ಹಿರೇಬೆಣಕಲ್ ಪ್ರಾಗೈತಿಹಾಸಿಕ ತಾಣಕ್ಕೆ 10 ಕೋಟಿ ಮುಂಬರುವ ಬಜೆಟ್ ನಲ್ಲಿ ಮಂಜೂರಿಗೆ ಕೋರಿಕೆ

ಹಿರೇಬೆಣಕಲ್ ಪ್ರಾಗೈತಿಹಾಸಿಕ ತಾಣಕ್ಕೆ  10 ಕೋಟಿ  ಮುಂಬರುವ ಬಜೆಟ್ ನಲ್ಲಿ ಮಂಜೂರಿಗೆ ಕೋರಿಕೆ  Request for allocation of Rs 10 crore in the upcoming budget for Hirebenkal prehistoric site

                ಗಂಗಾವತಿ ಕೊಪ್ಪಳ 08:  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹಿರೇಬೆಣಕಲ್ಲಿನ ಪ್ರಾಗೈತಿಹಾಸಿಕ ತಾಣದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ?10 ಕೋಟಿ ಬಜೆಟ್ ಹಂಚಿಕೆ ಮಾಡಬೇಕೆಂದು ಕೋರಲಾಗಿದೆ. ಪರಿಸರ ಸೇವಾ ಟ್ರಸ್ಟ್‌ ಮತ್ತು ಚಾರಣ ಬಳಗದ ಮುಖಂಡ ಗುಡ್ಲಾನೂರ್ ಮಂಜುನಾಥ್ ಅವರು ಈ ವಿಷಯವನ್ನು   ಫೆ. 01 ರಂದು  ಮಂಡಿಸುತ್ತಿರುವ ಕೇಂದ್ರ ವಿತ್ತ ಸಚಿವರು ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರದ ಮೂಲಕ  ಒತ್ತಾಯಿಸಿದ್ದಾರೆಪತ್ರದಲ್ಲಿ  ಹಿರೇಬೆಣಕಲ್ಲು ಸುಮಾರು 3,500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಸಂಸ್ಕೃತಿಯ ಪ್ರಮುಖ ಪುರಾವೆಗಳನ್ನು ಹೊಂದಿದೆ. ಬೃಹತ್ ಶಿಲಾಸಮಾಧಿಗಳು, ಗವಿಚಿತ್ರಗಳು, ಕಲ್ಲೊಂಬೆಗಳು ಮತ್ತು ವಸತಿ ಅವಶೇಷಗಳನ್ನು ಒಳಗೊಂಡ ಈ ಸಮಗ್ರ ಪುರಾವೆಗಳು ಒಂದೇ ಸ್ಥಳದಲ್ಲಿ ದೊರಕುವುದು ವಿಶ್ವದಲ್ಲಿ ಅಪರೂಪ ಎಂದು ತಜ್ಞರು ಗುರುತಿಸಿದ್ದಾರೆ.

                ಭಾರತೀಯ ಪುರಾತತ್ತ್ವ ಸರ್ವೇಕ್ಷಣೆಯ ರಕ್ಷಣೆಯಲ್ಲಿದ್ದರೂ, ತಾಣವು ಹವಾಮಾನ ಮತ್ತು ಮಾನವೀಯ ಹಸ್ತಕ್ಷೇಪದಿಂದ ಹಾನಿಗೊಳಗಾಗುತ್ತಿದೆ. ಸಂಶೋಧನೆ, ಭದ್ರತೆ ಮತ್ತು ಪ್ರವಾಸಿ ಸೌಕರ್ಯಗಳ ಕೊರತೆ ಇದೆ. ಪರಿಸರ ಸೇವಾ ಟ್ರಸ್ಟ್‌ ಮತ್ತು ಚಾರಣ ಬಳಗಗಳು ಕೇಂದ್ರ ಸರ್ಕಾರದಿಂದ ತಾಣದ ಸಂರಕ್ಷಣೆ ಮತ್ತು ಪ್ರವಾಸಿ ಸೌಕರ್ಯಗಳ ಅಭಿವೃದ್ಧಿಗೆ ?10 ಕೋಟಿ ಬಜೆಟ್ ಹಂಚಿಕೆ ಮಾಡಬೇಕು. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ತಾಣಕ್ಕೆ ಆಗಮಿಸಿ ಪ್ರಸ್ತುತ ಸ್ಥಿತಿ ನ್ಘ್ತ್ಖಿ್ಫೈ್ದೂ.ಸಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ನಾಮನಿರ್ದೇಶನಕ್ಕೆ ದೀರ್ಘಕಾಲೀನ ಯೋಜನೆ ರೂಪಿಸಬೇಕು ್ಕ್ಲಿ್ದಿಸಿ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ  ಹಿರೇಬೇಣ ಕಲ್ ತಾಣದ  ಪ್ರಚಾರವನ್ನು ಕೈಗೊಳ್ಳಬೇಕು. "ಹಿರೇಬೆಣಕಲ್ಲು ಮಾನವ ನಾಗರಿಕತೆಯ ಆರಂಭಿಕ ಹೆಜ್ಜೆಗಳ ಸಾಕ್ಷಿಯಾಗಿರುವ ರಾಷ್ಟ್ರೀಯ-ಜಾಗತಿಕ ಸಂಪತ್ತು. ಇದರ ಸಂರಕ್ಷಣೆ ನಮ್ಮ ಮತ್ತು ಸರ್ಕಾರಗಳ    ಕರ್ತವ್ಯ," ಎಂದು ಗುಡ್ಲಾನೂರ್   ಮಂಜುನಾಥ್  ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ