ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರನ್ನು ನೇಮಿಸಲು ವಿನಂತಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರನ್ನು ನೇಮಿಸಲು ವಿನಂತಿ Request to appoint permanent doctors in primary health centers

ಲೋಕದರ್ಶನ ವರದಿ 

 ಧಾರವಾಡ 27 : ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ತಾಲೂಕುಗಳು ಇದ್ದು ರೈತರು, ಕಾರ್ಮಿಕರು, ಮುಂತಾದವರು ಬಡಜನತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಂದ ಸರಿಯಾಗಿ ಆರೋಗ್ಯ ಸೇವೆ ದೊರೆಯದೆ ಆರೋಗ್ಯ ಸೇವೆಗಾಗಿ ಜಿಲ್ಲಾಕೇಂದ್ರಕ್ಕೆ ಬರುವ ಮತ್ತು ಖಾಸಗಿ ದವಾಖಾನೆಗಳಿಗೆ ಮೊರೆಹೋಗುತ್ತಿರುವುದರಿಂದ ಆರ್ಥಿಕ ತೊಂದರೆಗಿಡಾಗುತ್ತಿದ್ದಾರೆ. 

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ವೈದ್ಯರಕೊರತೆ ಇದ್ದು, ಇಂಥ ಸಂದರ್ಭದಲ್ಲಿ ಈಗಿರುವ ವೈದ್ಯರಿಗೆ ಎರಡು-ಮೂರು ಕೇಂದ್ರಗಳ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು ಹಾಗೂ ಅರೆಕಾಲಿಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಅವರಿಂದ ರೋಗಿಗಳ ಸೇವೆ ಸಮರ​‍್ಕವಾಗಿ ಮಾಡಲು ಸಾಧ್ಯವಾಗುವುದಿಲ್ಲ. 

ಆದ್ದರಿಂದ ಕೂಡಲೇ ಖಾಯಂ ವೈದ್ಯರನ್ನು ನೇಮಿಸಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಗಳು ಖಾಯಂ ಆಗಿ ಕಾರ್ಯನಿರ್ವಹಿಸುವಂತೆ ರೋಗಿಗಳ ಹಿತ ಕಾಪಾಡಬೇಕೆಂದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚು ಓಷಧಿಗಳು ಲಭ್ಯವಾಗುವ ಹಾಗೆ ವ್ಯವಸ್ಥೆ ಮಾಡಬೇಕು ರೋಗಿಗಳ ತಪಾಸಣೆ ಸಲುವಾಗಿ ಜಿಲ್ಲಾಕೇಂದ್ರದಲ್ಲಿ ಎಂ.ಆರ್‌.ಆಯ್ ಸೆಂಟರ್ ಗಳನ್ನು ಹೆಚ್ಚಿಸಬೇಕೆಂದು ಸಮಸ್ತ ಧಾರವಾಡ ಜಿಲ್ಲೆಯ ಜನತೆಯ ಪರವಾಗಿ ಜನತಾ ದಳ ಸಂಯುಕ್ತ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವರಲ್ಲಿ ವಿನಂತಿಸಿದ್ದಾರೆ.