ನಿರಂತರ 35 ವರ್ಷಗಳ ಹೋರಾಟದ ಫಲವಾಗಿ ಮೀಸಲಾತಿ ಜಾರಿಗೆ
Reservation was implemented as a result of 35 years of continuous struggle
ಹಾವೇರಿ 23: ರಾಜ್ಯದಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರು ಹಾಗೂ ದಲಿತಸಮುದಾಯದವರ ನಿರಂತರ ಹೋರಾಟದ ಫಲವಾಗಿ ರಾಜ್ಯಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಮೀಸಲಾತಿ ಹಂಚಿಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಮೀಸಲಾತಿ ಹಂಚಿಕೆ ಮಾಡಲುಸಹಕಾರಿಯಾದರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ,ರಾಜ್ಯ ಸರ್ಕಾರದ ಸಚಿವ ಸಂಪುಟದಎಲ್ಲಾ ಮಂತ್ರಿಗಳಿಗೆ,ಶಾಸಕರಿಗೆ,ಒಳಮೀಸಲಾತಿಗೆ ಸಹಕಾರ ನೀಡಿದಎಲ್ಲಾ ವಕೀಲರಿಗೆ,ಮುಖಂಡರಿಗೆಸಮುದಾಯದ ಪ್ರತಿಯೊಬ್ಬರಿಗೂಕರ್ನಾಟಕರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರಕಲ್ಯಾಣ ಸಮಿತಿ(ರಿ) ರಾಜ್ಯಾಧ್ಯಕ್ಷರಾದಉಡಚಪ್ಪ ಮಾಳಗಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದಅವರು 35 ವರ್ಷಗಳ ಕಾಲ ಒಳಮೀಸಲಾತಿಗಾಗಿ ಅನೇಕ ಧರಣಿ,ಹೋರಾಟ,ಪ್ರತಿಭಟನೆ,ಸತ್ಯಗ್ರಹ,ಪಾದಯಾತ್ರೆ,ಉಪವಾಸ ಸತ್ಯಗ್ರಹ,ಅರೆಬೆತ್ತಲೆ ಮೆರವಣೆಗೆ ಸೇರಿದಂತೆ ವಿವಿಧವಿಭಿನ್ನಹೋರಾಟವನ್ನು ಮಾಡುತ್ತಾ ಬರಲಾಗಿತ್ತು.ಸಾಮಾಜಿಕ ನ್ಯಾಯದಡಿ ಶೋಷಿತರಿಗೆ ನ್ಯಾಯಒದಗಿಸಬೇಕೆಂದುರಾಜ್ಯದಲ್ಲಿ ಆಳ್ವಿಕೆ ಬರುವಎಲ್ಲಾ ಸರ್ಕಾರ ಬಂದಾಗಲೂ ನಿರಂತರವಾಗಿ ಹೋರಾಟ ಮಾಡಲಾಗಿತ್ತು.ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಅಗಷ್ಟ್-01-2024 ರಂದು ಸುಪ್ರೀಂಕೋರ್ಟ ಪೂರಕವಾಗಿರುವತೀರ್ಪು ನೀಡಿ ಒಳಮೀಸಲಾತಿಗೆ ಸಹಕಾರಿಯಾಯಿತು.ಒಳಮೀಸಲಾತಿ ಜಾರಿಗೆ ಪ್ರತ್ಯೇಕ್ಷವಾಗಿಹಾಗೂ ಪರೋಕ್ಷವಾಗಿ ಸಹಕಾರರಾಜ್ಯದ ಮಠಾಧೀಶರಿಗೆ,ನೌಕರ ವರ್ಗದವರಿಗೆ,ಪತ್ರಿಕೆ ಮತ್ತುಮಾಧ್ಯಮ ಬಳಗದವರಿಗೆ ಹಾಗೂ ಸಾರ್ವಜನಿಕರಿಗೆಕೃತಜ್ಷತೆಯನ್ನು ಸಲ್ಲಿಸುತ್ತೇವೆ.ರಾಜ್ಯದಲ್ಲಿನಎಲ್ಲಾ ಒಳಮೀಸಲಾತಿ ಹೋರಾಟಗಾರರಿಗೆ,ಕರ್ನಾಟಕದಲಿತ ಸಂಘರ್ಷ ಸಮಿತಿಯರಾಜ್ಯ,ಜಿಲ್ಲೆ,ತಾಲ್ಲೂಕ ಹಾಗೂ ಗ್ರಾಮ ಸಂಘಟನೆಗಳಿಗೆ ಕಲ್ಯಾಣ ಸಮಿತಿರಾಜ್ಯಾಧ್ಯಕ್ಷರಾದಉಡಚಪ್ಪ ಮಾಳಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 