ಎಸ್‌ಎಫ್‌ಐ ಪ್ರತಿಭಟನೆಗೆ ಸ್ಪಂದಿಸಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಿದ ಅಧಿಕಾರಿಗಳು
Responding to SFI protests, officials provided basic facilities to Dr. B.R. Ambedkar hostel
ಹಾವೇರಿ 25: ನಗರದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಬಾಲಕರ ವಸತಿ ನಿಲಯ ನಂಬರ್ - 2 ವಿದ್ಯಾರ್ಥಿಗಳಿಗೆ ಪುಸ್ತಕಗಳು, ಬೆಡ್, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವಂಚನೆ ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ದಿನಾಂಕ: 21-22 ನವೆಂಬರ್ 2025 ರಂದು ವಸತಿ ನಿಲಯದ ಎದುರು ವಿದ್ಯಾರ್ಥಿಗಳು ದಿನವೀಡೀ ಪ್ರತಿಭಟನಾ ಧರಣಿ ನಡೆಸಿ, ಸ್ಥಳದಲ್ಲಿಯೇ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟುಹಿಡಿದ್ದರು.
ವಿದ್ಯಾರ್ಥಿಗಳ ಪರವಾಗಿ ಎಸ್‌ಎಫ್‌ಐ ಮನವಿಗೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ ಸ್ಪಂದಿಸಿ ವಸತಿ ನಿಲಯದಲ್ಲಿ ಅನೇಕ ದಿನಗಳಿಂದ ಬಂದ್ ಆದ ಗ್ರಂಥಾಲಯ ಕಂಪ್ಯೂಟರ್ ಲ್ಯಾಬ್ ತೆರೆಸಿದ್ದರು, ಹಳೆ ಬೆಡ್ ತೆರುವುಗೊಳಿಸಿ ಹೊಸದಾಗಿ ಬಂದ ಬೆಡ್ ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದರು. ನೀರು ಶೇಖರಣೆ ಮಾಡುವ ಎಲ್ಲಾ ಸಿಂಟೆಕ್ಸ್ ಗಳು, ಶೌಚಾಲಯ, ಸ್ನಾನದ ಕೊಠಡಿ,ಅಡುಗೆ ಕೊಠಡಿ, ವಸತಿ ಕೊಠಡಿಗಳನ್ನು ಸ್ವಚ್ಛತೆ ಮಾಡಿಸಿ ಎಲ್ಲಾ ವಿದ್ಯಾರ್ಥಿಗಳ ಪ್ರತಿ ರೂಮ್ ಗೂ ಕಸದ ಬುಟ್ಟಿ, ಬಕೆಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ. ಹೊಸ ವಸ್ತುಗಳ ವಿತರಣೆ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಹಾಸ್ಟೆಲ್ ವ್ಯವಸ್ಥೆ ಕಾಪಾಡಿಕೊಂಡು ಹೋಗುಬೇಕು ಎಂದು ಹೇಳಿದ್ದಾರೆ.
ಮುರಿದ ಬಾಗಿಲು ರಿಪೇರಿ ಮಾಡಿಸಿ ಹೊಸದಾಗಿ ಹಾಕಿಸಿದ್ದಾರೆ. ಉಳಿದಂತೆ ವಿದ್ಯಾರ್ಥಿಗಳ ಬೇಡಿಕೆಗಳಾದ ದಿನನಿತ್ಯ ವಾರ್ತಾ ಪತ್ರಿಕೆಗಳು ಮುಂದುವರೆಸಬೇಕು, ಸಿ.ಸಿ.ಕ್ಯಾಮರಾ, ಪುಸ್ತಕಗಳು, ಊಟದ ವ್ಯವಸ್ಥೆ, ಸಂಪೂರ್ಣ ಹಾಸ್ಟೆಲ್ ವ್ಯವಸ್ಥೆ ಸುಧಾರಿಸಲು ಜವಾಬ್ದಾರಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮುತುವರ್ಜಿಯಿಂದ ಸರಿಪಡಿಸಲ ಮುಂದಾಗಬೇಕು.ಗ್ರಂಥಾಲಯದಲ್ಲಿದ ಚೇರ್, ಟೇಬಲ್, ಕಂಪ್ಯೂಟರ್ ಲ್ಯಾಬ್ ನಲ್ಲಿರುವ ಸಾಮಗ್ರಿಗಳನ್ನು ಮಾರಿಕೊಂಡು ಭಾರಿ ಪ್ರಮಾಣದ ಭ್ರಷ್ಟಾಚಾರದ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ ಅದಕ್ಕೆ ಸಾಕ್ಷಿಯಾಗು ಅಧಿಕಾರಿಗಳೇ ಬೇರೆ ಚೇರ್ ಗಳನ್ನು ತಂದು ಹಾಕಿದ್ದಾರೆ ಇದರು ವಿರುದ್ಧ ದೂರ ದಾಖಲಿಸಿಕೊಂಡು ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸವವರೆಗೂ ಹೋರಾಟವನ್ನು ವಿಭಿನ್ನ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಎಚ್ಚರಿಕೆ ನೀಡಿದರು.
ಸೌಲಭ್ಯಗಳನ್ನು ಪಡೆದ ಖುಷಿಯಲ್ಲಿ ವಿದ್ಯಾರ್ಥಿಗಳು ಜಯಕಾರದ ಘೋಷಣೆಗಳನ್ನು ಕೂಗಿ ಸಂಭ್ರಮ ಪಟ್ಟರು. ಸೌಲಭ್ಯಗಳನ್ನು ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಫಕ್ಕಿರೇಶ್ ಮ್ಯಾಗಳಮನಿ, ಹಾಸ್ಟೆಲ್ ಘಟಕ ಅಧ್ಯಕ್ಷ ಸಂಜೀವ ಕೆ, ಕಾರ್ಯದರ್ಶಿ ಮನೋಜ್ ಬಣಕಾರ್, ಉಪಾಧ್ಯಕ್ಷ ಕಿರಣ್ ಕೆ, ವಿನಾಯಕ್ ಶಿವುರು, ನಿಂಗಪ್ಪ ತಳವಾರ್, ಪ್ರತಾಪ್ ಎಸ್, ಹನುಮಂತ ಬಿ, ಗಣೇಶ್ ಎಂ ಪ್ರಶಾಂತ್ ಲಮಾಣಿ, ಸಕ್ರ್ಪ ಲಮಾಣಿ, ಸಹ ಕಾರ್ಯದರ್ಶಿ ಆಕಾಶ್ ವಡ್ಡರ, ವಿಜಯ ಸಿದ್ದಾಣವರ, ಪ್ರೇಮ್ ಲಮಾಣಿ, ಭರತ್ ಪೀ, ಮಹಾಂತೇಶ್ ಎನ್ , ಪ್ರತಾಪ್ ಆರ್, ಭರತ್ ಸಿ, ಪ್ರದೀಪ್ ಡಿ, ಗಣೇಶ್ ಸವಣೂರು, ಕಾರ್ತೀಕ ಸಿ, ಹೇಮಂತ್ ವಡ್ಡರ, ಅರುಣ್ ಲಮಾಣಿ, ನಂದೀಶ್ ಪೂಜಾರ್, ಕಿರಣ್ ಎಲ್, ಮಲ್ಲೇಶ್ ಹರಿಜನ, ರೋಹಿತ್ ಕೆ , ಗಣೇಶ ಲಮಾಣಿ, ಅಶೋಕ್ ಎಂ ಎಸ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 