ನಿವೃತ್ತ ಯೋಧರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ
Retired soldiers and talented students felicitated
ರಾಯಬಾಗ, 16 ; ಮೇಟಾ ಕಂಪನಿಯ ಎಐ ಸಂಶೋಧನಾ ವಿಭಾಗದ ಉ.ಪ.ದ ತೃಪಿಕ ಬನ್ಸಲ್ ಅವರು ವಾರ್ಷಿಕ 854 ಕೋಟಿ ರೂ. ಪ್ಯಾಕೇಜ್ ವೇತನ ಪಡೆಯುವುದು ನೋಡಿದರೆ, ವಿದ್ಯೆಯ ಮಹತ್ವ ಎಷ್ಟಿದೆ ಎನ್ನುವುದು ತಿಳಿಯುವುದು ಎಂದು ರಾಯಣ್ಣ ಗೋ-ಗ್ರೀನ್ ಫೌಂಡೇಷನ್ ಅಧ್ಯಕ್ಷ ಮತ್ತು ಗ್ರಾ.ಪಂ.ಅಧ್ಯಕ್ಷ ಸದಾಶಿವ ದೇಶಿಂಗೆ ಹೇಳಿದರು.
ಶುಕ್ರವಾರ ತಾಲೂಕಿನ ಭಿರಡಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗ್ರಾ.ಪಂ.ಭಿರಡಿ, ರಾಯಣ್ಣ ಗೋ-ಗ್ರೀನ್ ಫೌಂಡೇಶನ್ ಹಾಗೂ ಆತ್ಮ ನಿರ್ಭರ ಸೇವಾ ಸಮೂಹ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಯೋಧರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇಟಾ ಕಂಪನಿ ನಮ್ಮ ನಿತ್ಯ ಬಳಕೆ ವಾಟ್ಸ್‌ಪ್, ಫೇಸ್‌ಬುಕ್, ಇಸ್ಟಾಗ್ರಾಂ ನಿರ್ವಹಿಸುತ್ತದೆ. ಇಂದಿನ ಯುವ ಜನಾಂಗ ಇದರಲ್ಲಿಯೇ ಮುಳಗಿ ಹೋಗಿದೆ ಎಂದರು. ಗಣಿತ ತಜ್ಞ, ಆಧುನಿಕ ಮಾನವ ಕಂಪ್ಯೂಟರ್ ಎನ್ನಿಸಿಕೊಂಡಿರುವ ಬಸವರಾಜ ಉಮರಾಣಿ ಅವರು, ಅಂಧ ವ್ಯಕ್ತಿಯಾದರೂ ಕಲಿಯಬೇಕೆಂಬ ಛಲದೊಂದಿಗೆ ಮಹಾನ ಸಾಧನೆ ಮಾಡಿದ ನಮ್ಮ ಜಿಲ್ಲೆಯ ಪ್ರತಿಭೆ ಇಂದು ರಾಷ್ಟ್ರಮಟದಲ್ಲಿ ಹೆಸರು ಗಳಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇಂತಹ ವ್ಯಕ್ತಿಗಳು ನಮ್ಮ ಜೀವನಕ್ಕೆ ಮಾದರಿಯಾಗಬೇಕೆಂದು ಹೇಳಿದರು.
ಕವಿ, ಉಪನ್ಯಾಸಕಿ ಡಾ.ರತ್ನಾ ಬಾಳಪ್ಪನ್ನವರ, ನಿವೃತ್ತ ಮುಖ್ಯಾಧ್ಯಾಪಕ ಅಶೋಕ ಮೊರಬದ ಮಾತನಾಡಿದರು. ಪಿ.ಎಚ್.ಡಿ ಪದವಿ ಪಡೆದ ಡಾ.ರುಕ್ಮೀಣಿ ಪಾಂಡ್ರೆ ಮತ್ತು ನಿವೃತ ಯೋಧ ಗಜೇಂದ್ರ ನನದಿ ಅವರನ್ನು ಸತ್ಕರಿಸಲಾಯಿತು. ರಾಯಣ್ಣ ಗೋ-ಗ್ರೀನ್ ಫೌಂಡೇಶನ್ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಾಕ್ಷತಾ ಬೋರಗಾಂವೆ, ಶಿಲ್ಪಾ ಪರೀಟ, ಅಂಕಿತಾ ಹೆಗಲೆ ಅವರಿಗೆ ಲ್ಯಾಪಟ್ಯಾಪ್‌ಗಳನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಜಯ ಯಲಗುಂದ್ರೆ, ಸ್ಪೂರ್ತಿ ಕೆಳಗೇರಿ, ಸಮೀಕ್ಷಾ ತಂಗಡೆ, ವೇದಾ ಕಣಿಗಾಂವಕರ, ಸ್ನೇಹಾ ನಿಡವಣಿ ಮತ್ತು ಆದಿತ್ಯ ಪರೀಟ ಅವರಿಗೆ ಅಶೋಕ ಸ್ತಂಭ ಸ್ಮರಣೆಕೆಯನ್ನು ನೀಡಿ ಗೌರವಿಸಲಾಯಿತು.
ಸಕ್ಕುಬಾಯಿ ಪೂಜೇರಿ ಮತ್ತು ನಿರ್ಮಲಾ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು.
ಸಮಾರಂಭದಲ್ಲಿ ಉಪಾಧ್ಯಕ್ಷೆ ಕೃಷ್ಣಾಬಾಯಿ ಭೆಂಡೆ, ಮಾಜಿ ಅಧ್ಯಕ್ಷೆ ರೇಖಾ ನಿಡವಣಿ, ಪಿಡಿಒ ವಿದ್ಯಾನಂದ ಬಾನೆ ಹಾಗೂ ಸರ್ವ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 