ಲಾಲ್ ಬಹಾದ್ದೂರ್ ಶಾಸ್ತ್ರೀ ಜೀ ಯವರ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ
Results of Lal Bahadur Shastri Ji's Painting Competition
ಹೂವಿನಹಡಗಲಿ 21 : ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಪ್ರತಿಷ್ಠಿತ ಸಾಂಸೃತಿಕ ಸೈಕ್ಷಣಿಕ, ಮತ್ತು ಸಾಮಾಜಿಕಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಇದೇ ದಿನಾಂಕ 21/09/2025 ರ ಭಾನುವಾರ ದಂದು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ -12 ಶೀರ್ಷಿಕೆ ಅಡಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜೀ ಯವರ ಚಿತ್ರ ರಚನೆ ವಿಷಯದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು.
ಈ ಒಂದು ಅವಿಸ್ಮರಣೀಯ ವಿಶಿಷ್ಟ ನೈಪುಣ್ಯತೆಯನ್ನು ಹೊಂದಿರುವ ಕಲಾವಿದರನ್ನು ಗುರುತಿಸುವ ಸ್ಪರ್ಧೆಯಲ್ಲಿ ಸಮಸ್ತ ರಾಜ್ಯಾದ್ಯೇಂತ ಅಷ್ಟೇ ಅಲ್ಲದೇ ಅಂತರಾಜ್ಯಚಿತ್ರ ಕಲಾವಿದರು ಭಾಗವಹಿಸಿದ್ದರು.ಇಂದು ಜರುಗಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಗಂಗಾವತಿಯ ಸೋಮ ಸುರೇಶ್, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ರಮ್ಯಾ ದೇವಿದಾಸ್ ನಾಯಕ್, ಹಾಸನದ ಸೌಮ್ಯ ಎಸ್, ದ್ವಿತೀಯ ಸ್ಥಾನದಲ್ಲಿ ಅರಸೀಕೆರೆಯ ಸಾವಿತ್ರಮ್ಮ ಓಂಕಾರ್, ಗದಗ- ಬೆಟಗೇರಿ ಅವಳಿ ನಗರದ ಅನನ್ಯ ರಾಘವೇಂದ್ರ ಪಾಲನಕರ, ಬಾಗಲಕೋಟೆಯ ಕುಮಾರಿ ಜ್ಯೋತಿ ಆನಂದ ಚಂದುಕರ, ಹಾಗೂ ತೃತೀಯ ಸ್ಥಾನದಲ್ಲಿ ಗದಗ ಜಿಲ್ಲೆಯ ಲಿಖಿತಾ ಶಿವಪ್ಪ ಗುರಿಕಾರ, ವರ್ಷಾ ಕೋತಬಾಳ, ಅಬ್ದುಲ್ ಕರೀಮ್ ನವಲಗುಂದ ಕ್ರಮವಾಗಿ ವಿಜೇತರಾಗಿರುವರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ. ಇದರ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಯವರು ಪ್ರತಿವಾರವು ಗಾಯನ ಸ್ಪರ್ಧೆ, ಕಾವ್ಯ ಸ್ಪರ್ದೆ, ಚಿತ್ರಕಲಾ ಸ್ಪರ್ಧೆ ನಮ್ಮ ಸಂಘದ ವತಿಯಿಂದ ನಡೆಯುತ್ತದೆ. ಎಂದು ತಿಳಿಸುತ್ತಾ ವಿಶಿಷ್ಟ ಚಿತ್ರಕಲೆಯನ್ನು ರಚಿಸುವ ಮೂಲಕ ವಿಜೇತರಾಗಿ ಪ್ರಶಸ್ತಿ ಪ್ರಧಾನ ಪ್ರಮಾಣ ಪತ್ರ ಪಡೆದ ಸಮಸ್ತ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು. ಶ್ರೀಮತಿ ಗಿರಿಜಾ ನಿರ್ವಾಣಿ ಯವರು ಇಂದಿನ ಚಿತ್ರಕಲಾ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 