ಹಿಪ್ಪರಗಿ ಜಲಾಶಯದ 22 ಗೇಟ್‌ಗಳ ಬದಲಾಯಿಸಲು ಮನವಿ

ಹಿಪ್ಪರಗಿ ಜಲಾಶಯದ 22 ಗೇಟ್‌ಗಳ ಬದಲಾಯಿಸಲು ಮನವಿ Request to replace 22 gates of Hipparagi reservoir

 ಜಮಖಂಡಿ 10: ತಾಲೂಕಿನ ಹಿಪ್ಪರಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ 2004 ರಲ್ಲಿ 3 ಟಿ.ಎಮ್‌.ಸಿ ನೀರು ಸಂಗ್ರಹ ಸಾಮರ್ಥ್ಯ ಬ್ಯಾರೇಜ್ ನಿರ್ಮಿಸಿದ್ದು. ಇವಾಗ ಗೇಟುಗಳು ತುಕ್ಕು ಹಿಡಿದಿವೆ. 2-3 ದಿನಗಳಲ್ಲಿ ಒಂದು ಗೇಟ್ ಕಟ್ಟಾಗಿ ಸುಮಾರು 2 ಟಿಎಮ್‌ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು. ಇದರಿಂದ ಜಲಾಶಯದಲ್ಲಿ ಸಂಗ್ರಹವಿದ್ದ ನೀರು ಖಾಲಿಯಾಗುತ್ತಿದೆ. ಬರುವ ದಿನಮಾನಗಳಲ್ಲಿ ಈ ಭಾಗದ ಜಮಖಂಡಿ, ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ, ಜಮಖಂಡಿ ನಗರ ಸೇರಿದಂತೆ 25ಕ್ಕೂ, ಸುಮಾರು ನಗರ-ಗ್ರಾಮೀಣ ಪ್ರದೇಶಗಳಿಗೆ ನೀರಿನ ಬವಣೆ ಕಾಣಲಿದೆ. 

ಹಿಪ್ಪರಗಿ ಜಲಾಶಯದ 22 ಗೇಟುಗಳು ತುಕ್ಕು ಹಿಡಿದು ಮಾಸಿ ಹೋಗಿವೆ. ಉಳಿದ ಗೇಟ್‌ಗಳು ಕೂಡ ಕಟ್ಟಾಗಬಹುದು ಎಂದು ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಭಾಗದ ಎಲ್ಲ ರೈತ ಬಾಂಧವರ ಒತ್ತಾಸೆಯಂತೆ ಜಲಾಶಯದ 22 ಗೇಟ್‌ಗಳನ್ನು ಮತ್ತು ಎಲ್ಲ ಸಲಕರಣೆಗಳನ್ನು ಒಳಗೊಂಡು ಬದಲಾವಣೆ ಮಾಡಬೇಕೆಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ,ಶಿವಕುಮಾರ ಅವರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದು ಕೊಣ್ಣೂರ ಮನವಿಯನ್ನು ಸಲ್ಲಿಸಿದ್ದಾರೆ.  

ಸ್ಪಂದನೆ: ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಹಿಪ್ಪರಗಿ ಜಲಾಶಯದ ಬಗ್ಗೆ ನೀಡಿದ ಮನವಿಗೆ ಡಿಸಿಎಂ ಡಿ.ಕೆ ಶಿವಕುಮಾರ ಅವರು ನೀರಾವರಿ ನಿಗಮದ ಎಂ.ಡಿ ಅವರಿಗೆ ವರದಿ ತರಿಸಿ ಶೀಘ್ರವಾಗಿ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಳ್ಳುವಂತೆ ಸೂಚಿಸಿದರು ಎಂದು ತಿಳಿಸಿದ್ದಾರೆ.