ಮಾದಿಗೆ ಜನಾಂಗ ಆದ್ಯತೆಗೆ ಮನವಿ


ಲೋಕದರ್ಶನ ವರದಿ

ಹಾವೇರಿ 18: ಮಾದಿಗರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಅಖಿಲ ಕನರ್ಾಟಕ ಆದಿ ಜಾಂಬವ ಸಂಘದ ವತಿಯಿಂದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಬಿಎಸ್ ಯಡಿಯೂರಪ್ಪರಿಗೆ ಸಂಘದ ರಾಜ್ಯ ಕಾರ್ಯದಶರ್ಿಗಳಾದ ಡಿಎಸ್ ಮಾಳಗಿ ಮನವಿ ಸಲ್ಲಿಸಿದರು.     ಇತ್ತೀಚಿಗೆ ಬಿಎಸ್ವೈಯವರನ್ನು ಭೇಟಿ ಮಾಡಿದ ಡಿಎಸ್ ಮಾಳಗಿ ನೇತೃತ್ವದ  ನಿಯೋಗ ಅವಿಭಾಜ್ಯ ಧಾರವಾಡ ಜಿಲ್ಲೆಯ ಮಾದಿಗ(ಎಡಗೈ)ಜನಾಂಗದವರು 4.5 ಲಕ್ಷ ಮತದಾರರಿದ್ದೇವೆ. ಈ ವ್ಯಾಪ್ತಿಯಲ್ಲಿ 17 ವಿಧಾನ ಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳು ಇವೆ.2018 ರ ವಿಧಾನ ಸಭಾ ಚುನಾವಣೆಯಲ್ಲಿ ಎಡಗೈ ಸಮುದಾಯದವರಿಗೆ ಟಿಕೇಟ್ ಕೊಡುತ್ತೇವೆ ಆಶ್ವಾಸನೆ ನೀಡಿದ್ದಾಗಿದೆ. ಆದರೂ ಈ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಸುಮಾರು 57.2% ರಷ್ಟು ಇದ್ದರೂ ಬಹುಸಂಖ್ಯಾತಸಮುದಾಯಕ್ಕೆ ಮತ್ತು ಅಸ್ಪೃಶ್ಯರಾದ ನಮ್ಮ ಸಮುದಾಯಕ್ಕೆ ರಾಜಕೀಯ ಘೋರ ಅನ್ಯಾಯ ಮಾಡಿದ್ದೀರಿ. ಈ ಬಾರಿ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನ ಬರಲು ನಮ್ಮ ಸಮುದಾಯದ ಪಾತ್ರ ಬಹುಮುಖ್ಯವಾಗಿದೆ. ಇದಕ್ಕೆ ನಿದರ್ಶನ ಅಂದರೆ ದಿನಪತ್ರಿಕೆಗಳಲ್ಲಿ ಮಾದಿಗರು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಮತ ನೀಡಿದ್ದಾರೆ ಎಂಬ ವಿಷಯವನ್ನು ನೋಡಬಹುದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನವದೆಹಲಿಯಲ್ಲಿ ತಮ್ಮ ಸೋಲಿಗೆ ಕಾರಣವೇನು ಪತ್ರಕರ್ತರು  ಕೇಳಿದಾಗ ಸದಾಶಿವ ಆಯೋಗದ ವರಿದಿಯನ್ನು ಜಾರಿಗೆ ತರದೇ ಇದ್ದದಕ್ಕೆ ಎಡಗೈ ಜನಾಂಗದವರು ಎಂದು ಹೇಳಿದ್ದು ಇದೆ.  

  ಈ ಸಮುದಾಯ ಆಥರ್ಿಕವಾಗಿ,ರಾಜಕೀಯವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಿಗೆ ಒಳಪಟ್ಟ ಯಾರನ್ನಾದರ ಆಯ್ಕೆ ಮಾಡಬೇಕು.ಮಾದಿಗ ಸಮುದಾಯದ ಕೆ ಬಿ ಶ್ಯಾಣಪ್ಪ ಅವರ ಸ್ಥಾನಕ್ಕೆ ಇದೇ ಮಾದಿಗರನ್ನು ಶಿಪ್ಪಾರಸ್ಸು ಮಾಡುವಂತಾಗಬೇಕು. ನಮ್ಮ ಬೇಡಿಕೆ ಈಡೇರಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಮುದಾಯ ತಮ್ಮೊಂದಿಗೆ ಇರಲಿದೆ.

ಸಣ್ಣ ಸಣ್ಣ ಸಮುದಾಯದವರನ್ನು ಶಾಸಕರನ್ನಾಗಿ ಮಾಡಿದ್ದೀರಿ ಮಾದಿಗ ಬಹುಸಂಖ್ಯಾತ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು  ಮುಖಂಡ ಡಿಎಸ್ ಮಾಳಗಿ ಆಗ್ರಹಿಸಿದ್ದಾರೆ.