ಮಹಾಲಿಂಗಪುರಿಂದ ಮುಧೋಳಕ್ಕೆ ಬಸ್ ಬಿಡಲು ಮನವಿ
Request to run a bus from Mahalingapur to Mudhol
ರನ್ನ ಬೆಳಗಲಿ 20: ಮಹಾಲಿಂಗಪುರದಿಂದ ಮುಧೋಳಕ್ಕೆ ಪ್ರತಿ ದಿನ ಸಂಜೆ 4.30 ರಿಂದ 5ಗಂಟೆ ವೇಳೆ ಸಿಟಿ ಬಸ್ ಬಿಡಬೇಕೆಂದು ಆಗ್ರಹಿಸಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಧೋಳ್ ಘಟಕದ ವ್ಯವಸ್ಥಾಪಕರಿಗೆ ಸಮೀಪದ ರನ್ನ ಬೆಳಗಲಿ ಎಸ್ ಜಿ ಎಂ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸಂಜೆ 4.30ರ ವೇಳೆ ಶಾಲಾ ಕಾಲೇಜುಗಳು ಬಿಡುತ್ತವೆ ಈ ಸಮಯದಲ್ಲಿ ಮಹಾಲಿಂಗಪುರದಿಂದ ಮುಧೋಳಕ್ಕೆ ಹೋಗಲು ಯಾವುದೇ ಸಿಟಿ ಬಸ್ ಇಲ್ಲದ ಕಾರಣ ಮಹಾಲಿಂಗಪುರದಿಂದ ಬೆಳಗಲಿ, ಮಳಲಿ ಕೆನಾಲ್, ಸಾಲಿಮನಿ, ಮುಗಳಖೋಡ್ ಮತ್ತು ಸೊರಗಾವಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಒಂದು ವಾರದ ಒಳಗೆ ಬಸ್ಸುಗಳನ್ನು ಬಿಟ್ಟು ಸಾರಿಗೆ ಸಂಪರ್ಕವನ್ನು ಸರಿಪಡಿಸದೆ ಹೋದರೆ ಮುಷ್ಕರ ಮಾಡಲಾಗುವುದು ಎಂದು ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯ ಬಾಳಪ್ಪ ಯಡಹಳ್ಳಿ ಎಚ್ಚರಿಸಿದ್ದಾರೆ.
ಮುತ್ತಪ್ಪ ಅಂಗಡಿ, ಶಿವು ಗಾಣಿಗೇರ್, ಸಿದ್ದು ಕನಬೂರ್, ಸಾಗರ್ ಹವಾಲ್ದಾರ್, ಲಕ್ಷ್ಮಣ್ ಹಿಕಡಿ, ಸಿದ್ದು ದೊಡಹಟ್ಟಿ, ಹುಲ್ಲಪ್ಪ ಚಂದಪ್ಪನವರ, ದರ್ಶನ್ ಕಾಳವ್ವಗೋಳ್, ಮಲ್ಲು ಪೂಜಾರಿ, ಮುತ್ತು ಪೂಜಾರಿ, ಸದಾಶಿವ್ ಅವರಾದಿ ಇನ್ನಿತರ ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 