ಉನ್ನತೀಕರಿಸಿದ ಗ್ರಂಥಾಲಯಕ್ಕಾಗಿ ಆಗ್ರಹಿಸಿ ಮನವಿ


ಹಿರೇಬಾಗೇವಾಡಿ 19ಃ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಾರ್ವಜನಿಕ ಗ್ರಂಥಾಲಯವನ್ನು ಮೇಲ್ದಜರ್ೆಗೆ ಏರಿಸಬೇಕೆಂದು ಆಗ್ರಹಿಸಿ ಹಿರೇಬಾಗೇವಾಡಿ ವಲಯದ ಪದವಿಧರರ ವೇದಿಕೆಯ ಮುಖಂಡರು ಜಿಲ್ಲಾ ಗ್ರಂಥಾಲಯದ ಉಪ ನಿದರ್ೇಶಕರಿಗೆ ಮನವಿ ಸಲ್ಲಿಸಿದರು. 
ಸುಮಾರು 18 ಸಾವಿರದಷ್ಟು ಜನ ಸಂಖ್ಯೆಯನ್ನು ಹೊಂದಿರುವ ಹೋಬಳಿಮಟ್ಟದ ದೊಡ್ಡ ಗ್ರಾಮವಾಗಿದ್ದು ತಾಲೂಕಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಆದರೂ ಸಹ ಇಲ್ಲಿನ ಒಬೇರಾಯನ ಕಾಲದ ಗ್ರಂಥಾಲಯವು ತನ್ನ ಅಳಿವು ಉಳಿವಿನ ಹೋರಾಟ ನಡೆಸುತ್ತಿದೆ. 
ಸದ್ಯ ಕಾರ್ಯ ನಿರ್ವಹಿಸುತ್ತಿರುವ ಹಳೆಗ್ರಾಮ ಪಂಚಾಯತ ಕಟ್ಟಡದಲ್ಲಿನ ಗ್ರಂಥಾಲಯವು ಜೀಣರ್ಾವಸ್ಥೆಯನ್ನು ತಲುಪಿದೆ. ಮೂಲಭೂತ ಸೌಕರ್ಯ ಮತ್ತು ಸೂಕ್ತ ನಿರ್ವಹಣೆ ಇಲ್ಲದೆ ಇರುವುದರಿಂದ ಇದು  ಓದುಗರ ಮನಸ್ಸನ್ನು ಘಾಸಿಗೊಳಿಸುತ್ತಿದೆ. ಅಲ್ಲದೆ ಗ್ರಂಥಾಲಯದ ಕೊಠಡಿಯಲ್ಲಿಯೆ ಅಂಗನವಾಡಿ ಕೇಂದ್ರವು ಸಹ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಗ್ರಂಥಾಲಯದ ಮೂಲ ಉದ್ದೇಶವೆ ವಿಫಲವಾಗುತ್ತಿದೆ. ಆದ್ದರಿಂದಾಗಿ ಓದುಗರಿಗೆ ಪೂರಕ ವಾತಾವರಣವಿರುವ ಪ್ರತ್ಯೇಕ ಕಟ್ಟಡದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳಿರುವ ಸುಸಜ್ಜಿತ ಉನ್ನತೀಕರಿಸಿದ ಗ್ರಂಥಾಲಯವನ್ನು ಪ್ರಾರಂಭಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.
ಈ ಒಂದು ಸೌಲಭ್ಯದಿಂದ ವಿದ್ಯಾಥರ್ಿಗಳಿಗೆ, ಸ್ಪಧರ್ಾತ್ಮಕ ಪರೀಕ್ಷೆ ಎದುರಿಸುವವರಿಗೆ, ಉನ್ನತ ವ್ಯಾಸಂಗ ಮಾಡುತ್ತಿರುವ ಪದವಿಧರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಉಪನಿದರ್ೇಶಕರ ಪರವಾಗಿ ಮನವಿ ಸ್ವೀಕರಿಸಿದ ಗ್ರಂಥಪಾಲಕಿ ಸೀಮಿಮಠ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪದವಿಧರರ ವೇದಿಕೆಯ ಮುಖಂಡರಿಗೆ ಭರವಸೆ ನೀಡಿದರು. 
ಸಿದ್ದಾರೂಡ ಹೊನ್ನನ್ನವರ, ವಿಶ್ವನಾಥ ಅಳಗುಂಡಿ, ಬಸವರಾಜ ಸುಲದಾಳ,  ಸುದರ್ಶನ ಮೊಗಲಾಯಿ, ಸಂಜೀವ ಕೋಶಾವರ, ಆನಂದ ಮುದೆಕ್ಕನ್ನವರ,  ಮಂಜುನಾಥ ಹುಲಮನಿ, ಪ್ರಶಾಂತ ಅಂಗಡಿ, ಪಿ.ಎಂ.ಪಾಟೀಲ ಮುಂತಾದವರು ಉಪಸ್ಥಿತರಿದ್ದರು. 
ಪೋಟೊ ಶೀಷರ್ಿಕೆ : ಉನ್ನತೀಕರಿಸಿದ ಗ್ರಂಥಾಲಯಕ್ಕಾಗಿ ಆಗ್ರಹಿಸಿ  ಪದವಿಧರರ ವೇದಿಕೆಯ  ಮುಖಂಡರು ಮನವಿ 
               ಸಲ್ಲಿಸಿದರು.