ದೇಶ ಕಾಯುವ ಸೈನಿಕರನ್ನು ಗೌರವಿಸಿ: ಪಂಡಿತ ಲಕ್ಷ್ಮಣ ಬಾಲಯೋಗಿಜಿ

ದೇಶ ಕಾಯುವ ಸೈನಿಕರನ್ನು ಗೌರವಿಸಿ: ಪಂಡಿತ ಲಕ್ಷ್ಮಣ ಬಾಲಯೋಗಿಜಿ Respect the soldiers who protect the country: Pandit Lakshman Balayogiji

ಬೆಳಗಾವಿ 12:  ಧೈರ್ಯ, ಸಾಹಸಕ್ಕೆ  ಭಾರತೀಯ ಸೈನಿಕರು ಹೆಸರುವಾಸಿ,  ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸೈನಿಕರನ್ನು ದೇಶದ ಜನರು ಗೌರವದಿಂದ ಕಾಣಬೇಕು ಎಂದು ಧರ್ಮಮೂರ್ತಿ ಪಂಡಿತ ಲಕ್ಷ್ಮಣ ಬಾಲಯೋಗಿಜಿ ಅವರು ಹೇಳಿದರು. 

ನಗರದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ   ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಆರೋಗ್ಯ ಭಾರತಿ ಮತ್ತು ವಿಧ್ಯಾಭಾರತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ  ಸಶಸ್ತ್ರ ಸೇನೆ ಧ್ವಜ ದಿನ ಮತ್ತು ಸೈನಿಕರ ವೀರ ವಧುಗಳ ಮತ್ತು ವೀರ ತಾಯಿಯರ ಗೌರವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. 

ನಾವಿಂದು ಕೇವಲ ಜಾತಿ , ಭಾಷೆಗೆ ಬಡಿದಾಡುತ್ತಿದ್ದೆ?ವೆ . ಸೈನಿಕರು ಮಾತ್ರ ದೇಶಕ್ಕಾಗಿ ಬಡಿದಾಡುತ್ತಿದ್ದಾರೆ . ಅವರ ದೇಶ ಭಕ್ತಿ ಅಪಾರವಾಗಿದ್ದು, ಅವರ ಕಾರ್ಯ ಸ್ಮರಣೀಯ. ದೇಶದ ಜನರಲ್ಲಿ ದೇಶಾಭಿಮಾನ ಶೂನ್ಯವಾಗಿದೆ. ಈ ವಿಷಯದಲ್ಲಿ ಸೆ?ನಿಕರು ನಿಜವಾದ ದೇಶಭಕ್ತರು. ಅವರನ್ನು ಗೌರವಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.  

ಈ  ವೀರ ವಧುಗಳ ಗೌರವ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಅಮರ ಬಲಿದಾನಿಗಳ ಭಾರತೀಯ  ಸೈನಿಕರ ವೀರ ವಧುಗಳ ಮತ್ತು ವೀರ ತಾಯಿಯರನ್ನು ಶ್ರೀ ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧಕ್ಷರಾದ  ಸವಿತಾ ಸುಭಾಷ್ ಹೆಬ್ಬಾರ್ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ  ಆರೋಗ್ಯ ಭಾರತಿ ಇವರಿಂದ ಉಚಿತ ಆರೋಗ್ಯ ತಪಾಸಣೆ ಏರ್ಷಡಿಸಲಾಗಿತ್ತು ಹಲವಾರು ಜನ ಈ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗವನ್ನು ಪಡೆದುಕೊಂಡರು. 

ಈ ವೇಳೆ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ  ಸುಜಾತಾ ದಪ್ತೆದಾರ, ವಾಸುದೇವ ಇನಾಮದಾರ್, ಜಗದೀಶ  ಪೂಜಾರಿ, ಡಾ. ದತ್ತಪ್ರಸಾದ ಗೀಜೆರಿ ಇತರರು ಇದ್ದರು. ಕಾನೂನು ವಿಧ್ಯಾರ್ಥಿನಿ ಸ್ಮೃತಿ ರೇವಡಿಗಾರ್ ಪ್ರಾಸ್ತಾವಿಕ ಮಾತನಾಡಿದರು.  ವಿಧ್ಯಾರ್ಥಿನಿ ವೀಣಾ ಕಂಬಾರ ನಿರೂಪಿಸಿದರು.  ಸವಿತಾ ಸುಭಾಷ ಹೆಬ್ಬಾರ ಅವರು ಅಧ್ಯಕ್ಷತೆವಹಿಸಿ ವಂದಿಸಿದರು.