ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಮನವಿ
Request to release water into the Gutti Basavanna canal
ಲೋಕದರ್ಶನ ವರದಿ
ಇಂಡಿ 31: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಇಂಡಿ ತಾಲ್ಲೂಕಿನ ಕೊನೆಯ ಹಳ್ಳಿವರೆಗೆ ನೀರು ಬಿಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಹಿರೇರೂಗಿ ಗ್ರಾಮ ಘಟಕ ವತಿಯಿಂದ ಇಂದು ಇಂಡಿ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ರೈತರು ಕೆಲ ಹೊತ್ತು ಪ್ರತಿಭಟನೆ ಮಾಡಿ ಇಂಡಿ ತಹಶೀಲದಾರ ನಾಗೇಂದ್ರ ಕೊಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ರೈತ ಮುಖಂಡ ಗುರ್ಪ ಅಗಸರ ಅವರು ಈ ಬಾರಿ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಾಗಿದ್ದು ದನಕರಗಳಿಗೆ ಕುಡಿಯುವ ನೀರಿನ ತೊಂದರೆ ಆಗುತ್ತಿದ್ದೆ ಹಾಗೂ ಈಗಾಗಲೇ ರೈತರುಗಳು ಟ್ಯಾಂಕರ್ ಮೂಲಕ ನಿಂಬೆ ದಾಳಿಂಬೆ ದ್ರಾಕ್ಷಿ ಬೆಳೆಗಳಿಗೆ ನೀರು ತರಿಸಿಕೊಳ್ಳುತ್ತಿದ್ದಾರೆ ಎಲ್ಲಾ ರೈತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈಗಾಗಲೇ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆ ಮೂಲಕ ಇಂಡಿ ಭಾಗದ ಕಾಲುವೆಗೆ ನೀರು ಬಿಟ್ಟರು, ಆ ನೀರು ಇನ್ನೂ ಹಿರೇರೂಗಿ ತಡವಲಗಾ ಬೊಳೆಗಾಂವ ಹಂಜಗಿ ಇಂಡಿ ಅಂಜುಟಿಗಿ ಗ್ರಾಮಗಳಿಗೆ ತಲುಪೆ ಇಲ್ಲ. ಆ ನೀರು ತಾಂಬಾ ಗ್ರಾಮದವರೆಗೆ ಮಾತ್ರ ಬಂದಿವೆ. ಆ ನೀರು ಟೆಲ್ ಎಂಡ್ ದೇವರಿಗೆ ಬಂದರೆ ಮಾತ್ರ ಈ ಎಲ್ಲಾ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ರೈತ ಮುಖಂಡರಾದ ಕೆಂಚಪ್ಪ ನಿಂಬಾಳ ಲಾಯಪ್ಪ ಉಪ್ಪಾರ ವಿಠೋಬಾ ಲಚ್ಯಾಣ ಸುರೇಶ ಜೇವೂರ ಸಿದ್ದು ಉಪ್ಪಾರ ಶರಣಪ್ಪ ಗುಂದಗಿ ಜೇಟ್ಟೆಪ್ಪ ಮಹಿನಹಳ್ಳಿ ರಾಜಶೇಖರ ತಾಂಬೆ ಭೀಮರಾಯ ಯಾಳಸಂಗಿ ಕೆಂಚಪ್ಪ ಹಲಸಂಗಿ ಜೇಟ್ಟೆಪ್ಪ ಬೊಳೆಗಾಂವ ಬಾಳು ಕೊಟಗೊಂಡ ಬಸ್ಸು ಗುನ್ನಾಪೂರ ರಮೇಶ ದಳವಾಯಿ ರಮೇಶ್ ಸಾಲೂಟಿಗಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 