೀತಿಸುವ ಅವರ ಪ್ರೀತಿ ಸದಾ ನಮ್ಮ ಜೊತೆಗಿರಲಿ ಎಂದು ಶುಭ ಹಾರಿಸಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಜಿ ಸಂಕಪಾಳ ಹಾಗೂ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಶಿಕ್ಷಕ ಪ್ರಹ್ಲಾದ ಪೋತದಾರ ಸ್ವಾಗತಿಸಿದರು, ವಿನೋದ ಮಹೇಶಕರ ವಂದಿಸಿದರು.
ಗ್ರಾಮ ಪಂಚಾಯತ ಸದಸ್ಯ ಸಾವಂತ ಖಾಂಡೇಕರ, ಸುಭಾಷ ಗೇಂಡ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಗೂಗಾಡೆ, ಉಪಾಧ್ಯಕ್ಷ ರಾಜು ಕಾಂಬಳೆ, ಮುಖ್ಯೋಪಾಧ್ಯಾಯ ತುಕಾರಮ ಮಿರ್ಜೆ, ಬಿ ಆರ್ ಜಾಧವ, ವಿ ಕಾಂಬಳೆ, ವಿಠ್ಠಲ ಗಾಯಕವಾಡ, ಗಜಾನನ ಐಹೊಳೆ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 