ಲೋಕದರ್ಶನ ವರದಿ
ಚಿಕ್ಕೋಡಿ 13: ಚಿಕ್ಕೋಡಿ ಪಟ್ಟಣದಿಂದ ಬಾನಂತಿಕೋಡಿ ಗ್ರಾಮಕ್ಕೆ ಹೋಗುವ ರಸ್ತೆ ಕಿರಿದಾಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ರಸ್ತೆಯನ್ನು ಅಗಲೀಕರಣ ಮಾಡಿ ರಸ್ತೆಗೆ ಹಂಪು ನಿಮರ್ಾಣ ಮಾಡುವಂತೆ ಒತ್ತಾಯಿಸಿ ದಿ.12 ರಂದು ಪಟ್ಟಣದ ಕುವೆಂಪು ನಗರದ ನಿವಾಸಿಗಳು ಪಂಚಾಯತ ರಾಜ್ಯ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತರ ಎಸ್.ಆರ್.ಭಜಂತ್ರಿಯವರಿಗೆ ಮನವಿ ಸಲ್ಲಿಸಿದರು.
ಚಿಕ್ಕೋಡಿ ನಗರದ ಡಾ. ಬಿ.ಅಂಬೇಡ್ಕರ ನಗರದ ಮುಖಾಂತರ ಬಾನಂತಿಕೋಡಿ ಗ್ರಾಮಕ್ಕೆ ಕೂಡುವ ರಸ್ತೆಯು ಗ್ರಾಮೀಣ ರಸ್ತೆಯಾಗಿದ್ದು, ರಸ್ತೆಯು 3.75 ಮೀಟರ್ ಅಗಲ ಕ್ಯಾರೇಜ್ವೇ ಹೊಂದಿರುತ್ತದೆ. ಈ ರಸ್ತೆಯ ಮೇಲೆ ಇಂಜಿನಿಯರಿಂಗ್ ಕಾಲೇಜು, ಬಾನಂತಿಕೋಡಿ, ಜೋಡಕುರಳಿ, ಕೇರೂರ, ಕೆಂಪಟ್ಟಿ ಹಾಗೂ ಕುವೆಂಪು ನಗರ, ಚಿಕ್ಕೋಡಿ ನಗರದ ನಿವಾಸಿಗಳು, ಮಕ್ಕಳು ಬೆಳಿಗ್ಗೆ ವಾಯು ವಿಹಾರಕ್ಕಾಗಿ ಬರುತ್ತಿರುವುದರಿಂದ ಪ್ರತಿದಿನ ಭಾರವಾದ ವಾಹನಗಳು, ದ್ವಿಚಕ್ರ ವಾಹನಗಳು, ಕಾಲೇಜುಗಳ ವಾಹನಗಳ ಸಂಚಾರ ತುಂಬಾ ಹೆಚ್ಚಾಗಿದೆ. ಈ ರಸ್ತೆಯ ಅಕ್ಕ ಪಕ್ಕದಲ್ಲಿ ನಗರೀಕರಣವಾಗುತ್ತಿರುವ ಕಾರಣ ಜನಸಾಂದ್ರತೆ ಸಹ ಹೆಚ್ಚುತ್ತಿದೆ. ರಸ್ತೆಯಲ್ಲಿ ಕಾಲೇಜು ವಿದ್ಯಾಥರ್ಿಗಳು ಅತೀ ವೇಗವಾಗಿ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದಾರೆ. ಶಾಲಾ ಮಕ್ಕಳು ಶಾಲಾವಾಹನಕ್ಕಾಗಿ ಕಾಯುವಾಗ ಜೀವಹಾನಿಯಾಗುತ್ತಿದ್ದು, ವಾರಕ್ಕೆ 2 ಮತ್ತು 3 ಅಪಘಾತಗಳು ಸಂಭವಿಸುತ್ತಿವೆ. ಕೆಲವು ಜೀವ ಹಾನಿಗಳು ಸಹ ಆಗಿವೆ. ಆದ್ದರಿಂದ ಈಗಿದ್ದ 3.75 ಮೀಟರ್ ಅಗಲವಿರುವ ಈ ರಸ್ತೆಯನ್ನು 5.50 ಮೀಟರ್ ಅಗಲ ರಸ್ತೆಯನ್ನಾಗಿ ಅಗಲೀಕರಣಗೊಳಿಸಿ ಅಪಘಾತಗಳನ್ನು ತಡೆದು ಕುವೆಂಪು ನಗರದ ಕ್ರಾಸನಲ್ಲಿ ವೈಜ್ಞಾನಿಕ ಹಂಪುಗಳನ್ನು ಆದಷ್ಟು ಬೇಗ ಅಳವಡಿಸುವಂತೆ ಮನವಿ ಮಾಡಿದ್ದಾರೆ.
ರಂಜೀತ ಕಾಂಬಳೆ, ಚಂದ್ರಕಾಂತ ಹುಕ್ಕೇರಿ, ಚೇತನ ಕಾಂಬಳೆ, ಮಲ್ಲಿಕಾಜರ್ುನ ಸಿದ್ದನ್ನವರ, ಭೀಮರಾವ ಚಿಂಚಣಿ, ಪ್ರಕಾಶ ಕರೋಶಿ ಮುಂತಾದವರು ಉಪಸ್ಥಿತರಿದ್ದರು.