ಇಂಗಳೇಶ್ವರದಿಂದ ಡೋಣೂರ ಹಾಗೂ ಬಿಸನಾಳ ರಸ್ತೆ ಡಾಂಬರೀಕರಣಗೊಳಿಸಲು ಮನವಿ

ಇಂಗಳೇಶ್ವರದಿಂದ ಡೋಣೂರ ಹಾಗೂ ಬಿಸನಾಳ ರಸ್ತೆ ಡಾಂಬರೀಕರಣಗೊಳಿಸಲು ಮನವಿ  Request to asphalt the road from Ingaleshwar to Donur and Bisana

ಲೋಕದರ್ಶನ ವರದಿ 

ವಿಜಯಪುರ 11: ಇಂಗಳೇಶ್ವರದಿಂದ ಬೊಮ್ಮನಹಳ್ಳಿ ಡೋಣೂರ ಹಾಗೂ ಬಿಸನಾಳ ಹೋಗುವ ರಸ್ತೆ ರಿಪೇರಿಗೊಳಿಸಿ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ರೈತರು ಒತ್ತಾಯಿಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಎಸ್‌. ಪೊಲೀಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರದಿಂದ ಬೊಮ್ಮನಹಳ್ಳಿ ವರೆಗೆ ಹೋಗುವ ಹಾಗೂ ಡೋಣೂರ ಹಾಗೂ ಬಿಸನಾಳ ಸಂಪರ್ಕ ರಸ್ತೆ ಇದ್ದು, ಇದೆ ರಸ್ತೆಯನ್ನು ಅನುಸರಿಕೊಂಡು ನೂರಾರು ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಅದರಂತೆ ಸ್ಪಷ್ಟವಾಗಿ 33 ಪೀಟ್ ಅಗಲವಾದ ರಸ್ತೆಯ ಗುರುತು ನಕ್ಷೆಯಲ್ಲಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯಲ್ಲಿ ಸಾಕಷ್ಟು ಮುಳ್ಳು ಕಂಟಿಗಳು ಬೆಳೆದಿದ್ದು ರಸ್ತೆ ಬಂದಾಗಿದ್ದರಿಂದ ರೈತರು ಜಮೀನುಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.

ಮಳೆಗಾಲ ಬಂದರೆ ರಸ್ತೆ ಕೆಸರು ಗದ್ದೆಯಾಗಿ ಮಾರು​‍್ಡತ್ತದೆ. ಇದರಿಂದ ರೈತರು ಜಮೀನುಗಳಿಗೆ ಹೊಗಲು ಆಗದೆ ಕೃಷಿ ಚಟುವಟಿಕೆಗಳಿಗೆ ಕೂಡ ತೊಂದರೆಯಾಗಿದೆ. ಜಮೀನು ಬಿತ್ತನೆ ಮಾಡದೆ ಬೀಳು ಬಿದ್ದಿವೆ. ಅಕ್ಕಪಕ್ಕದ ಜಮೀನಿನಲ್ಲಿ ಹಾಯ್ದು ಹೋಗಬೇಕೆಂದರೆ ಆ ರೈತರು ಕೂಡಲ ಜಮೀನುಗಳಲ್ಲಿ ಹಾಯ್ದು ಹೋಗಲು ಅವಕಾಶ ಕೊಡುತ್ತಿಲ್ಲ. ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ರಸ್ತೆ ರಿಪೇರಿ ಗೊಳಿಸಿ ಢಾಂಬರೀಕರಣ ಮಾಡಿ ರೈತರ ದಾರಿಯ ಅನುಕೂಲ ಮಾಡಿಕೊಡಬೇಕೆಂದು ಇಂಗಳೇಶ್ವರ ಗ್ರಾಮದ ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಿ.ಎಸ್‌. ಪೊಲೀಸ್ ಪಾಟೀಲ ಅವರು ಮಾತನಾಡಿ, 15 ದಿನಗಳಲ್ಲಿ ದಾರಿ ರೀಪೆರಿಗೊಳಿಸಿ ದಾರಿಗುಂಟ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ರಸ್ತೆ ರಿಪೇರಿ ಮಾಡಿ ರೈತರಿರು ತಮ್ಮ ಜಮೀನುಗಳಿಗೆ ಹೋಗಲು ಅನುಕೂಲ ಮಾಡಿಕೊಡಲಾಗುವುದು ಎಂದರು. ಈ ವಾರದಲ್ಲಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ಮಾಡಿಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಸಿದ್ರಾಮಪ್ಪ ಎಮ್ಮಿ, ಸಿದ್ದಪ್ಪ ಜಕ್ಕೆನವರ, ಶ್ರೀಧರ ಮಠ, ಜಗದೀಶ ತಕ್ಕೋಡ, ಮುರಿಗೆಪ್ಪ ತಾಳಿಕೋಟಿ, ಶ್ರೀಶೈಲ ಅವಟಿ, ಶ್ರೀಶೈಲ ತಾಳಿಕೋಟಿ, ಶರಣಪ್ಪ ಹಂಡಿ, ನಿಂಗಪ್ಪ ಸಜ್ಜನ, ವಿಠ್ಠಪ್ಪ ಕುಂಬಾರ, ಸಿದ್ದಲಿಂಗಪ್ಪ ಮನಹಳ್ಳಿ, ಗುರ​‍್ಪ ಕಾಳಗಿ, ಬಸಗೊಂಡಪ್ಪ ಡಿಗ್ಗಾವಿ, ಅಕ್ಷಯ ತಾಳಿಕೋಟಿ, ಮಲ್ಲನಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.