ನಿವೃತ್ತ ಸೈನಿಕ ಹೇಮರೆಡ್ಡಿ ಮಾಲಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ
Retired soldier Hemareddy Mali receives a grand welcome in the village
ನಿವೃತ್ತ ಸೈನಿಕ ಹೇಮರೆಡ್ಡಿ ಮಾಲಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ
ಹಾವೇರಿ 05: ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ, ಸೇನೆಯಿಂದ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಹೆಮ್ಮೆಯ ಪುತ್ರ ಸೈನಿಕ-ಹಾನರಿ ಕ್ಯಾಪ್ಟನ್ ಹೇಮರಡ್ಡಿ ಬಸಪ್ಪ ಮಾಲಿ ಅವರನ್ನು ಹಾವೇರಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಸೇರಿದ ನಿವೃತ್ತ ಸೈನಿಕರು,ಗ್ರಾಮಸ್ಥರು ಹಾಗು ಸಂಬಂಧಿಕರು ಮಾಜಿ ಸೈನಿಕನನ್ನು ಆತ್ಮೀಯವಾಗಿ ಬರಮಾಡಿಕೊಂಡರು.ಪುಷ್ಪಗುಚ್ಛಗಳನ್ನು ನೀಡಿ,ಮಾಲಾರೆ್ಣ ಮಾಡಿ ಅಭಿನಂದಿಸಿದರು. ನಂತರ ತಿರಂಗಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ನಿವೃತ್ತ ಸೈನಿಕನನ್ನು ಮೆರವಣಿಗೆ ಮಾಡಲಾಯಿತು.ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಹೊಸಮನಿ ಸಿದ್ದಪ್ಪ ಪುತ್ಥಳಿಗೆ ಹೂಮಾಲೆ ಹಾಕಲಾಯಿತು. ವೃತ್ತದಲ್ಲಿ ನಿವೃತ್ತ ಯೋಧನಿಗೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಸದಸ್ಯರು ಸನ್ಮಾನಿಸಿ ಗೌರವಿಸಿದರು. ನಂತರ ಶ್ರೀ ಹುಕ್ಕೇರಿಮಠಕ್ಕೆ ಆಗಮಿಸಿ ಶ್ರೀಮಠದ ಆರ್ಶಿವಾದ ಪಡೆದು ಕರ್ಜಗಿ ಗ್ರಾಮಕ್ಕೆ ಜಾಥಾ ತಲುಪಿ,ಅಲ್ಲಿ ದೇಶ ಪ್ರೇಮಿಗಳು ಗೌರವಿಸಿ ಸನ್ಮಾನಿಸಿದರು.
ಪ್ರವಾಸಿ ಮಂದರದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಹೇಮರೆಡ್ಡಿ ಮಾಲಿ ತಾವು ಸೈನಿಕರಾಗಿ ಸೇರಿ ಅಧಿಕಾರಿಯಾಗಿ ನಿವೃತ್ತರಾಗಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಸಿಯಾಚಿನ್ ಸೇರಿದಂತೆ ಇಕ್ಕಟ್ಟಾದ ಸದಾ ಯುದ್ದ ನಡೆಯುತ್ತಿರುವ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದು, ನನ್ನ ಭಾಗ್ಯ.ಪ್ರತಿಯೊಬ್ಬ ಯುವಕನೂ ಸೈನಿಕನಾಗಬೇಕು.ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಸೈನಿಕನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ತಿಳಿಸಿದರು. ಯುವಕರು ದೇಶ ಸೇವೆ ಕಡೆ ಹೆಚ್ಚು ಉತ್ಸುಕರಾಗಬೇಕು.ಸೇನೆಯಲ್ಲಿ ಸೇವೆ ಸಲ್ಲಿಸುವುದು ತಾಯ್ನಾಡಿನ ಖುಣ ತೀರಿಸುವ ಅವಕಾಶ.ನಾನು ವಿದ್ಯಾರ್ಥಿಯಾಗಿದ್ದ ವೇಳೆ ಶಿಕ್ಷಕರು ನೀನು ಮುಂದೆ ಏನಾಗುವೆ ಎಂದು ಕೇಳುತ್ತಿದ್ದಾಗ ಸೈನಿಕನಾಗುತ್ತೇನೆ ಎಂದು ಹೇಳುತ್ತಿದ್ದೆ. ಅದೇ ರೀತಿ ನಾನು ಸೈನಿಕನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಸೈನಿಕರು,ಗಣ್ಯರು,ಗುರು-ಹಿರಿಯರು,ಗ್ರಾಮಸ್ಥರು, ಯುವಕರು ಸೇರಿದಂತೆ ದೇಶಾಭಿಮಾನಿಗಳು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 