ಪೋಷಕರ ಪತ್ತೆಗಾಗಿ ಮನವಿ


ಲೋಕದರ್ಶನ ವರದಿ

ಬಳ್ಳಾರಿ17: ಬುಕ್ಕಸಾಗರ ಗ್ರಾಮದ ಕಮಲಾಪುರದ ಕಂಪ್ಲಿ ರಸ್ತೆಯ ಪಕ್ಕದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಆಗಸ್ಟ್ 12 ರಂದು ಸುಮಾರು 5 ದಿನಗಳದ ಅನಾಥ ಹೆಣ್ಣು ಕೂಸು ಪತ್ತೆಯಾದ ಕುರಿತು ಅಮೂಲ್ಯ (ಜಿ)ವಿಶೇಷ ದತ್ತು ಸಂಸ್ಥೆಯಲ್ಲಿ ದಾಖಲಾಗಿದೆ ಎಂದು ಸಂಸ್ಥೆಯ ಅಧೀಕ್ಷಕರು ತಿಳಿಸಿದ್ದಾರೆ.

   ಕೂಸುವಿನ ಚಹರೆ : ಬಿಳಿ ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಈ ಮಗುವು ಆ.12 ರಂದು ಸಿಕ್ಕಿದ್ದು, ಹೊಸಪೇಟೆಯ ಡಾನ್ ಬಾಸ್ಕೋ, ಚೈಲ್ಡ್ ಲೈನ್ ವಶಕ್ಕೆ ಪಡೆದುಕೊಂಡು ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಅಮೂಲ್ಯ (ಜಿ)ವಿಶೇಷ ದತ್ತು ಸಂಸ್ಥೆಗೆ ನೀಡಿರುತ್ತಾರೆ. ಈ ಮಗುವಿನ ಸಂಬಂಧಪಟ್ಟವರು/ಪೋಷಕರು ಇದ್ದಲ್ಲಿ ಕೂಡಲೇ ಅಧೀಕ್ಷಕರು, ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆ, ಬಳ್ಳಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂಟೋನ್ಮಂಟ್, ಬಳ್ಳಾರಿ. ದೂ.ಸಂ.08392-297101 ಅಥವಾ ಇಮೇಲ್ ಐಡಿ: ಖಣ62@ರಟಚಿ.ಛಿಠಟ ಗೆ ಮಾಹಿತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.