ಅವಳಿ ನಗರದ ಸಮಸ್ಯೆಗಳಿಗೆ ಸ್ಪಂದಿಸುವೆ: ಮಹಾಪೌರ ಜ್ಯೋತಿ ಪಾಟೀಲ
Responding to the problems of the twin cities: Mayor Jyoti Patil
ಧಾರವಾಡ ಜುಲೈ 19: ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆ ಮಹಾಪೌರರಾದ ಶ್ರೀಮತಿ. ಜ್ಯೋತಿ ಪಾಟೀಲ ಅವರನ್ನು ಧಾರವಾಡ ಮಾಳಮಡ್ಡಿ ಗೌಳಿಗಲ್ಲಿ ಶ್ರೀ ಬಾಲ ಮಾರುತಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಪೌರರು, ಅವಳಿ ನಗರ ಬೆಂಗಳೂರು ನಂತರ ಎರಡನೇ ದೊಡ್ಡನಗರವಾಗಿದೆ. ಸಾರ್ವಜನಿಕರು ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುವೆ. ಕಳೆದ 3-4 ವರ್ಷಗಳಲ್ಲಿ ಚಿಕ್ಕ ಚಿಕ್ಕ ಓಣಿಗಳಲ್ಲಿ ರಸ್ತೆ, ಬ್ರಿಡ್ಜ ನಿರ್ಮಿಸಿ ಸುಧಾರಣೆ ಮಾಡಲಾಗಿದೆ. ಇನ್ನು ಮುಂದೆಯೂ ತಮ್ಮ ಸಹಾಯ, ಸಹಕಾರ ಇರಲಿ. ಮಹಾನಗರ ಪಾಲಿಕೆ ತಮ್ಮ ಕೆಲಸ ಮಾಡಿಕೊಡಲಿದೆ ಎಂದು ಅವರು ತಿಳಿಸಿದರು.
ಸನ್ಮಾನದಲ್ಲಿ ಶ್ರೀ. ವಿನಯ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷರಾದ ಶ್ರೀ ಸದಾಶಿವ ಘಂಟಿ, ಕಾರ್ಯದರ್ಶಿ ಶ್ರೀ ದಾಂಡೇವಾಲೆ, ಶ್ರೀ ಪ್ರಕಾಶ ಸುಣಗಾರ, ಶ್ರೀ. ರಾಕೇಶ ಕಲಾದಗಿ, ರಾಜು ಪೈಲ್ವಾನವಾಲೆ, ಶ್ರೀಮತಿ ಶೋಭಾ ಸೇಬಣ್ಣನವರ ಸೇರಿದಂತೆ ಸಮಿತಿ ಸದಸ್ಯರು ಪದಾಧಿಕಾರಿಗಳು, ಗುರು ಹಿರಿಯರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 