ಪೊಲೀಸರು ನಿಯಮಗಳನ್ನು ಗೌರವಿಸಿ

ಧಾರವಾಡ: ಪೊಲೀಸ ಇಲಾಖೆಗೆ ಸೇರುವ ಪ್ರತಿಯೊಬ್ಬ ಸಿಬ್ಬಂದಿ 'ಪೊಲೀಸ ಮ್ಯಾನುವಲ್ಗಳನ್ನು ಗ್ರಂಥವೆಂದು ತಿಳಿದು, ಅದರಲ್ಲಿ ತಿಳಿಸಿರುವ ನಿಯಮಗಳನ್ನು ಗೌರವಿಸಿ, ಪಾಲಿಸುವುದು ಪೊಲೀಸ ಇಲಾಖೆಯ ಎಲ್ಲರ ಕರ್ತವ್ಯವೆಂದು ಪೊಲೀಸ ಮಹಾನಿದರ್ೇಶಕರು ಮತ್ತು ಕೆ.ಎಸ್.ಪಿ.ಎಚ್ ಹಾಗೂ ಐಡಿಸಿಎಲ್ನ ಅಧ್ಯಕ್ಷರು ಆಗಿರುವ ರಾಘವೆಂದ್ರ ಔರಾದಕರ ಹೇಳಿದರು.

ಧಾರವಾಡ ಪೊಲೀಸ ತರಬೇತಿ  ಶಾಲೆ ಆಯೋಜಿಸಿದ್ದ ನಾಗರಿಕ ಪೊಲೀಸ ಕಾನ್ಸ್ಟೇಬಲ್ಗಳ 5ನೇ ತಂಡದ ಹಾಗೂ ಸಶಸ್ತ್ರ ಪೊಲೀಸ ಕಾನ್ಸ್ಟೇಬಲ್ಗಳ 1ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.

ಪೊಲೀಸ ಇಲಾಖೆ ಶಿಸ್ತಿನ ಇಲಾಖೆ. ಹೊಸದಾಗಿ ಸೇವೆಗೆ ಸೇರಿರುವ ಬಹುತೇಕರು ಪದವಿ, ಸ್ನಾತ್ತಕೊತ್ತರ ಪದವಿ ಮತ್ತು ವೃತ್ತಿಪರ ಕೋಸ್ಗಳನ್ನು ಪಡೆದವರಾಗಿದ್ದಾರೆ. ತಂತ್ರಜ್ಞಾನ ಮತ್ತು ಕಲಿತ ಶಿಕ್ಷಣ ಬಳಸಿಕೊಂಡು ಪೊಲೀಸ ಇಲಾಖೆಯಲ್ಲಿ ವೃತ್ತಿಪರತೆಯಿಂದ ಕೆಲಸ ಮಾಡಬೇಕು.

ಯಾವುದೇ ಜೀವಹಾನಿ, ಆಸ್ತಿ ಹಾನಿ ಆಗದಂತೆ ಸಾರ್ವಜನಿಕರನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ, ರಕ್ಷರಾಗಬೇಕು. ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವತರ್ಿಸಿ ಇಲಾಖೆಗೆ ಕೀತರ್ಿ ತರಬೇಕು ಎಂದು ಅವರು ಹೇಳಿದರು.

'ಪೊಲೀಸ ಮ್ಯಾನುವಲ್ ಪೊಲೀಸ್ ಇಲಾಖೆಯ ಅಡಿಪಾಯ. ಅದನ್ನು ಸದಾ ಮನನ ಮಾಡಿಕೊಂಡು ಅದರಂತೆ ನಡೆಯುವದರಿಂದ ಸ್ವಾಭಿಮಾನ, ಆತ್ಮಗೌರವ ಹೆಚ್ಚುತ್ತದೆ ಆದ್ದರಿಂದ ಉದಾಸಿನತೆ ತೊರದೇ 'ಪೊಲೀಸ ಮ್ಯಾನುವಲ್ ಓದಿಕೊಳ್ಳಬೇಕೆಂದು ಅವರು ಹೇಳಿದರು.

ಪೊಲೀಸ್ರಿಗೆ ಯಾವಾಗಲೂ ತಮ್ಮ ಸಮವಸ್ತ್ರ ಹಾಗೂ ಇಲಾಖೆ ಬಗ್ಗೆ ಹೆಮ್ಮೆ, ಅಭಿಮಾನವಿರಬೇಕು. ತರಬೇತಿ ಅಂತ್ಯದಲ್ಲಿ ಪ್ರತಿಯೊಬ್ಬರು ಸ್ವೀಕರಿಸುವ ಪ್ರತಿಜ್ಞೆಯನ್ನು ಜೀವನದುದ್ದಕೂ ಪಾಲಿಸಿಕೊಂಡು ಬರಬೇಕೆಂದು ರಾಘವೇಂದ್ರ ಔರಾದಕರ ತಿಳಿಸಿದರು.

ವೇದಿಕೆಯಲ್ಲಿ ತರಬೇತಿ ವಿಭಾಗದ ಪೊಲೀಸ ಮಹಾನಿರೀಕ್ಷಕರಾದ ರವಿ.ಎಸ್. ಅವರು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ವತರ್ಿಕಾ ಕಟಿಯಾರ್, ಉಪಪೊಲೀಸ್ ವರಿಷ್ಠಾಧಿಕಾರಿ ರವಿ ನಾಯ್ಕ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.

ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾಗಿರುವ ಪೊಲೀಸ್ ಅಧೀಕ್ಷಕ ಎನ್.ಬಿ.ಜಾಧವ ಸ್ವಾಗತಿಸಿ, ಶಾಲೆಯ ಪ್ರಗತಿ ವರದಿ ಮಂಡಿಸಿದರು. ಡಿಎಸ್ಪಿ ಆಗಿರುವ ಉಪಪ್ರಾಂಶುಪಾಲ ಟಿ.ಪೈಜ್ಜುದೀನ್ ವಂದಿಸಿದರು.

  ರಾಜ್ಯದ ವಿವಿಧ ಒಂಬತ್ತು ಘಟಕಗಳಿಂದ 268 ನಾಗರಿಕ ಪೊಲೀಸ ಕಾನ್ಸ್ಟೇಬಲ್ಗಳು ಹಾಗೂ 106 ಸಶಸ್ತ್ರ ಪೊಲೀಸ ಕಾನ್ಸ್ಟೇಬಲ್ಗಳು ತರಬೇತಿ ಪೂರ್ಣಗೊಳಿಸಿ, ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.