ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿ ಹೋರಾಟದ ಮಹತ್ವದ ಮೊದಲ ಹಂತದ ಗೆಲುವು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿ ಹೋರಾಟದ ಮಹತ್ವದ ಮೊದಲ ಹಂತದ ಗೆಲುವು Resignation of Union Education Minister Dharmendra Pradhan: A significant first-stage victory for th

ಹಾವೇರಿ 25 : ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ರಾಜಿನಾಮೆಗಾಗಿ, ನೀಟ್, ಎನ್‌.ಟಿ.ಎ ರದ್ದುಗೊಳಿಸಲು ಆಗ್ರಹಿಸಿ ಎಸ್‌ಎಫ್‌ಐ, ವಿದ್ಯಾರ್ಥಿ-ಯುವಜನರ ಜಂತರ್ ಮಂತರ್ ಸೇರಿದಂತೆ ಇಡೀ ದೇಶದಾದ್ಯಂತ ಬೃಹತ್ ತೀವ್ರ  ತೆರನಾದ ಹೋರಾಟ ನಡೆಸಿದರು.   

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿದ್ಯಾರ್ಥಿ ಸಮುದಾಯದ ನಿರಂತರ ಹೋರಾಟಕ್ಕೆ ಸಂದ ಮೊದಲ ಹಂತದ ಮಹತ್ವದ ಗೆಲುವಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅವ್ಯವಸ್ಥೆ, ಪರೀಕ್ಷಾ ಅಕ್ರಮಗಳು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ಹೋರಾಟದ ಫಲವಾಗಿ ಈ ಬೆಳವಣಿಗೆ ಸಂಭವಿಸಿದೆ.  

ಎಸ್‌ಎಫ್‌ಐ ಆರಂಭದಿಂದಲೂ ವೈಫಲ್ಯಗಳನ್ನು ಖಂಡಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸುತ್ತಾ ನಿರಂತರ ಹೋರಾಟ ನಡೆಸಿದೆ. ಈ ರಾಜೀನಾಮೆ ವಿದ್ಯಾರ್ಥಿ-ಯುವಜನರು, ಜನಪರ ಹೋರಾಟದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.  

ಆದರೆ ನಮ್ಮ ಹೋರಾಟ ಇಲ್ಲಿಗೆ ಅಂತ್ಯವಾಗುವುದಿಲ್ಲ.  ಸಂಪೂರ್ಣವಾಗಿ ವಜಾಗೊಳ್ಳುವವರೆಗೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಹಿಂಪಡೆಯುವವರೆಗೆ ಹಾಗೂ ಪರೀಕ್ಷಾ ಅಕ್ರಮಗಳಿಂದ ಬಲಿಪಶುಗಳಾದ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವವರೆಗೆ ಎಸ್‌ಎಫ್‌ಐ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.  

ವಿದ್ಯಾರ್ಥಿಗಳ ಶಿಕ್ಷಣ ಹಕ್ಕು, ಸಮಾನ ಅವಕಾಶ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗಾಗಿ ಎಸ್‌ಎಫ್‌ಐ ತನ್ನ ಹೋರಾಟವನ್ನು ಮುಂದುವರಿಸಲಿದೆ. ವಿದ್ಯಾರ್ಥಿ-ಯುವಜನರ ಹೋರಾಟಕ್ಕೆ ಕೈಜೋಡಿಸಿದ ಸಮಸ್ತ ಭಾರತೀಯರಿಗೂ ಕ್ರಾಂತಿಕಾರಿ ಅಭಿನಂದನೆಗಳು. "ನಾವು ಹೋರಾಡಿದೆವು... ಗೆದ್ದೆವು... ಹೋರಾಟ ಇನ್ನೂ ಮುಂದುವರಿಯುತ್ತದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಪತ್ರಿಕೆ ಹೇಳಿಕೆ ನೀಡಿದರು.