ರಕ್ಷಣಾ ಕಾರ‌್ಯ ವಿಫಲ: ಗಟಾರನಲ್ಲಿ ಬಿದ್ದು ಕರು ಸಾವು

ರಕ್ಷಣಾ ಕಾರ‌್ಯ ವಿಫಲ: ಗಟಾರನಲ್ಲಿ ಬಿದ್ದು ಕರು ಸಾವು Rescue operation fails: Calf dies after falling into gutter

ಲೋಕದರ್ಶನ ವರದಿ 

ಜಮಖಂಡಿ 27: ನಗರದ ರೂಗಿಯಲ್ಲಮ್ಮ ದೇವಸ್ಥಾನ ಬಳಿ ಗಟಾರ ಮೋರೆಯಲ್ಲಿ ಆಕಳ ಕರುವೊಂದು ಬಿದ್ದು ಸಾವು-ಬದುಕಿನ ಮಧ್ಯ ಹೋರಾಟ ನಡೆಸಿದ ಮಾಹಿತಿ ಮೇರೆಗೆ ಪತ್ರಕರ್ತರು ರಕ್ಷಣೆ ಮಾಡಲು ಮುಂದಾದರು ಸಹ ಆಕಳು ಕರುವು ಕೊನೆಯುಸಿರೆಳೆದಿದೆ. 

ಆಕಳ ಕರು ಪ್ಲಾಸ್ಟಿಕ್‌ನಲ್ಲಿ ಹಾಕಿದ ತಿಂದು ಬಿಟ್ಟಿರುವ ಆಹಾರವನ್ನು ಗಟ್ಟಾರ ಮೋರೆಯಲ್ಲಿ ಬಿಸಾಕಿದ ಕಾರಣ ಅದನ್ನು ತಿನ್ನಲು ಹೋದ ಕರುವು ಗಟ್ಟಾರ ಮೋರೆಯಲ್ಲಿ ಬಿದ್ದಿದೆ. ಮೇಲೆಕ್ಕೆ ಹತ್ತಲು ಆಗದೆ ಒದ್ದಾಡುತ್ತಾ ಬಿದ್ದಿದು. ಕೆಲವಂದಿಷ್ಟು ಜನರು ಮೇಲಕ್ಕೆ ಎತ್ತಿದ್ದಾರೆ. ಮೋರೆಯಲ್ಲಿ ಬಿಸಾಕಿದ ತಿದ್ದು ಬಿಸಾಕಿದ ಆಹರವನ್ನು ತಿಂದ ಬಳಿಕ ವಾಸನೆ ಬರುತ್ತಿದ ಆಹಾರವನ್ನು ಸೇವಿದೆ. ಅದು ವಿಷಕಾರಿ ಆಹಾರ ಆಗಿರುವ ಕಾರಣ ಆಕಳ ಕರುವು ಒದ್ದಾಡುತ್ತಾ ಬಿದ್ದಿದೆ. 

ಪತ್ರಕರ್ತರಿಗೆ ಮಾಹಿತಿ ತಿಳಿದ ತಕ್ಷಣ ಅದನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಪಶು ಇಲಾಖೆಯ ವೈದ್ಯಾಧಿಕಾರಿಗಳಿಂದ ಚಿಕಿತ್ಸೆಯನ್ನು ಕೊಡಿಸಿದ ಬಳಿಕ. ಪಶು ವೈದ್ಯಾಧಿಕಾರಿ ಅವರು ವಿಷಕಾರಿ ಆಹಾರವನ್ನು ಸೇವಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಆಕಳ ಕರುವುವನ್ನು ಹೇಗಾದರು ಮಾಡಿ ಬದುಕಿಸಬೇಕೆಂದ ಪತ್ರಕರ್ತರು. ಅದಕ್ಕೆ ರಾಗಿ ಗಂಜಿಯನ್ನು ಕುಡಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಆಕಳ ಕರುವು ಚೇತರಿಸಿಕೊಂಡು ಮೇಲಕ್ಕೆ ಎದ್ದು ನಿಲ್ಲಲು ಪ್ರಯತ್ನಿಸಿದೆ. ಇನ್ನೇನು ಆಕಳು ಕರುವು ಬದುಕು ಉಳಿಯುತ್ತಿದೆ ಎಂದು ಭಾವಿಸಿದ ಪತ್ರಕರ್ತರು ನಿಟ್ಟುರುಸಿರು ಬಿಡುವಷ್ಟರಲ್ಲಿ ಆಕಳ ಕರುವು ಕೊನೆಯುಸಿರೆಳೆದಿದೆ. ಸ್ಥಳಕ್ಕೆ ನಗರಸಭೆಯ ಸಿಬ್ಬಂದಿಗಳ ಮೂಲಕ ಅದನ್ನು ದಪನ್ನ ಮಾಡಲು ತೆಗೆದುಕೊಂಡು ಹೋಗಿದ್ದಾರೆ. 

ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಶಶಿಕಾಂತ ತೇರದಾಳ, ಯಶವಂತ ಕಲೂತಿ, ಮುತ್ತುರಾಜ ಬಜಂತ್ರಿ, ಮುಖಂಡ ಪ್ರದೀಪ ಮೆಟ್ಟಗುಡ್ಡ, ಪೋಲಿಸ ಸಿಬ್ಬಂದಿ ಶಿವಾನಂದ ಪಾಟೀಲ, ನಗರಸಭೆ ಸಿಬ್ಬಂದಿ ರಾಘು ಕಡಕೋಳ ಸೇರಿದಂತೆ ಅನೇಕರು ಇದ್ದರು.