ಶಿಕ್ಷಕ-ಸಿಬ್ಬಂದಿ ವರ್ಗಕ್ಕೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮನವಿ

ಲೋಕದರ್ಶನವರದಿ

ಕುರುಗೋಡು22: ಕುರುಗೋಡು ಗ್ರಾಮಾಂತರ ಅನುದಾನರಹಿತ ಶಾಲೆಗಳ ಆಡಳಿತಮಂಡಳಿ (ಕುಸ್ಮಸಂಸ್ಥೆ) ಪದಾಧಿಕಾರಿಗಳು ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕ-ಸಿಬ್ಬಂದಿ ವರ್ಗಕ್ಕೆ ಸಂಬಳ ವಿತರಣೆಗಾಗಿ ಸಕರ್ಾರ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಗುರುವಾರ ತಹಶೀಲ್ದಾರ ಮಲ್ಲೇಶಪ್ಪ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕುಸ್ಮ ಸಂಸ್ಥೆಯ ಅಧ್ಯಕ್ಷ ಜಿ.ಗುರುಮೂತರ್ಿ ಮಾತನಾಡಿ, ಕೊರೋನಾ ವೈರಸ್ ನಿಂದ ಖಾಸಗಿ ಶಾಲೆಗಳು ಹಾಗು ಶಿಕ್ಷಕ-ಸಿಬ್ಬಂದಿ ವರ್ಗ ಆಥರ್ಿಕವಾಗಿ ತತ್ತರಿಸಿವೆ. ಆದ್ದರಿಂದ ಸದರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಮೊದಲ ಆದ್ಯತೆ ಮೇರೆಗೆ ಖಾಸಗಿ ಅನುದಾನರಹಿತ ಶಾಲೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲು ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಶಿಘ್ರವೇ ಆದೇಶ ಹೊರಡಿಸಬೇಕು ಮತ್ತು ಆರ್ಟಿಇ ಹಣವನ್ನು ತ್ವರಿತವಾಗಿ ಬಿಡುಗಡೆಗೊಳಿಸಿ ಶಾಲೆಗಳ ಅಬಿವೃದ್ಧಿಗೆ ಆಸರೆಯಾಗಬೇಕೆಂದು ಒತ್ತಾಯಿಸಿದರು.

  ಕುಸ್ಮ ಸಂಸ್ಥೆಯ ಪ್ರದಾನ ಕಾರ್ಯದಶರ್ಿ ಎ.ತಾಂಡವಕೃಷ್ಣ ಮಾತನಾಡಿ, ಕನ್ನಡಪ್ರೇಮಿ ಕನ್ನಡಮಾದ್ಯಮ ಅನುದಾನರಹಿತ ಶಾಲೆಗಳು 10 ಸಾವಿರ ಒಳಗಡೆ ಶುಲ್ಕಪಡೆದು ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡಮಾದ್ಯಮ ಪ್ರಾಥಮಿಕ ಹಾಗು ಪ್ರೌಢಶಾಲೆಗಳನ್ನು ನಡೆಸುತ್ತಿದ್ದು, ಇವುಗಳಿಗೆ ಅನುದಾನವನ್ನು ಒಳಪಡಿಸಬೇಕು. ಮಾತ್ರವಲ್ಲದೆ ಖಾಸಗಿ ಶಾಲೆಗಳ ಶಿಕ್ಷಕ ಹಾಗು ಸಿಬ್ಬಂದಿವರ್ಗಕ್ಕೆ ಬಡ್ಡಿರಹಿತ ಸಾಲವನ್ನು ನೀಡಬೇಕೆಂದು ಹೇಳಿದರು. 

ಮನವಿ ಸ್ವೀಕರಿಸಿದ ತಹಶೀಲ್ದಾರರು ಮುಖ್ಯಮಂತಿಗಳಿಗೆ ರವಾನಿಸುವುದಾಗಿ ಭರವಸೆ ನೀಡಿದರು. 

      ಕುಸ್ಮಸಂಸ್ಥೆಯ ಗೌರವಾದ್ಯಕ್ಷ ಪಂಚಾಕ್ಷರಯ್ಯಸ್ವಾಮಿ, ಪದಾದಿಕಾರಿಗಳಾದ ವಿಎಸ್.ಚಕ್ರವತರ್ಿ, ಜೆ. ರವಿರೆಡ್ಡಿ, ಎನ್.ಉಮೇಶ್ಗೌಡ್ರು, ಬಿ.ಸಿದ್ದಯ್ಯ, ಬಿ.ಕೃಷ್ಣ, ಕೆ.ಶಂಕರ್, ಚಂದ್ರಶೇಖರ್ ಆಚಾರಿ, ಹೆಚ್.ಎಂ.ವಿಶ್ವನಾಥಸ್ವಾಮಿ, ಸೇರಿದಂತೆ ಇತರರು ಇದ್ದರು.